ಅಮಿತ್ ಶಾ-ಬಸವರಾಜ ಬೊಮ್ಮಾಯಿ 
ರಾಜ್ಯ

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಅಮಿತ್ ಶಾ ಘೋಷಣೆ

ಕರ್ನಾಟಕದಲ್ಲಿ ಮತ್ತೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ದಾವಣಗೆರೆ: ಕರ್ನಾಟಕದಲ್ಲಿ ಮತ್ತೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಸಂಸದ ಪ್ರಹ್ಲಾದ್ ಜೋಷಿ ಪುತ್ರಿ ವಿವಾಹಕ್ಕೆ ಆಗಮಿಸಿದ್ದ ಅಮಿತ್ ಶಾ ದಾವಣಗೆರೆಯ ಜಿ.ಎಂ.ಐ.ಟಿ ಕ್ಯಾಂಪಸ್‍ನ ಜನಸಭಾ ಸ್ಥಳ ಇಲ್ಲಿ ಆಯೋಜಿಸಿರುವ ಗಾಂಧಿ ಭವನ ಉದ್ಘಾಟನೆ, ಪೊಲೀಸ್ ಪಬ್ಲಿಕ್ ಸ್ಕೂಲ್ ಉದ್ಘಾಟನೆ ಹಾಗೂ ಜಿ.ಎಂ.ಐ.ಟಿ. ಕೇಂದ್ರ ಗ್ರಂಥಾಲಯದ ಉದ್ಘಾಟನೆ ನೆರವೇರಿಸಿ ಜಿಎಂಐಟಿ ಕ್ಯಾಂಪಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕರ್ನಾಟಕ ಸರ್ಕಾರವನ್ನು ಬಹಳ ಸೂಕ್ಷ್ಮವಾಗಿ ದೆಹಲಿಯಲ್ಲಿ ಗಮನಿಸಲಾಗುತ್ತಿದೆ. ಬೊಮ್ಮಾಯಿ ನೇತೃತ್ವದಲ್ಲಿ ಮುಂದೆ ಕರ್ನಾಟಕದಲ್ಲಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮುಂದೆ ಯಾವುದೇ ಮಹಾಮಾರಿ ಬಂದರೂ ಭಾರತದಲ್ಲಿ ಆಕ್ಸಿಜನ್ ಸಮಸ್ಯೆಯಾಗದು. ಸರ್ಕಾರವನ್ನು ಬಹಳ ಸಮರ್ಥವಾಗಿ ನಿಭಾಯಿಸಿದ ಯಡಿಯೂರಪ್ಪ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಹೇಳಿ ಪದತ್ಯಾಗ ಮಾಡುವುದಾಗಿ ಹೇಳಿದಾಗ ಇದಕ್ಕೆ ನಾವು ಒಪ್ಪಿಗೆ ಸೂಚಿಸಿ, ಪಕ್ಷ ಬಸವರಾಜ ಬೊಮ್ಮಾಯಿ ಅವರನ್ನು ಹೊಸ ಸಿಎಂ ಆಗಿ ಮಾಡಿತು ಎಂದರು. 

ಕರ್ನಾಟಕದಲ್ಲಿ ಅಭಿವೃದ್ಧಿಯ ಕಾಲ ಯಡಿಯೂರಪ್ಪರಿಂದಲೇ ಶುರುವಾಯಿತು. ಬೊಮ್ಮಾಯಿ ನೇತೃತ್ವದಲ್ಲಿ ಬಹುಮತದೊಂದಿಗೆ ಮುಂದೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಪಾರದರ್ಶಕ ಆಡಳಿತ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಕರ್ನಾಟಕಕ್ಕೆ ಬರುತ್ತೇನೆ. ಇಲ್ಲಿನ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತೇನೆ ಎಂದು ಅಮಿತ್ ಶಾ ತಿಳಿಸಿದರು.

ಭಾರತ ದೇಶ ಸೇರಿದಂತೆ ಇಡೀ ವಿಶ್ವ ಎಂದೆಂದೂ ಬಾಧಿಸದಂತಹ ಕೊರೋನಾ ಮಾಹಾಮಾರಿಯನ್ನು ಕರ್ನಾಟಕವೂ ಎದುರಿಸುತ್ತಿದೆ. ಮಾನವ ಕುಲಕ್ಕೆ ಇದು ಬಹಳ ಚಾಲೆಂಜಿಂಗ್ ಆಗಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವದಲ್ಲಿ ಎಲ್ಲ‌ದೇಶಕ್ಕಿಂತಲೂ ಯಶಸ್ವಿಯಾಗಿ ಕೊರೋನಾವನ್ನು ಎದುರಿಸಿದೆ. ದೇಶದ ಎಲ್ಲಾ ರಾಜ್ಯಗಳು ಪ್ರಧಾನಿ ಮೋದಿ ಅವರ ಹೆಗಲಿಗೆ ಹೆಗಲುಕೊಟ್ಟು ಕೊರೋನಾ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ. ಕೆಲವರ ಕೊರೋನಾ ತ್ಯಾಗವನ್ನು ದೇಶ ಸ್ಮರಿಸುತ್ತದೆ.ಇದೊಂದು ದೇಶಕ್ಕೆ ಬಹಳ ದೊಡ್ಡ ಚಾಲೆಂಜಾಗಿದ್ದು, ವ್ಯಾಕ್ಸಿನೇಷನ್ ಡ್ರೈವ್ ವಿಶ್ವದಲ್ಲಿ ಹೆಚ್ಚು ವ್ಯಾಕ್ಸಿನೇಷನ್ ನೀಡಿದ ದೇಶ ಭಾರತವಾಗಿದೆ.

