ವಿಧಾನಸೌಧದಲ್ಲಿ ಸಾರ್ವಜನಿಕರ ಭದ್ರತಾ ಪರಿಶೀಲನೆ 
ರಾಜ್ಯ

ವಿಧಾನಸೌಧ, ವಿಕಾಸಸೌಧದಲ್ಲಿ ಭದ್ರತೆಯ ಕೊರತೆ: ಹಲವು ಸ್ಕ್ಯಾನರ್ ಗಳು, ಸಿಸಿಟಿವಿ ಕ್ಯಾಮರಾಗಳು ದುರಸ್ತಿ ಸ್ಥಿತಿಯಲ್ಲಿ!

ಕೋವಿಡ್-19 ಲಾಕ್ ಡೌನ್ ಸಡಿಲವಾಗುತ್ತಿದೆ, ಸಾರ್ವಜನಿಕರಿಗೆ ರಾಜ್ಯದ ಅಧಿಕಾರ ಶಕ್ತಿಕೇಂದ್ರ ವಿಧಾನಸೌಧಕ್ಕೆ ಪ್ರವೇಶ ಸಿಗುತ್ತಿದೆ. ಈ ಮಧ್ಯೆ ವಿಧಾನಮಂಡಲದ 10 ದಿನಗಳ ಕಲಾಪ ನಡೆಯುತ್ತಿದೆ.

ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಸಡಿಲವಾಗುತ್ತಿದೆ, ಸಾರ್ವಜನಿಕರಿಗೆ ರಾಜ್ಯದ ಅಧಿಕಾರ ಶಕ್ತಿಕೇಂದ್ರ ವಿಧಾನಸೌಧಕ್ಕೆ ಪ್ರವೇಶ ಸಿಗುತ್ತಿದೆ. ಈ ಮಧ್ಯೆ ವಿಧಾನಮಂಡಲದ 10 ದಿನಗಳ ಕಲಾಪ ನಡೆಯುತ್ತಿದೆ.

ಆದರೆ ವಿಧಾನಸೌಧದಲ್ಲಿ ಭದ್ರತೆಯೇ ಮುಖ್ಯ ಸಮಸ್ಯೆಯಾಗಿದೆ. ವಿಧಾನಸೌಧದ 4 ಪ್ರವೇಶದ್ವಾರಗಳಲ್ಲಿ ಮೂರು ಕಡೆಗಳಲ್ಲಿ ಬ್ಯಾಗೇಜ್ ಸ್ಕ್ಯಾನರ್‌ಗಳು ದುರಸ್ತಿ ಸ್ಥಿತಿಯಲ್ಲಿವೆ. ಇನ್ನು ವಿಕಾಸಸೌಧದಲ್ಲಿ ಕೂಡ ಎರಡು ಬ್ಯಾಗೇಜ್ ಸ್ಕಾನರ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಸಹ ಕೆಲಸ ಮಾಡುತ್ತಿಲ್ಲ. ಈ ಸಾಧನಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರ ಅವಧಿ ಮುಕ್ತಾಯವಾಗಿದ್ದು, ಬೇರೆ ಏಜೆನ್ಸಿಗಳನ್ನು ಗುರುತಿಸಿ ಅವರಿಗೆ ಕೆಲಸ ನಿರ್ವಹಣೆಯನ್ನು ನೀಡಿಲ್ಲ. ಇದರಿಂದ ಭದ್ರತೆಯೇ ಮುಖ್ಯ ಸಮಸ್ಯೆಯಾಗಿದೆ.

2019ರಲ್ಲಿ ಬೆಂಗಳೂರು ನಗರ ಪೊಲೀಸರು ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್, ಶಾಸಕರ ಭವನ, ರಾಜ್ಯ ಮಾನವ ಹಕ್ಕುಗಳ ಆಯೋಗ, ಮಹಿತಿ ಸೌಧ ಮತ್ತು ಕರ್ನಾಟಕ ಮಾಹಿತಿ ಆಯೋಗದ ಭದ್ರತೆ ಹೆಚ್ಚಿಸುವಂತೆ ಸಲಹೆ ನೀಡಿದ್ದರು. ಇನ್ನಷ್ಟು ಹೆಚ್ಚು ಎಕ್ಸ್ ರೇ ಬ್ಯಾಗೇಜ್ ಸ್ಕ್ಯಾನರ್ಸ್, ಸುಧಾರಿತ ವೈಶಿಷ್ಟ್ಯಗಳೊಂದಿಗೆ ಡೋರ್‌ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳು ಮತ್ತು ಹ್ಯಾಂಡ್‌ಹೆಲ್ಡ್ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸುವಂತೆ ಸೂಚಿಸಿದ್ದರು. ಆದರೆ ಎರಡು ವರ್ಷಗಳಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

