ರಾಜ್ಯ

ಹುಬ್ಬಳ್ಳಿ: ಲಸಿಕಾ ಕೇಂದ್ರದಲ್ಲಿ ಆರೋಗ್ಯ ಸೇವೆ ಕಾರ್ಯಕರ್ತೆ ಮೇಲೆ ಮಹಿಳೆಯಿಂದ ಹಲ್ಲೆ, ಗಾಯ 

Sumana Upadhyaya

ಹುಬ್ಬಳ್ಳಿ: ಕೋವಿಡ್-19 ಸಾಂಕ್ರಾಮಿಕ ಬಂದ ಮೇಲೆ ದೇಶದ ಅಲ್ಲಲ್ಲಿ ವೈದ್ಯರು ಮತ್ತು ಇತರ ವೈದ್ಯಕೀಯ ಸೇವಾ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವ ಪ್ರಕರಣ ಸಾಕಷ್ಟು ಆಗಿವೆ.

ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಯ ಲಸಿಕಾ ಕೇಂದ್ರದಲ್ಲಿ ಆರೋಗ್ಯ ಸೇವೆ ಕಾರ್ಯಕರ್ತೆ ಮೇಲೆ ಹಲ್ಲೆ ನಡೆದಿರುವ ಪ್ರಕರಣ ಇಂದು ನಡೆದಿದ್ದು ಮಹಿಳೆ ಹಲ್ಲೆ ನಡೆಸಿದ್ದು ವಿಶೇಷವಾಗಿದೆ.

ಘಟನೆಯಲ್ಲಿ ಸಿಬ್ಬಂದಿಯ ತುಟಿಯ ಮೇಲ್ಬಾಗ ಗಂಭೀರವಾಗಿ ಗಾಯವಾಗಿದ್ದು ರಕ್ತ ಸುರಿದಿದೆ. ಘಟನೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಸಬಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

SCROLL FOR NEXT