ರಾಜ್ಯ

ಕೊಡಗು: ಗ್ರಾಮೀಣ ಡಿಜಿಟಲ್ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಚೆಸ್ ಕಲಿಕೆ 

Srinivas Rao BV

ಮಡಿಕೇರಿ: ಚೆಸ್ ಒಲಂಪಿಯಾಡ್ ನಿಂದ ಪ್ರೇರಣೆ ಪಡೆದು ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಲ್ಲಿ ಚೆಸ್ ಕಲಿಕೆಯನ್ನು ಉತ್ತೇಜಿಸಲು ಮುಂದಾಗಿದೆ.
 
ಗ್ರಂಥಾಲಯಗಳಲ್ಲಿ ಒಳಾಂಗಣ ಬೋರ್ಡ್ ಗೇಮ್ ಗಳನ್ನು ಪರಿಚಯಿಸಲು ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದ್ದು, ಜಿಲ್ಲೆಯಾದ್ಯಂತ ಡಿಜಿಟಲ್ ಗ್ರಂಥಾಲಯಗಳಲ್ಲಿ ಪರಿಚಯವಾಗಿರುವ ಚದುರಂಗವನ್ನು ಕೊಡಗು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈಗ ಕಲಿಯುತ್ತಿದ್ದಾರೆ. ಪ್ರತಿಯೊಂದು ಶಾಲೆಗೂ ಗ್ರಂಥಾಲಯ ಅವಧಿ ಇದ್ದು, ಈ ಅವಧಿಯನ್ನು ಕೊಡಗು ಜಿಲ್ಲಾ ಪಂಚತ್ ನ ಶ್ರಮದಿಂದಾಗಿ ಉತ್ತಮವಾಗಿ ಬಳಸಿಕೊಳ್ಳಲಾಗುತ್ತಿದೆ. 

ಈಗ ನಡೆಯುತ್ತಿರುವ ಚೆಸ್ ಒಲಂಪಿಯಾಡ್ ಜೊತೆ ಜೊತೆಗೇ ಡಿಜಿಟಲ್ ಗ್ರಂಥಾಲಯಗಳಲ್ಲಿ ಚೆಸ್ ನ್ನು ಪರಿಚಯಿಸಲಾಗಿದ್ದು, ಹಲವು ವಿದ್ಯಾರ್ಥಿಗಳು ಇದರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಬನ್ವಾರ್ ಸಿಂಗ್ ಮೀನಾ ಹೇಳಿದ್ದಾರೆ.

ಡಿಜಿಟಲ್ ಲೈಬ್ರರಿಗಳನ್ನು ಸಾಮಾಜಿಕ ಸ್ಥಳವನ್ನಾಗಿ ಉತ್ತೇಜಿಸಲಾಗುತ್ತಿದ್ದು, ಕೇರಂ ಮತ್ತು ಚೆಸ್ ಮುಂತಾದ ಒಳಾಂಗಣ ಗೇಮ್ ಗಳನ್ನು ಪರಿಚಯಿಸಲಾಗಿದೆ. ಇದಕ್ಕೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಗ್ರಾಮಪಂಚಾಯತ್ ನ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. 
 
ಆಟಗಳೊಂದಿಗೆ ಮಕ್ಕಳಿಗೆ ಓದುವ ಆಸಕ್ತಿಯನ್ನು ಬೆಳೆಸುವುದಕ್ಕೂ ಹಲವು ಶಾಲೆಗಳು, ಪ್ರಮುಖವಾಗಿ ಗ್ರಾಮೀಣ ಶಾಲೆಗಳು ಡಿಜಿಟಲ್ ಲೈಬ್ರರಿಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ. 

SCROLL FOR NEXT