ವಿಧಾನಸೌಧದಲ್ಲಿ ಬ್ಯಾಗೇಜ್ ಸ್ಕ್ಯಾನರ್‌ಗಳು ಕೆಂಗಲ್ ಹನುಮಂತಯ್ಯ ಪ್ರವೇಶದ್ವಾರದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಭದ್ರತಾ ಸಿಬ್ಬಂದಿಯು ಸಂದರ್ಶಕರ ಚೀಲಗಳನ್ನು ಹಸ್ತಚಾಲಿತವಾಗಿ ಪರೀಕ್ಷಿಸಲು ಅಥವಾ ಇತರ ಪ್ರವೇಶದ್ವಾರಗಳಲ್ಲಿ ಹ್ಯಾಂಡ್ಹೆಲ್ಡ್ ಲೋಹದ ಶೋಧಕಗಳನ್ನು ಬಳಸಲು ಒತ್ತಾಯಿಸಲಾಗುತ್ತದೆ. "ದೋಷಯುಕ್ತ ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಸರಿಪಡಿಸಲು ಪರಿಣತಿಯ ಅಗತ್ಯವಿದೆ. ಮನೆಯೊಳಗಿನ ಸಿಬ್ಬಂದಿಗಳು ಸಣ್ಣಪುಟ್ಟ ರಿಪೇರಿಗಳನ್ನು ಮಾಡಬಹುದಷ್ಟೆ'' ಎಂದು ವಿಧಾನಸೌಧದೊಳಗೆ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ವಿಕಾಸಸೌಧದಲ್ಲಿ ಕೂಡ ಇದೇ ಪರಿಸ್ಥಿತಿ: ದುರಸ್ತಿಯಲ್ಲಿರುವ ಈ ಸಾಧನಗಳನ್ನು ಪುನಃ ಕಾರ್ಯನಿರ್ವಹಿಸುವಂತೆ ಮಾಡಲು ಪೂರ್ಣ ಪ್ರಮಾಣದ ತಂತ್ರಜ್ಞರ ಅಗತ್ಯವಿದೆ. ನಿರ್ವಹಣೆಯ ಉಸ್ತುವಾರಿಯಲ್ಲಿದ್ದ ಏಜೆನ್ಸಿಯ ಅವಧಿ ಕೆಲವು ತಿಂಗಳ ಹಿಂದೆ ಮುಗಿದಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ವಿಕಾಸ ಸೌಧದಲ್ಲಿಯೂ ಇದೇ ಪರಿಸ್ಥಿತಿ ಇದೆ, ಹಲವಾರು ಮಂತ್ರಿಗಳ ಕಚೇರಿಗಳು ಒಂದೇ ಬ್ಯಾಗೇಜ್ ಸ್ಕಾನರ್ ನೊಂದಿಗೆ ಕೆಲಸ ಮಾಡುತ್ತವೆ.

ಪೊಲೀಸ್ ಇಲಾಖೆ ಬ್ಯಾಗೇಜ್ ಸ್ಕ್ಯಾನರ್‌ಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರೆ, ಲೋಕೋಪಯೋಗಿ ಇಲಾಖೆ ವಿಧಾನ ಸೌಧ ಮತ್ತು ವಿಕಾಸ ಸೌಧಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ನಿರ್ವಹಣೆಗೆ ಟೆಂಡರ್‌ಗಳನ್ನು ನೀಡುತ್ತದೆ. ಕರ್ನಾಟಕ ರಾಜ್ಯ ಸೆಕ್ರೆಟರಿಯೇಟ್ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಅಧಿಕಾರ ಶಕ್ತಿಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಭದ್ರತೆಯನ್ನು ಹೆಚ್ಚಿಸಲು ಈಗ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ರಾಜ್ಯದ ಶಕ್ತಿ ಕೇಂದ್ರದಲ್ಲಿ ಭದ್ರತೆ ಬಿಗಿಯಾಗಿರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ವಿಧಾನಸೌಧದ ಹಿರಿಯ ಪೊಲೀಸ್ ಅಧಿಕಾರಿಯನ್ನು ಕೇಳಿದಾಗ, ಇದು ಭದ್ರತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ನಾವು ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಷ್ಟೇ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT