ಅಂಚೆ ಕಚೇರಿ 
ರಾಜ್ಯ

3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ!

3ಡಿ ತಂತ್ರಜ್ಞಾನ ಬಳಸಿ ನಿರ್ಮಿಸಿದ ಭಾರತದ ಮೊದಲ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದ್ದು, 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಇನ್ನೊಂದು ತಿಂಗಳ ಅವಧಿಯಲ್ಲಿ ಅಂಚೆ ಕಚೇರಿ ತಲೆ ಎತ್ತಲಿದೆ.

ಬೆಂಗಳೂರು: 3ಡಿ ತಂತ್ರಜ್ಞಾನ ಬಳಸಿ ನಿರ್ಮಿಸಿದ ಭಾರತದ ಮೊದಲ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದ್ದು, 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಇನ್ನೊಂದು ತಿಂಗಳ ಅವಧಿಯಲ್ಲಿ ಅಂಚೆ ಕಚೇರಿ ತಲೆ ಎತ್ತಲಿದೆ.

ಹಲಸೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಈ ಅಂಚೆ ಕಚೇರಿಯು ನಿರ್ಮಾಣವಾಗಲಿದ್ದು, 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ದೇಶದ ಮೊಟ್ಟ ಮೊದಲ ಅಂಚೆ ಕಚೇರಿ ಎನ್ನುವ ಹೆಗ್ಗಳಿಕೆ ಇದರದ್ದಾಗಲಿದೆ.

'ಕಡಿಮೆ ವೆಚ್ಚದಲ್ಲಿ ನೂತನ ಅಂಚೆ ಕಚೇರಿಗಳನ್ನು ನಿರ್ಮಿಸಲು ನಾವು ಉತ್ಸುಕರಾಗಿದ್ದೇವೆ. ಹೀಗಾಗಿ ಹಲಸೂರು ಬಜಾರ್ ಉಪ ಅಂಚೆ ಕಚೇರಿ ನಿರ್ಮಿಸಲು ನಾವು ಲಾರ್ಸನ್ ಮತ್ತು ಟೂಬ್ರೊ ಕನ್‌ಸ್ಟ್ರಕ್ಷನ್ ಅನ್ನು ಸಂಪರ್ಕಿಸಿದ್ದೇವೆ. ಭಾರತದಲ್ಲಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿ ನಿರ್ಮಾಣವನ್ನು ಕೈಗೊಳ್ಳುತ್ತಿರುವ ಏಕೈಕ ಕಂಪನಿ ಇದಾಗಿದೆ ಎಂದು ಹೇಳಲಾಗುತ್ತಿದೆ' ಎಂದು ಕರ್ನಾಟಕದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಟಿಎನ್ಐಇಗೆ ತಿಳಿಸಿದ್ದಾರೆ

ಹಲಸೂರಿನಲ್ಲಿ ಅಂಚೆ ಇಲಾಖೆಗೆ ಸ್ವಂತ ನಿವೇಶನವಿದ್ದು, ಇಲ್ಲಿಯೇ 3ಡಿ ತಂತ್ರತಜ್ಞಾನವನ್ನು ಬಳಸಿ ಹೊಸ ಅಂಚೆ ಕಚೇರಿಯನ್ನು ನಿರ್ಮಿಸಲಾಗುತ್ತಿದೆ.

