ರಾಜ್ಯ

ಮಾಂಸ ಸೇವನೆ ಚರ್ಚೆಯ ವಿಷಯವೇ ಅಲ್ಲ: ಸಿದ್ದರಾಮಯ್ಯ ಪರ ಪ್ರಮೋದ್ ಮುತಾಲಿಕ್ ಬ್ಯಾಟಿಂಗ್

Shilpa D

ಹುಬ್ಬಳ್ಳಿ: ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪಿಲ್ಲ, ಅವರು ತಪ್ಪು ಮಾಡಿಲ್ಲ. ಅವರ ಮೇಲೆ ವಿನಾಕಾರಣ ಆರೋಪ ಮಾಡುತ್ತಿರುವ ಬಿಜೆಪಿ ಬಗ್ಗೆ ಅಸಹ್ಯವಾಗುತ್ತಿದೆ’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

ಮಾಂಸದೂಟದ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಪರ-ವಿರೋಧಗಳ ಚರ್ಚೆ ಜೋರಾಗಿದೆ. ಕೆಲವವರು ಆಹಾರ ಪದ್ಧತಿಯನ್ನು ಪ್ರಶ್ನಿಸಬಾರದು ಎಂದು ಹೇಳುತ್ತಿದ್ರೆ, ಇನ್ನೂ ಕೆಲವರು ಸಿದ್ದರಾಮಯ್ಯ ಮಾಡಿದ್ದು ತಪ್ಪು ಎಂದು ಅಭಿಪ್ರಾಯಟ್ಟಿದ್ದಾರೆ. ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದೆ ಎನ್ನುವುದು ಚರ್ಚೆ ವಿಷಯವೇ ಅಲ್ಲ. ನಮ್ಮಲ್ಲಿ ಮಾಂಸ ಸೇವಿಸುವ ಮತ್ತು ಸೇವನೆ ಮಾಡದಿರುವ ಭಕ್ತರು ಸಾಕಷ್ಟು ಇದ್ದಾರೆ’ ಎಂದರು.

ಮಾಂಸ ತಿನ್ನಬೇಡಿ ಎಂದು ದೇವರು ಹೇಳಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಮುತಾಲಿಕ್, ಮಾಂಸ ಸೇವನೆ ವಿಚಾರದಲ್ಲಿ ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ. ವಿನಾಕಾರಣ ಅವರ ವಿರುದ್ಧ ಆರೋಪ ಮಾಡುವ ಬಿಜೆಪಿಯ ಕೆಲವರ ವರ್ತನೆ ನೋಡಿದರೆ ಅಸಹ್ಯವಾಗುತ್ತದೆ ಎಂದು ಕಿಡಿಕಾರಿದರು.

ಮಾಂಸ ಸೇವನೆಯು ಒಂದು ಚರ್ಚೆಯ ವಿಷಯವೇ ಅಲ್ಲ. ಬಿಜೆಪಿಯವರು ಸುಮ್ಮನೆ ಸಿದ್ದರಾಮಯ್ಯ ಅವರನ್ನು ಎಳೆದು ತರುತ್ತಿದ್ದಾರೆ. ನಮ್ಮಲ್ಲಿ ಎಲ್ಲಾ ರೀತಿಯ ಭಕ್ತರಿದ್ದಾರೆ. ಮಾಂಸ ಸೇವನೆ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು. ಮಾಂಸ ಸೇವನೆ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡ ಪ್ರಮೋದ್ ಮುತಾಲಿಕ್,  ಮಡಿಕೇರಿ ಚಲೋ ಚಳವಳಿಯನ್ನು ಖಂಡಿಸಿದರು.

SCROLL FOR NEXT