ಸಾಂದರ್ಭಿಕ ಚಿತ್ರ 
ರಾಜ್ಯ

ಎಂಜಿನೀಯರಿಂಗ್ ಕೋರ್ಸ್ ಸೇರುವ ಸಿಇಟಿ ವಿದ್ಯಾರ್ಥಿಗಳಿಗೆ ಈ ವರ್ಷ ಕಟಾಫ್ ಮಾರ್ಕ್ಸ್ ಇಲ್ಲ!

ಎಂಜಿನೀಯರಿಂಗ್ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಈ ವರ್ಷ ಸಿಇಟಿ ಕಟಾಫ್ ಮಾರ್ಕ್ಸ್ ಇರುವುದಿಲ್ಲ, ಈ ವರ್ಷ ಎಂಜಿನೀಯರಿಂಗ್ ಕೋರ್ಸ್ ಗೆ ಸೇರಲು ಸುಮಾರು 1.83 ಲಕ್ಷ ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ.

ಬೆಂಗಳೂರು: ಎಂಜಿನೀಯರಿಂಗ್ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಈ ವರ್ಷ ಸಿಇಟಿ ಕಟಾಫ್ ಮಾರ್ಕ್ಸ್ ಇರುವುದಿಲ್ಲ, ಈ ವರ್ಷ ಎಂಜಿನೀಯರಿಂಗ್ ಕೋರ್ಸ್ ಗೆ ಸೇರಲು ಸುಮಾರು 1.83 ಲಕ್ಷ ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ.

ಹಿಂದಿನ ವರ್ಷಕ್ಕಿಂತ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಸಚಿವ ಸಿಎನ್ ಅಶ್ವತ್ಥ
ನಾರಾಯಣ ತಿಳಿಸಿದ್ದಾರೆ. ಆಗಸ್ಟ್ 28 ರಿಂದ 30ರವೆರೆಗೆ ರಾಜ್ಯದಾದ್ಯಂತ 530 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆದಿತ್ತು. ಸುಮಾರು 2,01,834 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು 1,93,447 ವಿದ್ಯಾರ್ಥಿಗಳು ಹಾಜರಾಗಿದ್ದರು.

ರಾಜ್ಯದ 1.09 ಲಕ್ಷ ಎಂಜಿನಿಯರಿಂಗ್ ಸೀಟುಗಳಲ್ಲಿ, ಸರ್ಕಾರವು 54,000 ಸೀಟುಗಳನ್ನು ಸಿಇಟಿ ಮೂಲಕ ಭರ್ತಿ ಮಾಡುತ್ತದೆ ಎಂದು ಅವರು ಹೇಳಿದರು. ಕಳೆದ ವರ್ಷ 20,000 ಸೀಟುಗಳು ಖಾಲಿ ಇದ್ದವು. ಈ ವರ್ಷ, ಕೋರ್ಸ್ ಸೇರಲು ಸಿಇಟಿ ಅಂಕ ಮಾತ್ರ ಆಧರಿಸಿವೆ ಮತ್ತು 12 ನೇ ತರಗತಿ ಪರೀಕ್ಷೆಯ ಅಂಕಗಳು ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಈ ವರ್ಷ ಎಂಜಿನೀಯರಿಂಗ್ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಯಾವುದೇ ಕಟಾಫ್ ಮಾರ್ಕ್ಸ್ ಇರುವುದಿಲ್ಲ ಎಂದು ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದರು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

ಪರೀಕ್ಷೆ ಬರೆದಿದ್ದ 12 ಕೋವಿಡ್-ಪಾಸಿಟಿವ್ ವಿದ್ಯಾರ್ಥಿಗಳಲ್ಲಿ, ಇಬ್ಬರು ಇಂಜಿನಿಯರಿಂಗ್‌ನಲ್ಲಿ ಉನ್ನತ ಶ್ರೇಣಿಗಳನ್ನು ಪಡೆದಿದ್ದಾರೆ. ಹಾಸನದ ಇಮ್ರಾನ್ ಅಹ್ಮದ್ 2193 ರ‍್ಯಾಂಕ್ ಪಡೆದರು, ಮತ್ತು ಅಭಿನವ್ ಹೆಬ್ಬಾರ್ 2266  ರ್ಯಾಂಕ್ ಪಡೆದಿದ್ದಾರೆ.

ಮುಂದಿನ ಹಂತದ ಪ್ರವೇಶಾತಿ-ದಾಖಲೆ ಪರಿಶೀಲನೆ-ಸೆಪ್ಟೆಂಬರ್ 30 ರಂದು  ಆಯಾ ಜಿಲ್ಲಾ ಕೇಂದ್ರದಲ್ಲಿ ಆರಂಭವಾಗಲಿದ್ದು, ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.

7 ಸಾವಿರ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ, ಏಕೆಂದರೆ ಸುಮಾರು 6 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂಕಪಟ್ಟಿ ಸಲ್ಲಿಸದಿರುವುದೇ ಪ್ರಮುಖ ಕಾರಣ, ಎಂಜಿನೀಯರಿಂಗ್ ಕೋರ್ಸ್ ಶುಲ್ಕ ಏರಿಕೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದ ಅವರು ಈ ಸಂಬಂಧ ಸೆಪ್ಚಂಬರ್ 27 ರಂದು ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT