ರಾಜ್ಯ

ಬೆಂಗಳೂರು: ಬೃಹತ್ ಕೋವಿಡ್ ಲಸಿಕಾ ಕೇಂದ್ರಕ್ಕೆ ಬಿಬಿಎಂಪಿ ಚಾಲನೆ

Manjula VN

ಬೆಂಗಳೂರು: ಸಂಪೂರ್ಣ ಲಸಿಕಾಕರಣದ ಉದ್ದೇಶದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ಬೃಹತ್ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಯಲಹಂಕ ವಲಯ ವ್ಯಾಪ್ತಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಿರುವ ಬೃಹತ್ ಲಸಿಕಾ ಕೇಂದ್ರಕ್ಕೆ ಬಿಬಿಎಂಪಿ ಬುಧವಾರ ಚಾಲನೆ ನೀಡಿದೆ.

ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಶಾಸಕ ಎಸ್.ಆರ್.ವಿಶ್ವನಾಥ್ ಅವರು ನೂತನ ಬೃಹತ್ ಕೋವಿಡ್ ಸಿಕಾ ಕೇಂದ್ರವನ್ನು ಉದ್ಘಾಟಿಸಿದರು. 

ಬಳಿಕ ಮಾತನಾಡಿರುವ ಗೌರವ್ ಗುಪ್ತಾ ಅವರು, ಬಿಬಿಎಂಪಿ ಮತ್ತು ಕೇರ್ ಇಂಡಿಯಾ ಸಂಸ್ಥೆಯ ಸಹಭಾಗಿತ್ವದಲ್ಲಿ ಕೋವಿಡ್-19 ಸೋಂಕನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರು ಉಚಿತವಾಗಿ ಕೋವಿಡ್ ಲಸಿಕೆಗಳನ್ನು ನೀಡಲು ಬೃಹತ್ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. 

ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಯಲಹಂಕ ವಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನ, ಪೂರ್ವ ವಲಯದಲ್ಲಿ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಹಿಂಭಾಗದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಮತ್ತು ಪಶ್ಚಿಮ ವಲಯದಲ್ಲಿ ಮಲ್ಲೇಶ್ವರದ ಯಂಗ್ ಸ್ಟರ್ ಕಬ್ಬಡಿ ಕ್ಲಬ್ ಮೈದಾನದಲ್ಲಿ ಬೃಹತ್ ಲಸಿಕಾ ಕೇಂದ್ರ ಆರಂಭಿಸಲಾಗಿದೆ ಎಂದು ತಿಳಿಸಿದರು. 

ಕೊಳಚೆ ನಿವಾಸಿಗಳು ಹಾಗೂ ಕಡಿಮೆ ಆದಾಯವುಳ್ಳ ಜನರಿಗೆ ಲಸಿಕೆ ನೀಡುವ ಸಲುವಾಗಿ ವಿಶೇಷ ಶಿಬಿರಗಳನ್ನು ಶೀಘ್ರದಲ್ಲೇ ಆಯೋಜಿಸಲಾಗುತ್ತದೆ. ಹೆಚ್ಚೆಚ್ಚು ಜನರನ್ನು ತಲುಪುವ ಸಲುವಾಗಿ ಈಗಾಗಲೇ ಅಪಾರ್ಟ್'ಮೆಂಟ್ ಸಂಕೀರ್ಣ ಹಾಗೂ ಸ್ಥಳೀಯ ನಿವಾಸಿ ಕಲ್ಯಾಣ ಸಂಘಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಈ ಕೇಂದ್ರಗಳು ವಾಕ್-ಇನ್ ಮತ್ತು ಡ್ರೈವ್-ಇನ್ ಕ್ಯಾಂಪ್‌ಗಳಾಗಿರಲಿದ್ದು, ಬೆಳಿಗ್ಗೆ 6 ಗಂಟೆ ಇಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದ್ದಾರೆ. 

SCROLL FOR NEXT