ಕರ್ನಾಟಕದಲ್ಲಿ ಮೊದಲ ಅಲೆಯಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಹಳ ಸಮರ್ಥವಾಗಿ ಮಹಾಮಾರಿಯನ್ನು ಎದುರಿಸಿದೆ. ಕರ್ನಾಟಕದಲ್ಲಿ ಈವರೆಗೆ 4 ಕೋಟಿ ಜನರಿಗೆ ಮೊದಲ ಹಾಗೂ 1.20 ಲಕ್ಷ ಜನರಿಗೆ ಎರಡನೇ ಡೋಸ್ ಸೇರಿದಂತೆ ಒಟ್ಟು 5.20 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ವ್ಯಾಕ್ಸಿನ್ ಮಾತ್ರವೇ ಕೊರೋನಾ ವಿರುದ್ಧ ಹೋರಾಡಬಲ್ಲ ಏಕೈಕ ಆಯುಧ. ಒಂದು ಸರ್ಕಾರ ಜನರೊಂದಿಗೆ ಇದ್ದು ಜನರ ಜೊತೆ ಹೋರಾಟ ಮಾಡಲು.

ಕೊರೋನಾ ಮಹಾಮಾರಿಯ ದೊಡ್ಡ ಆಘಾತ ಪರಿಣಾಮ ದಿನಗೂಲಿ ನೌಕರರ ಮೇಲಾಗಿದೆ. 5 ಕೆಜಿ ಯಂತೆ ಪ್ರತಿ ತಿಂಗಳು ಅಕ್ಕಿ ದೀಪಾವಳಿವರೆಗೆ 10 ಕೋಟಿ ಜನರಿಗೆ 10 ತಿಂಗಳ ಉಚಿತ ಅಕ್ಕಿ ನೀಡಲಾಗಿದೆ. ಒಬ್ಬ ಮನುಷ್ಯನಿಂದ ಎಷ್ಟು ಮಾಡಲು ಸಾಧ್ಯವೋ ಒಂದು ಸರ್ಕಾರ ಎಷ್ಟು ಹೋರಾಡಲು ಸಾಧ್ಯವೋ ಅಷ್ಟನ್ನು ನಮ್ಮ‌ಪ್ರಧಾನಿಗಳು ಮತ್ತು ಸರ್ಕಾರ ಮಾಡಿದೆ. ಎಲ್ಲಾ ಇಲಾಖೆಗಳು ಕೊರೋನಾ ವಿರುದ್ಧ ಹೋರಾಡಲು ಎರಡನೇ ಅವಧಿಯಲ್ಲಿ ದೇಶಾದ್ಯಂತ ಆಕ್ಸಿಜನ್ ಪ್ಲಾಂಟ್ ನಿರ್ಮಿಸುವ ಮೂಲಕ ಭಾರತ ಆತ್ಮನಿರ್ಭರ್(ಸ್ವಾವಲಂಬಿ) ದೇಶವಾಗಿದೆ. ಮುಂದೆ ಎಂತಹದ್ದೇ ಮಹಾಮಾರಿ ಬಂದರೂ ದೇಶದಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಸಮರ್ಥವಾಗಿ ನಿಭಾಯಿಸಬಲ್ಲ ಆತ್ಮವಿಶ್ವಾಸ ಮೋದಿ ನೇತೃತ್ವದ ಸರ್ಕಾರಕ್ಕೆ ಬಂದಿದೆ. ಎಲ್ಲರೂ ಅಕ್ಕಪಕ್ಕದ ಸ್ನೇಹಿತ ಬಳಗಕ್ಕೆ ವ್ಯಾಕ್ಸಿನ್ ನೀಡಿಸುವಂತಹ ಕೆಲಸವನ್ನು ಎಲ್ಲರೂ ಸ್ವಯಂ ಪ್ರೇರಿತವಾಗಿ ತೆಗೆದುಕೊಳ್ಳುವಂತೆ ಮಾಡಬೇಕು. ಪಕ್ಷದ ನಾಯಕರೆಲ್ಲ ಜನರಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು ಎಂದು ಅಮಿತ್ ಶಾ ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT