ಡಾ.ಸಿ.ಎನ್. ಅಶ್ವತ್ಥ ನಾರಾಯಣ 
ರಾಜ್ಯ

ಕೇರಳದ ಕುಟುಂಬಶ್ರೀ ಮಾದರಿ: ರಾಜ್ಯದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಸಚಿವ ಅಶ್ವತ್ಥ ನಾರಾಯಣ ಪತ್ರ

ಕೇರಳದ ಕುಟುಂಬಶ್ರೀ ಯೋಜನೆ ಮಾದರಿಯಲ್ಲೇ ರಾಜ್ಯದಲ್ಲಿ ಕೂಡಾ ಕೋಳಿ ಉತ್ಪಾದನೆ, ಮಾರುಕಟ್ಟೆ ಮತ್ತು ಮಾರಾಟವನ್ನು ಮಹಿಳಾ ಸ್ವ ಸ್ವಹಾಯ ಸಂಘಗಳಿಗೆ ವಹಿಸಲು ಆದೇಶಿಸಬೇಕೆಂದು  ಕೋರಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಪಶು ಸಂಗೋಪನಾ ಸಚಿವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು: ಕೇರಳದ ಕುಟುಂಬಶ್ರೀ ಯೋಜನೆ ಮಾದರಿಯಲ್ಲೇ ರಾಜ್ಯದಲ್ಲಿ ಕೂಡಾ ಕೋಳಿ ಉತ್ಪಾದನೆ, ಮಾರುಕಟ್ಟೆ ಮತ್ತು ಮಾರಾಟವನ್ನು ಮಹಿಳಾ ಸ್ವ ಸ್ವಹಾಯ ಸಂಘಗಳಿಗೆ ವಹಿಸಲು ಆದೇಶಿಸಬೇಕೆಂದು  ಕೋರಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಪಶು ಸಂಗೋಪನಾ ಸಚಿವರಿಗೆ ಪತ್ರ ಬರೆದಿದ್ದಾರೆ.

ಕೇರಳದಲ್ಲಿ ಇರುವ ಯೋಜನೆಯಲ್ಲಿ ವರ್ಷಕ್ಕೆ 100 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ನಮ್ಮಲ್ಲಿ 2 ಲಕ್ಷ ಸ್ವ ಸಹಾಯ ಸಂಘಗಳಿದ್ದು, 30 ಲಕ್ಷ ಮಹಿಳೆಯರು ಇವುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕುಟುಂಬಶ್ರೀ ಮಾದರಿಯನ್ನು  ರಾಜ್ಯದಲ್ಲಿ ಅಳವಡಿಸಿಕೊಂಡರೆ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಇರುವ ಸಂಜೀವಿನಿ ಉಪಕ್ರಮದಡಿ  ರಾಜ್ಯದ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳ ಮಕ್ಕಳಿಗೆ ಕೋಳಿಮೊಟ್ಟೆ ವಿತರಣೆ ಕಾರ್ಯವನ್ನು ಮಹಿಳಾ  ಸ್ವ ಸಹಾಯ ಸಂಘಗಳಿಗೆ ವಹಿಸಬೇಕು.ಇದಕ್ಕಾಗಿ ಕೌಶಲ್ಯಾಭಿವೃದ್ಧಿ ನಿಗಮದ ನೆರವನ್ನು ಕೂಡಾ ಕೊಡಲು ಉಜ್ವಲ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಸೂಕ್ತ ಹೊರಡಿಸಬೇಕೆಂದು ಅಶ್ವತ್ಥ ನಾರಾಯಣ ಮನವಿ ಮಾಡಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Big step or big threat? ರಷ್ಯಾದಿಂದ ತೈಲ ಖರೀದಿ, ಭಾರತಕ್ಕೆ ಮತ್ತೆ ಭಾರಿ ಸುಂಕದ ಎಚ್ಚರಿಕೆ ನೀಡಿದ ಟ್ರಂಪ್!

ಹಾಂಕಾಂಗ್: ರನ್​ವೇಯಿಂದ ಜಾರಿ ಸಮುದ್ರಕ್ಕೆ ಬಿದ್ದ ಕಾರ್ಗೋ ವಿಮಾನ, ಇಬ್ಬರು ಸಾವು

Women World Cup 2025: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ವಿರೋಚಿತ ಸೋಲು; ಸೆಮಿಸ್‌ಗಾಗಿ ಕಿವೀಸ್ ಜೊತೆ ಸೆಣೆಸಾಟ!

ಮುಸ್ಲಿಂ ಯುವಕರನ್ನು ಮದುವೆಯಾದರೆ ಅಂತಹ ಮಗಳ ಕಾಲು ಮುರಿಯಿರಿ: ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಅವಹೇಳನ: ರಮೇಶ್ ಕತ್ತಿಗೆ ಸಂಕಷ್ಟ; ಅಟ್ರಾಸಿಟಿ ಪ್ರಕರಣ ದಾಖಲು!

SCROLL FOR NEXT