ರಾಜ್ಯ

ಕರ್ನಾಟಕಕ್ಕೆ ಹೆಮ್ಮೆಯ ಗರಿ: ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮ ರಾಮ್ಸರ್ ಪಟ್ಟಿಗೆ ಸೇರ್ಪಡೆ

Vishwanath S

ಬೆಂಗಳೂರು: ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ ಭಾರತದ ಒಟ್ಟು 10 ತಾಣಗಳು ರಾಮ್ಸರ್ ಪಟ್ಟಿಗೆ ಸೇರ್ಪಡೆಗೊಂಡಿದೆ.

ಈ ಮೂಲಕ ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿ ಇದುವರೆಗೆ 64 ಜೌಗು ಪ್ರದೇಶಗಳಿದ್ದು, ಅತಿಹೆಚ್ಚು ಜೌಗು ಪ್ರದೇಶಗಳಿರುವ ದೇಶ ಎಂಬ ಖ್ಯಾತಿಗೂ ಒಳಗಾಗಿದೆ

ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ ಭಾರತದ ಒಟ್ಟು 10 ತಾಣಗಳು ರಾಮ್ಸರ್ ಪಟ್ಟಿಗೆ ಸೇರ್ಪಡೆಗೊಂಡಿದೆ. ಈ ಮೂಲಕ ಅಂತರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿ ಇದುವರೆಗೆ ೬೪ ಜೌಗು ಪ್ರದೇಶಗಳಿದ್ದು, ಅತಿಹೆಚ್ಚು ಜೌಗು ಪ್ರದೇಶಗಳಿರುವ ದೇಶ ಎಂಬ ಖ್ಯಾತಿಗೂ ಒಳಗಾಗಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಕೂ ವೇದಿಕೆಯಲ್ಲಿ ಹೇಳಿದ್ದಾರೆ.

ಪಕ್ಷಿಗಳ ಮೆಚ್ಚಿನ ಮನೆಯಾದ ರಂಗನತಿಟ್ಟು ಪಕ್ಷಿಧಾಮವು ರಾಮ್ಸರ್ ಪಟ್ಟಿಗೆ ಸೇರ್ಪಡೆಯಾಗಿರುವುದು ನಾಡಿನ ಜೀವವೈವಿಧ್ಯದ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಬೆಳವಣಿಗೆ. ಇಷ್ಟೇ ಅಲ್ಲದೆ ದೇಶದ ಇನ್ನೂ 9 ಪ್ರದೇಶಗಳು ಈ ಪಟ್ಟಿಗೆ ಸೇರಿರುವುದು ಹೆಮ್ಮೆಯ ಸಂಗತಿ.

SCROLL FOR NEXT