ರಾಜ್ಯ

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

Shilpa D

ಬೆಂಗಳೂರು: ದೇಶಾದ್ಯಂತ ಶುಕ್ರವಾರ ಗಣೇಶ ಚತುರ್ಥಿಯ ಸಂಭ್ರಮ. ಹಬ್ಬದ ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಜನತೆಗೆ ಶುಭ ಕೋರಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಶುಭಕೋರಿದ್ದು, ನಿಮ್ಮೆಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು. ನಿಮ್ಮೆಲ್ಲರಿಗೂ ಜೀವನದಲ್ಲಿ ಸುಖ, ಶಾಂತಿ, ಸೌಭಾಗ್ಯ ಮತ್ತು ಆರೋಗ್ಯ ತರಲಿ. ಗಣಪತಿ ಬಪ್ಪಾ ಮೋರೆಯಾ ಎಂದು ಟ್ವೀಟ್ ಮಾಡಿದ್ದಾರೆ.

ಗಣೇಶ ಚತುರ್ಥಿ ಪ್ರಯುಕ್ತ ರಾಷ್ಟ್ರದ ಜನರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭಾಶಯಗಳನ್ನು ತಿಳಿಸಿದ್ದಾರೆ. ‘ಕೋವಿಡ್ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಜನ ಹಬ್ಬ ಆಚರಿಸಬೇಕು‘ ಎಂದು ಅವರು ಕರೆ ನೀಡಿದ್ಧಾರೆ. ‘ಜ್ಞಾನ, ಸಮೃದ್ಧಿ ಹಾಗೂ ಅದೃಷ್ಟದ ಸಂಕೇತವಾದ ಗಣೇಶ ಹಬ್ಬವು ಸಂಭ್ರಮದಿಂದ ಕೂಡಿದ್ದು, ಈ ವರ್ಷ ಗಣೇಶ ಚತುರ್ಥಿಯ ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಹೋರಾಟವನ್ನು ಯಶಸ್ವಿಗೊಳಿಸಲು ಮತ್ತು ನಮ್ಮೆಲ್ಲರಿಗೂ ಸಂತೋಷ ಹಾಗೂ ಶಾಂತಿಯನ್ನು ದಯಪಾಲಿಸಲು ನಾವು ಗಣೇಶನನ್ನು ಪ್ರಾರ್ಥಿಸೋಣ‘ ಎಂದು ರಾಷ್ಟ್ರಪತಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಟ್ವೀಟ್ ಮಾಡಿದ್ದು, ‘ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು. ದೇಶದ ಜನರಿಗೆ ಗಣೇಶ ಹಬ್ಬದ ಶುಭಾಶಯ ತಿಳಿಸಿದ ರಾಷ್ಟ್ರಪತಿ ಶ್ರೀ ಗಣಪತಿಯ ಕೃಪೆ ನಾಡಿನ ಮೇಲೆ ಸದಾ ಇರಲಿ, ಎದುರಾಗಿರುವ ಸಾಂಕ್ರಾಮಿಕದ ಸಂಕಷ್ಟಗಳೂ ಸೇರಿದಂತೆ, ಎಲ್ಲ ಕಷ್ಟ ಆತಂಕಗಳನ್ನು ದೂರಮಾಡಲಿ, ಜನರಿಗೆ ಆರೋಗ್ಯ, ಯಶಸ್ಸು, ಸಂತೋಷ ಸಮೃದ್ಧಿಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಶುಭಹಾರೈಸಿದ್ದಾರೆ.

SCROLL FOR NEXT