ಸದನದಲ್ಲಿ ಮಾತುಕತೆ ನಡೆಸುತ್ತಿರುವ ಶಾಸಕರು 
ರಾಜ್ಯ

ಆನ್‌ಲೈನ್‌ ಜೂಜು ನಿಷೇಧಕ್ಕೆ ಮಸೂದೆ: ಆರೋಪ ಸಾಬೀತಾದವರಿಗೆ 3 ವರ್ಷ ಜೈಲು ಶಿಕ್ಷೆ!

ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ನಿಷೇಧಿಸುವ ಪ್ರತಿಬಂಧಕ ಕಾಯ್ದೆಯ ಮಸೂದೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದರು.

ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ನಿಷೇಧಿಸುವ ಪ್ರತಿಬಂಧಕ ಕಾಯ್ದೆಯ ಮಸೂದೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದರು.

ಬಳಿಕ ಮಾತನಾಡಿದ ಅವರು, ಆನ್‌ಲೈನ್‌ ಜೂಜು ನಿಷೇಧದ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ಈ ಮಸೂದೆಯು ಲಾಟರಿ, ಕುದುರೆ ರೇಸ್‌ಗಳಿಗೆ ಅನ್ವಯವಾಗುವುದಿಲ್ಲ. ಮೊಬೈಲ್‌, ಕಂಪ್ಯೂಟರ್‌ ಮತ್ತಿತರ ಆನ್‌ಲೈನ್‌ ಜೂಜಾಟ ಮತ್ತು ಬೆಟ್ಟಿಂಗ್‌ಗಳಿಗೆ ಅನ್ವಯವಾಗಲಿದೆ ಎಂದು ಹೇಳಿದರು. 

ಕಾನೂನು ಉಲ್ಲಂಘಿಸಿ ಆನ್‌ಲೈನ್‌ ಜೂಜಿನಲ್ಲಿ ತೊಡಗುವವರು, ಅವರಿಗೆ ಸಹಾಯ ಮಾಡುವವರು ಮತ್ತು ಆಶ್ರಯ ನೀಡುವವರಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ರೂ.10 ಸಾವಿರ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಕಾಯ್ದೆಯಲ್ಲಿ ಜೂಜಾಟದಲ್ಲಿ ತೊಡಗಿದ ಆರೋಪ ಸಾಬೀತಾದವರಿಗೆ 3 ವರ್ಷ ಜೈಲು ಶಿಕ್ಷೆ, ಕನಿಷ್ಠ 25 ಸಾವಿರದಿಂದ ಗರಿಷ್ಟ ರೂ.1 ಲಕ್ಷ ವರೆಗೆ ದಂಡ ವಿಧಿಸುವ ಅಂಶವಿದೆ. ಸದ್ಯ ಇಂತಹ ಅಪರಾಧಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ ರೂ.1 ಸಾವಿರ ದಂಡವಿದೆ. 

ಆನ್'ಲೈನ್ ಜೂಜು, ಆನ್'ಲೈನ್ ಗೇಮ್ ಗಳ ಮೂಲಕ ಆಡುವ ಜೂಜು, ಬೆಟ್ಟಿಂಗ್ ಗಳಿಗೆ ಕಡಿವಾಣ ಹಾಕುವ ಸಲುವಾಗಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಹಿಂದೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿತ್ತು. 

ಅದರಂತೆ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆಯಲ್ಲಿ ಆನ್'ಲೈನ್ ಜೂಜನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಲ್ಲದೆ, ಜಾಮೀನು ರಹಿತ ಅಪರಾಧವನ್ನಾಗಿ ಪರಿಗಣಿಸಲು ಅವಕಾಶ ಕಲ್ಪಿಸಿದ್ದು, ವಿಧೇಯಕದ ಬಗ್ಗೆ ಉಭಯ ಸದನಗಳಲ್ಲಿ ಚರ್ಚೆಯಾಗ ಬಳಿಕ ಅಂಗೀಕಾರವಾಗಬೇಕಿದೆ. ಆನ್'ಲೈನ್ ಗೇಮ್ ಗಳು ಎಂದರೆ, ಹಣ ಅಥವಾ ಟೋಕನ್ ರೂಪದಲ್ಲಿ ಜೂಜು ಕಟ್ಟಿ ಆಡುವ ಎಳ್ಲಾ ರೀತಿಯ ಗೇಮ್ ಗಳು ನಿಷೇಧಗೊಳ್ಳಲಿವೆ. 

ಗೇಮ್ ಗೆ ಮೊದಲು ಅಥವಾ ನಂತರ ಹಣ ಪಾವತಿಸುವುದು. ಕೇವಲ ಹಣ ಮಾತ್ರವಲ್ಲದೆ ಮೌಲ್ಯ ಹೊಂದಿರುವ ವರ್ಚುಯಲ್ ಕರೆನ್ಸಿ, ಫಂಡ್ ಟ್ರಾನ್ಸ್ ಫರ್ ಸೇರಿದಂತೆ ಎಲ್ಲಾ ರೀತಿಯ ಜೂಜು ಆಧಾರಿತ ಹಣಕಾಸು ವ್ಯವಹಾರಗಳಿಗೂ ನಿಷೇಧ ಹೇರಲಾಗಿದೆ. 

ಆನ್'ಲೈನ್ ನಲ್ಲಿ ಆಡುವ ಪಂದ್ಯಗಳು, ಮೊಬೈಲ್ ಆ್ಯಪ್ ಮೂಲಕ ಆಡುವ ಆಟಗಳು, ಕಂಪ್ಯೂಟರ್, ಇಂಟರ್ ನೆಟ್, ಯಾವುದೇ ಸಂವಹನ ಸಾಧನ ಮೂಲಕ ವರ್ಚುಯಲ್ ವೇದಿಕೆಯಲ್ಲಿ ಆಡುವ ಎಲ್ಲಾ ಗೇಮ್ ಗಳು ಇದರ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. 

ಹೀಗಾಗಿ ರಾಜ್ಯದಲ್ಲಿ ಆನ್'ಲೈನ್ ಕ್ಯಾಸಿನೊ, ಡ್ರೀಮ್ ಇಲೆವೆನ್, ರಮ್ಮಿ ಸರ್ಕಲ್, ಜಂಗ್ಲಿ ರಮ್ಮಿಯಂತಹ ಆನ್'ಲೈನ್ ಜೂಜು ಆಟಗಳಿಗೆ ನಿರ್ಬಂಧ ಉಂಟಾಗುವ ಸಾಧ್ಯತೆ. ಅಲ್ಲದೆ, ಆನ್'ಲೈನ್ ಮೂಲಕ ನಡೆಯುವ ಕ್ರಿಕೆಟ್ ಸೇರಿದಂತೆ ಕ್ರೀಡಾ ಬೆಟ್ಟಿಂಗ್ ಗಳಿಗೂ ಕಡಿವಾಣ ಬೀಳಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT