ರಾಜ್ಯ

ಶಾಲಾ ವಿದ್ಯಾರ್ಥಿ ಸಾವು ಪ್ರಕರಣ: ಕೇವಲ 250 ರೂ. ಶಾಲೆ ಶುಲ್ಕ ಕಟ್ಟಿಲ್ಲದ್ದಕ್ಕೆ ಕ್ರೂರವಾಗಿ ಹಲ್ಲೆ, ಶಿಕ್ಷಕನ ಬಂಧನ!

Vishwanath S

ಲಖನೌ(ಉತ್ತರಪ್ರದೇಶ): ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದ್ದಿದ್ದ ಶಾಲಾ ವಿದ್ಯಾರ್ಥಿ ಸಾವು ಪ್ರಕರಣ ಸಂಬಂಧ ಪೊಲೀಸರು ಹತ್ಯೆ ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. 

ಶಾಲಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ 3ನೇ ತರಗತಿಯ ವಿದ್ಯಾರ್ಥಿಯ ಮೇಲೆ ಕ್ರೌರ್ಯ ಮೆರೆದಿದ್ದು, 8 ದಿನಗಳ ನಂತರ ಬಾಲಕ ಮೃತಪಟ್ಟಿದ್ದು ಕೇವಲ 250 ರೂಪಾಯಿ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಈ ಹಲ್ಲೆ ನಡೆದಿತ್ತು ಎಂದು ತಿಳಿದುಬಂದಿದೆ. 

ಶ್ರಾವಸ್ತಿ ಜಿಲ್ಲೆಯಲ್ಲಿ ಮೃತ ಬಾಲಕನ ಕುಟುಂಬದವರು ಆರಂಭಿಸಿದ ಪ್ರತಿಭಟನೆಯಲ್ಲಿ ಹಲವಾರು ಸಾಮಾಜಿಕ ಸಂಘಟನೆಗಳು ಸೇರಿಕೊಂಡ ನಂತರ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಅಲ್ಲದೆ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿದ್ದವು. ಈ ಹಿನ್ನಲೆಯಲ್ಲಿ ಕಳೆದ ರಾತ್ರಿ ಪೊಲೀಸರು ಆರೋಪಿ ಅನುಪಮ್ ಪಾಠಕ್ ನನ್ನು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಆಗಸ್ಟ್ 8ರಂದು ಶ್ರಾವಸ್ತಿಯ ಸಿರ್ಸಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪಂಡಿತ್ ಬ್ರಾಹ್ಮಣ ಉಚ್ಚತ್ತಮ್ ಮಾಧ್ಯಮಿಕ್ ಸ್ಕೂಲ್ ಚೌಲಾಹಿಯಲ್ಲಿ ಈ ಘಟನೆ ನಡೆದಿತ್ತು. ಮೃತ ಬಾಲಕ ಬ್ರಿಜೇಶ್ ವಿಶ್ವಕರ್ಮ ಅವರ ಚಿಕ್ಕಪ್ಪ ಸಲ್ಲಿಸಿದ ದೂರಿನ ಆಧಾರದ ಮೇಲೆ ಐಪಿಸಿ ವಿವಿಧಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಶ್ರಾವಸ್ತಿ ಪೊಲೀಸ್ ಅಧಿಕಾರಿಗಳು ಘಟನೆಯನ್ನು ದೃಢಪಡಿಸಿದ್ದಾರೆ.

SCROLL FOR NEXT