ಮಹಿಳೆಯೊಬ್ಬರಿಗೆ ಆರೋಗ್ಯ ಕಾರ್ಯಕರ್ತರು ಲಸಿಕೆ ನೀಡುತ್ತಿರುವ ಚಿತ್ರ 
ರಾಜ್ಯ

ಗುಣಮುಖರಾದ ಕೋವಿಡ್ ಸೋಂಕಿತರು 2ನೇ ಡೋಸ್ ಲಸಿಕೆ ತಪ್ಪಿಸಬಾರದು- ಅಧ್ಯಯನ

ನಾರ್ಥ್ ವೆಸ್ಟ್ ಯೂನಿವರ್ಸಿಟಿ ಸಂಶೋಧಕರು ಮಾಡಿರುವ ಹೊಸ ಅಧ್ಯಯನದಲ್ಲಿ ಕೋವಿಡ್-19 ಲಸಿಕೆ ಯಾವ ರೀತಿ ದೇಹಕ್ಕೆ ಸ್ಪಂದಿಸುತ್ತದೆ ಎಂಬುದರ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ

ಬೆಂಗಳೂರು: ನಾರ್ಥ್ ವೆಸ್ಟ್ ಯೂನಿವರ್ಸಿಟಿ ಸಂಶೋಧಕರು ಮಾಡಿರುವ ಹೊಸ ಅಧ್ಯಯನದಲ್ಲಿ ಕೋವಿಡ್-19 ಲಸಿಕೆ ಯಾವ ರೀತಿ ದೇಹಕ್ಕೆ ಸ್ಪಂದಿಸುತ್ತದೆ ಎಂಬುದರ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ. ವಿಶೇಷವಾಗಿ ನೈಸರ್ಗಿಕ ರೋಗ ನಿರೋಧಕ ಶಕ್ತಿ ಮತ್ತು ಹೊಸ ರೂಪಾಂತರಗಳನ್ನು ಹೋಲಿಸಲಾಗಿದೆ. ಇತರ ಸಂಗತಿಗಳಲ್ಲಿ, ಲಸಿಕೆ ಡೋಸ್ ಹಾಕಿಸಿಕೊಳ್ಳದಿದ್ದರೆ ಅಥವಾ  ನೈಸರ್ಗಿಕ ರೋಗ ನಿರೋಧಕ ಶಕ್ತಿಗಾಗಿ ಕಾಯುವುದರಿಂದ ಹೇಗೆ ಹಿನ್ನಡೆಯಾಗಬಹುದು ಎಂಬುದರ ಮೇಲೆ ಈ ಅಧ್ಯಯನ ಬೆಳಕು ಚೆಲ್ಲುತ್ತದೆ.

ಗ್ರಾಮಾಂತರ ಪ್ರದೇಶದಲ್ಲಿನ ಬಹುತೇಕ ಕೋವಿಡ್ ಸೋಂಕಿತರು ಮೊದಲ ಡೋಸ್ ಪಡೆದುಕೊಂಡು ಎರಡನೇ ಡೋಸ್ ತೆಗೆದುಕೊಳ್ಳುತ್ತಿಲ್ಲ, ಇದು ಒಳ್ಳೆಯ ಆಲೋಚನೆ ಅಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಇಂತಹ ಹೆಚ್ಚಿನ ಪ್ರಕರಣಗಳನ್ನು ನಾವು ನೋಡಿದ್ದೇವೆ, ಸ್ವಾಭಾವಿಕ ಸೋಂಕಿತ ಮತ್ತು ಲಸಿಕೆ-ಪ್ರೇರಿತ ಪ್ರತಿಜನಕ ಬೆಳವಣಿಗೆ ನಡುವೆ ವ್ಯತ್ಯಾಸವಿದೆ ಎಂದು ಅನೇಕ ಜನರಿಗೆ ತಿಳಿದಿಲ್ಲ. ಲಸಿಕೆ-ಪ್ರೇರಿತವಾದವು ಹೆಚ್ಚಿನ ಇಮ್ಯುನೊಜೆನಿಕ್ ಪ್ರತಿಕ್ರಿಯೆಯನ್ನು ಹೊಂದಿದೆ.

ನಾವು ಖಂಡಿತವಾಗಿಯೂ ಎರಡನೇ ಡೋಸ್ ಅನ್ನು ತಪ್ಪಿಸಿಕೊಳ್ಳಬಾರದು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

ಕುತೂಹಲವೆಂದರೆ, ಕೋವಿಡ್-19 ತಡೆಗೆ ಮತ್ತು ರೋಗಕ್ಕೆ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಸೂಕ್ತವೆಂಬ ತಪ್ಪು ನಂಬಿಕೆ ಅಡಿಯಲ್ಲಿ ಕೆಲವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಾಯುವ್ಯ ವಿಶ್ವವಿದ್ಯಾನಿಲಯದ ಅಧ್ಯಯನದಲ್ಲಿ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಅಧ್ಯಯನವನ್ನು ಒಪ್ಪುವ ಡಾ. ಮಂಜುನಾಥ್, ಸಾರ್ಸ್ ಕೋವ್-2 ವೈರಸ್ ಸಾಂಕ್ರಾಮಿಕ, ಸ್ವಯಂಚಾಲಿತವಾಗಿ ರೋಗಿಗೆ ಉನ್ನತ ಮಟ್ಟದ ರಕ್ಷಣಾತ್ಮಕ ಪ್ರತಿಕಾಯಗಳನ್ನು ಖಾತರಿಪಡಿಸುವುದಿಲ್ಲ ಎಂದಿದ್ದಾರೆ.  ಕೋವಿಡ್ ಸಾಂಕ್ರಾಮಿಕದಿಂದ ಗುಣಮುಖರಾದವರು ಮೊದಲ ಡೋಸ್ ಪಡೆದು ಮೈ ಮರೆಯಬಾರದು, ಖಂಡಿತವಾಗಿ ಎರಡನೇ ಡೋಸ್ ಪಡೆಯಬೇಕು ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ 3.35 ಕೋಟಿ ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದರೆ  ಕೇವಲ 1.11 ಕೋಟಿ ಜನರು ಮಾತ್ರ ಎರಡನೇ ಡೋಸ್ ಪಡೆದಿದ್ದಾರೆ. ಸೋಂಕು ಕಾಣಿಸಿಕೊಂಡ ನಂತರ ಅನೇಕ ಮಂದಿ ಎರಡನೇ ಡೋಸ್ ಪಡೆಯುತ್ತಿಲ್ಲ, ಕೆಲವರಿಗೆ ದಿನಾಂಕವನ್ನೇ ಮರಯುತ್ತಿದ್ದಾರೆ. ಎರಡನೇ ಡೋಸ್ ಪಡೆಯುವಂತೆ ಜನರಿಗೆ ಆಗಾಗ್ಗೆ ಹೇಳುತ್ತಿರುವುದಾಗಿ ಆರೋಗ್ಯಾ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