ರಾಜ್ಯ

ಧಾರವಾಡದ ಐಐಟಿಯಲ್ಲಿನ 'ಮಿತ್ರ' ರೊಬೋಟ್ ಗಳಿಗೆ ದೇಶೀಯ ಭಾಷೆ ಕಲಿಕೆ, ವೃದ್ಧರಿಗೆ ಸಹಕಾರಿ

Srinivas Rao BV

ಹುಬ್ಬಳ್ಳಿ: ವೃದ್ಧರು, ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಹ್ಯುಮನಾಯ್ಡ್ ಗಳಿಗೆ ಐಐಟಿ ಧಾರವಾಡದಲ್ಲಿನ ಹುಬ್ಬಳ್ಳಿ ಕ್ಯಾಂಪಸ್ ನಲ್ಲಿ ಭಾಷೆ ಗುರುತಿಸುವ ವೈಶಿಷ್ಟ್ಯವನ್ನು ಅಳವಡಿಕೆ ಮಾಡಲಾಗುತ್ತಿದೆ.

ಈ ಯೋಜನೆಗಾಗಿ ಐಐಟಿ ಸ್ವಾಯತ್ತ ನ್ಯಾವಿಗೇಷನ್ ಮತ್ತು ಡೇಟಾ ಸ್ವಾಧೀನದಲ್ಲಿ ತಂತ್ರಜ್ಞಾನ ಇನ್ಕ್ಯುಬೇಶನ್ ಹಬ್ ಆಗಿರುವ ಇನ್ವೆಂಟೋ ರೋಬೋಟಿಕ್ಸ್ ಹಾಗೂ ಇತರ ಸಂಸ್ಥೆಗಳೊಂದಿಗೆ ಕೈ ಜೋಡಿಸಿದ್ದು,  ಸ್ವಾಯತ್ತ ನ್ಯಾವಿಗೇಟ್ ಹುಮನಾಯ್ಡ್ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಮಿತ್ರ ರೋಬೋಟ್ ಗಳಿಗೆ ಹೆಚ್ಚಿನ ವೈಶಿಷ್ಟ್ಯ (ಫೀಚರ್)ಗಳನ್ನು ಅಳವಡಿಸುವುದು ಯೋಜನೆಯ ಉದ್ದೇಶವಾಗಿದೆ. 

ಐಐಟಿ,  ಯೋಜನೆಯ ಇನ್ವೆಸ್ಟಿಗೇಟರ್ಸ್ ಪ್ರೊಫೆಸರ್ ಆಗಿರುವ ಡಾ.ಕೆ.ಟಿ ದೀಪಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಇನ್ವೆಂಟೋ ರೊಬೋಟಿಕ್ಸ್ ಮಿತ್ರ ರೋಬೋಟ್ ಗಳನ್ನು ಅಭಿವೃದ್ಧಿಪಡಿಸಿದ್ದು, ಅಮೆರಿಕ ಅಭಿವೃದ್ಧಿಪಡಿಸಿರುವ ಸ್ಪೀಚ್ ರೆಗಗ್ನಿಷನ್ ಪ್ರೋಗ್ರಾಮ್ ನ್ನು ಹೊಂದಿದೆ. 

ಆದರೆ ಅಟಾನಾಮಸ್ ನ್ಯಾವಿಗೇಷನ್ ಹ್ಯೂಮನಾಯ್ಡ್ ಯೋಜನೆಯ ಉದ್ದೇಶ ಸ್ವಂತ ಸ್ಪೀಚ್ ರೆಕಗ್ನಿಷನ್ ಪ್ರೋಗ್ರಾಮ್ ನ್ನು ಹೊಂದುವುದಾಗಿದೆ. ಮೊದಲಿಗೆ ಹಿಂದಿ ಭಾಷೆಯ ಮೇಲೆ ಗಮನ ಹರಿಸುತ್ತೇವೆ ನಂತರದ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಅಳವಡಿಸುತ್ತೇವೆ" ಎಂದು ವಿವರಿಸಿದ್ದಾರೆ.  

ಸ್ಪೀಚ್ ಪ್ರೋಗ್ರಾಮ್ ಪೂರ್ಣಗೊಂಡ ಬಳಿಕ ಸಜೀವ-ನಿರ್ಜೀವಗಳನ್ನು ಗುರುತಿಸುವುದಕ್ಕೆ ಸಾಧ್ಯವಾಗುವ ರೀತಿಯಲ್ಲಿ ಕಂಪ್ಯೂಟರ್ ವಿಷನ್ ಮಾಡ್ಯೂಲ್ ಗಳನ್ನು, ಸೆನ್ಸರ್ ಗಳನ್ನು, ಸ್ಪೀಚ್ ರೆಕಗ್ನಿಷನ್ ಪ್ರೋಗ್ರಾಮ್ ಗಳನ್ನು ಅಳವಡಿಕೆ ಮಾಡಲಾಗುತ್ತದೆ.

ವೃದ್ಧರು, ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಮನೆಯಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕರೆದೊಯ್ಯಲು, ಔಷಧಗಳನ್ನು ಸೇವಿಸುವುದನ್ನು ನೆನಪಿಸಲು ಸಹಕಾರಿಯಾಗಲಿದೆ.

SCROLL FOR NEXT