ಸುಮಾರು 1,000 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿದರೆ 25 ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚವಾಗುತ್ತದೆ. ಇದು ಸಾಮಾನ್ಯ ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚದ ಕೇವಲ ಶೇ 25 ರಷ್ಟಾಗುತ್ತದೆ. ಈ ತಂತ್ರಜ್ಞಾನವು ಇಲಾಖೆಗೆ ತನ್ಮೂಲಕ ಅಗತ್ಯವಿರುವ ಪ್ರದೇಶಗಳಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಿಸಲು ಉತ್ತಮ ಪರ್ಯಾಯವನ್ನು ನೀಡಬಹುದು' ಎಂದು ಮಾಹಿತಿ ನೀಡಿದ್ದಾರೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಟ್ಟಡ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಪ್ರಮೋಷನ್ ಕೌನ್ಸಿಲ್ ಹಾಗೂ IIT ಮದ್ರಾಸ್‌ನಿಂದ ಗ್ರೌಂಡ್ ಸೇರಿದಂತೆ ಮೂರು ಮಹಡಿಗಳ ಕಟ್ಟಡ ನಿರ್ಮಾಣಕ್ಕಾಗಿ ತಂತ್ರಜ್ಞಾನವನ್ನು ಬಳಸುವ ಅನುಮೋದನೆಯನ್ನು L&T ಸಂಸ್ಥೆಯು ಪಡೆದುಕೊಂಡಿದೆ ಎಂದು ಸಿಪಿಎಂಜಿ ತಿಳಿಸಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಈ ತಂತ್ರಜ್ಞಾನ ಬಳಸಿ ಪ್ರಯತ್ನಿಸಲಾಗುತ್ತಿರುವುದರಿಂದ, ಕೆಲವು ಕಾರ್ಯವಿಧಾನದ ಸಮಸ್ಯೆಗಳು ಎದುರಾಗಬಹುದು. 'ನಿಯಮದ ಪ್ರಕಾರ, 2.5 ಲಕ್ಷ ರೂ.ಗಳಿಗಿಂತ ಹೆಚ್ಚಿನ ಯಾವುದೇ ಒಪ್ಪಂದವನ್ನು ಬಿಡ್ಡಿಂಗ್ ಮೂಲಕ ತೆರೆಯಬೇಕಿರುತ್ತದೆ. ಆದರೆ, ಈ ವರ್ಗದಲ್ಲಿ ಬರುವುದು ಎಲ್&ಟಿ ಒಂದೇ ಕಂಪನಿಯಾಗಿರುವುದರಿಂದ ನಾವು ಅವರನ್ನೇ ನಾಮನಿರ್ದೇಶನ ಮಾಡಬಹುದಾಗಿದೆ. ಈ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ. ಕೆಲಸದ ಆದೇಶವನ್ನು ಒಂದು ತಿಂಗಳ ಒಳಗಾಗಿ L&T ಗೆ ನೀಡಬಹುದು. ಅವರು ಈಗಾಗಲೇ ಈ ಕುರಿತಾದ ಕೆಲವು ವಿನ್ಯಾಸಗಳನ್ನು ನಮಗೆ ನೀಡಿದ್ದು, ಒಂದು ತಿಂಗಳಲ್ಲಿ ಕಟ್ಟಡ ಸಿದ್ಧವಾಗಲಿದೆ ಎಂದು ಭರವಸೆ ನೀಡಿದ್ದಾರೆ' ಎಂದು ರಾಜೇಂದ್ರ ಕುಮಾರ್ ಹೇಳಿದರು.

3ಡಿ ತಂತ್ರಜ್ಞಾನ ಕಟ್ಟಡ ನಿರ್ಮಾಣ ಎಂದರೇನು?

ಕಾಂಕ್ರೀಟ್ ಮಿಶ್ರಣವನ್ನು ಬಳಸಿಕೊಂಡು ಕಟ್ಟಡವನ್ನು ಮುದ್ರಿಸುವ ತಂತ್ರಜ್ಞಾನವೇ 3ಡಿ ಪ್ರಿಂಟಿಂಗ್ ತಂತ್ರಜ್ಞಾನ. ಇಟ್ಟಿಗೆ, ಮರಳನ್ನು ಬಳಸುವ ಸಾಂಪ್ರದಾಯಿಕ ಶೈಲಿಗೆ ಭಿನ್ನವಾಗಿ ಕಟ್ಟಡ ನಿರ್ಮಿಸುವುದಾಗಿದೆ. ಈ ಮೂಲಕ ಕಡಿಮೆ ಸಮಯ ಮತ್ತು ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT