ಸಾಂದರ್ಭಿಕ ಚಿತ್ರ 
ರಾಜ್ಯ

ಕೋವಿಡ್ ನಂತರ ಮೊದಲ ಬಾರಿಗೆ ಲಾಭದಲ್ಲಿ ಮೆಟ್ರೊ ರೈಲು ನಿಗಮ; ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಆದಾಯ ಏರಿಕೆ

ಕಳೆದ ಕೆಲವು ತಿಂಗಳುಗಳಲ್ಲಿ ಮೆಟ್ರೊ ರೈಲನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ನಿಗಮ ಲಾಭಕ್ಕೆ ಮರಳಲು ಮತ್ತೆ ಸಾಧ್ಯವಾಗಿದೆ, ಕೋವಿಡ್ ಪೂರ್ವ ಸ್ಥಿತಿಗತಿಗೆ ಸಂಸ್ಥೆ ಮರಳಿದೆ ಎನ್ನಬಹುದು. 

ಬೆಂಗಳೂರು: ಕಳೆದ ಕೆಲವು ತಿಂಗಳುಗಳಲ್ಲಿ ಮೆಟ್ರೊ ರೈಲನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ನಿಗಮ ಲಾಭಕ್ಕೆ ಮರಳಲು ಮತ್ತೆ ಸಾಧ್ಯವಾಗಿದೆ, ಕೋವಿಡ್ ಪೂರ್ವ ಸ್ಥಿತಿಗತಿಗೆ ಸಂಸ್ಥೆ ಮರಳಿದೆ ಎನ್ನಬಹುದು. 

2022-2023 ರ ಮೊದಲ ತ್ರೈಮಾಸಿಕದಲ್ಲಿ ನಿಗಮಕ್ಕೆ 12 ಲಕ್ಷಕ್ಕೂ ಅಧಿಕ ಲಾಭವಾಗಿದೆ. ಈ ಹಣಕಾಸು ವರ್ಷದ ಜೂನ್ 30ಕ್ಕೆ ಕೊನೆಗೊಳ್ಳುವ ತ್ರೈಮಾಸಿಕಕ್ಕೆ BMRCL ನ ವಹಿವಾಟುಗಳನ್ನು ಮಂಡಳಿಯ ಸಭೆಯಲ್ಲಿ ಮಂಡಿಸಿ ಅನುಮೋದಿಸಲಾಯಿತು. 

ಕಾರ್ಯಾಚರಣೆಗಳ ಒಟ್ಟು ಆದಾಯವು 98.85 ಕೋಟಿ ರೂಪಾಯಿಗಳಷ್ಟಿದ್ದರೆ, ಅದರ ವೆಚ್ಚವು 17.83 ಕೋಟಿ ರೂಪಾಯಿಗಳು. ಒಟ್ಟಾರೆ ಖರ್ಚುಗಳನ್ನು ಕಡಿತಗೊಳಿಸಿದ ನಂತರ, ಒಟ್ಟು ಲಾಭವು 12 ಲಕ್ಷ ರೂಪಾಯಿಗಳಷ್ಟಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಂದಿನ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ನಿಗಮದ ಒಟ್ಟು ಆದಾಯವು 70 ಕೋಟಿ ರೂಪಾಯಿಗಳಾಗಿವೆ.

ಮಾರ್ಚ್ 2022ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಮೆಟ್ರೊ ರೈಲು ಸಂಚಾರದಿಂದ 193 ಕೋಟಿ ರೂಪಾಯಿಗಳನ್ನು ಗಳಿಸಿದೆ. ಒಟ್ಟಾರೆ ವೆಚ್ಚಗಳು 221.64 ಕೋಟಿ ರೂಪಾಯಿಗಳಾಗಿವೆ. ದೊಡ್ಡ ಧನಾತ್ಮಕ ಅಂಶವೆಂದರೆ BMRCL ತನ್ನ ಸಾಲಗಳಿಗೆ ಪಾವತಿಸುತ್ತಿದ್ದ ಬಡ್ಡಿ ಮೊತ್ತದಲ್ಲಿ ಭಾರಿ ಕುಸಿತವಾಗಿದೆ. "ನಾವು ತ್ರೈಮಾಸಿಕದಲ್ಲಿ ಪಾವತಿಸಿದ ಬಡ್ಡಿಯು 17.83 ಕೋಟಿಗಳಾಗಿದ್ದು, ಹಿಂದಿನ ತ್ರೈಮಾಸಿಕದಲ್ಲಿ ನಾವು ಪಾವತಿಸಿದ 24.18 ಕೋಟಿಗಿಂತ ಗಣನೀಯ ಇಳಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

BMRCL ನ ಕಾರ್ಯನಿರ್ವಾಹಕ ನಿರ್ದೇಶಕ ಎ ಎಸ್ ಶಂಕರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಮೆಟ್ರೊ ರೈಲಿನಲ್ಲಿ ಜನ ಕಿಕ್ಕಿರಿದು ಪ್ರಯಾಣಿಸುತ್ತಿದ್ದಾರೆ. ದಿನಕ್ಕೆ ಸರಾಸರಿ 4.7 ಲಕ್ಷ ಪ್ರಯಾಣಿಕರನ್ನು ಹೊಂದಿದ್ದೇವೆ. ಶನಿವಾರದಂದು ಮೂರು ಬಾರಿ 5 ಲಕ್ಷ ಪ್ರಯಾಣಿಕರನ್ನು ದಾಟಿದ್ದೇವೆ. ಹಿಂದೆ ವಾರಾಂತ್ಯದಲ್ಲಿ ಸವಾರರ ಸಂಖ್ಯೆ ಇಳಿಮುಖವಾಗುತ್ತಿತ್ತು, ಮುಂದಿನ ನಾಲ್ಕು ತಿಂಗಳಲ್ಲಿ, ಹಲವು ದಿನಗಳಲ್ಲಿ 5 ಲಕ್ಷದಷ್ಟು ಜನರು ಪ್ರಯಾಣಿಸಬಹುದು ಎಂಬ ಭರವಸೆಯಿದೆ ಎಂದರು. 

ಕಳೆದ ತಿಂಗಳು ಜುಲೈನಲ್ಲಿ ಒಟ್ಟು 146 ಲಕ್ಷ ಪ್ರಯಾಣಿಕರು ದಿನಕ್ಕೆ ಸರಾಸರಿ 4.7 ಲಕ್ಷದಷ್ಟು ಪ್ರಯಾಣಿಕರು ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಜೂನ್‌ನಲ್ಲಿ, ನಾವು ದಿನಕ್ಕೆ ಸರಾಸರಿ 4.6 ಲಕ್ಷ ಸವಾರರನ್ನು ಹೊಂದಿದ್ದೇವೆ, ಅಂದರೆ ಪ್ರತಿದಿನ 10 ಸಾವಿರ ಮಂದಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ್ದಾರೆ ಎಂದು ಶಂಕರ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT