ರಾಜ್ಯ

ಸದ್ಯಕ್ಕೆ 1ನೇ ತರಗತಿಯಿಂದ ಶಾಲೆಗಳ ಆರಂಭವಿಲ್ಲ, ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ: ಸಚಿವ ಡಾ. ಕೆ.ಸುಧಾಕರ್

Sumana Upadhyaya

ಬೆಂಗಳೂರು: ಕೊರೊನಾ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸದ್ಯ ಸಾಲು ಸಾಲು ಹಬ್ಬಗಳಿರುವುದರಿಂದ ಶಾಲೆ ಆರಂಭಿಸದಿರಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇರಳದಲ್ಲಿ ಓಣಂ ಮತ್ತು ಮೊಹರಂ ಹಬ್ಬಗಳ ನಂತರ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಆತಂಕದಿಂದ ನಿಯಮಗಳನ್ನು ಜಾರಿಗೆ ತಂದಿದೆ. ಈ ಮಧ್ಯೆ ಪ್ರಾಥಮಿಕ 5ನೇ ತರಗತಿಯವರೆಗೆ ಶಾಲೆಗಳನ್ನು ಸದ್ಯಕ್ಕೆ ಆರಂಭಿಸುವುದಿಲ್ಲ ಎಂದು ಹೇಳಿದರು.

ಸದ್ಯ ಪ್ರಾಥಮಿಕ ಶಾಲೆ ಆರಂಭದ ಚಿಂತನೆಯೇ ಇಲ್ಲ. ಕೇರಳದಲ್ಲಿ ಕೊರೊನಾ ಏರಿಕೆ ಹಾಗೂ ಅಲ್ಲಿನ ವಿದ್ಯಾರ್ಥಿಗಳಿಂದ ರಾಜ್ಯದಲ್ಲಿ ಕೊವಿಡ್ ಕೇಸ್ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸದ್ಯ 6 ರಿಂದ ಟ್ರಯಲ್ ಮಾಡುತ್ತಾ ಇದ್ದೀವಿ ಅಷ್ಟೇ. ಪ್ರಾಥಮಿಕ ಶಾಲೆಗಳಾದ 1 ರಿಂದ 5 ರವರೆಗೆ ತೆರೆಯಲು ಚಿಂತನೆ ಇಲ್ಲ ಎಂದು ತಿಳಿಸಿದರು. 

6 ರಿಂದ 8ನೇ ತರಗತಿಯವರೆಗೆ ಸೆಪ್ಟೆಂಬರ್ 6ರಿಂದ ಶಾಲೆ ಆರಂಭ:ನಾಡಿದ್ದು ಸೋಮವಾರದಿಂದ 6ರಿಂದ ರಿಂದ 8ನೇ ತರಗತಿಯವರೆಗೆ ಶಾಲೆಗಳು ಆರಂಭವಾಗಲಿವೆ. ಕೊವಿಡ್ ಪಾಸಿಟಿವಿಟಿ ದರ ಶೇಕಡಾಗಿಂತ 2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಮಾತ್ರವಷ್ಟೇ ಶಾಲೆಗಳನ್ನು ಆರಂಭಿಸಲು ನಿರ್ಣಯಿಸಲಾಗಿದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದರು.ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ತಾಲೂಕುಗಳಲ್ಲಿ ಶಾಲೆ ಆರಂಭಿಸಲಾಗುವುದು. ವಾರದಲ್ಲಿ 5 ದಿನ (ಸೋಮವಾರದಿಂದ ಶುಕ್ರವಾರದವರೆಗೆ) ಶಾಲೆ ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಉಳಿದ 2 ದಿನ (ಶನಿವಾರ, ಭಾನುವಾರ) ಶಾಲೆ ಸ್ವಚ್ಛಗೊಳಿಸಲು ಅವಕಾಶವಿರುತ್ತದೆ. ದಿನ ಬಿಟ್ಟು ದಿನ ಮಕ್ಕಳು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಅಂದರೆ, ದಿನ ಬಿಟ್ಟು ದಿನ ಮಕ್ಕಳು ಶಾಲೆಗೆ ಹಾಜರಾಗಬಹುದು ಎಂದು ಸರ್ಕಾರ ನಿರ್ಧರಿಸಿದೆ.

SCROLL FOR NEXT