ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: 10 ವರ್ಷದಿಂದಲೇ ಕಳ್ಳತನ, 54 ನೇ ವಯಸ್ಸಿನಲ್ಲಿ ಖಾಕಿ ಬಲೆಗೆ ಬಿದ್ದ ಖತರ್ನಾಕ್!

ಬಾಲ್ಯದಿಂದಲೇ ಕಳ್ಳತನವನ್ನು ವೃತ್ತಿ ಮಾಡಿಕೊಂಡು ಹಲವೆಡೆ ಕೃತ್ಯ ಎಸಗುತ್ತಿದ್ದ ಆರೋಪದಡಿ ಪ್ರಕಾಶ್ (54) ಎಂಬುವವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಬಾಲ್ಯದಿಂದಲೇ ಕಳ್ಳತನವನ್ನು ವೃತ್ತಿ ಮಾಡಿಕೊಂಡು ಹಲವೆಡೆ ಕೃತ್ಯ ಎಸಗುತ್ತಿದ್ದ ಆರೋಪದಡಿ ಪ್ರಕಾಶ್ (54) ಎಂಬುವವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿ ಪ್ರಕಾಶ್, 1978ರಿಂದಲೇ ಕಳ್ಳತನ ಕೃತ್ಯ ಎಸಗಲಾರಂಭಿಸಿದ್ದ. 20 ಬಾರಿ ಪೊಲೀಸರಿಗೆ ಸಿಕ್ಕಿಬಿದ್ದು, ಜೈಲಿಗೂ ಹೋಗಿ ಜಾಮೀನಿನ ಮೇಲೆ ಹೊರಬಂದಿದೆ. ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಪ್ರಕಾಶ್‌ನನ್ನು ಮತ್ತೊಮ್ಮೆ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು, ಶಿವಮೊಗ್ಗ, ಬಳ್ಳಾರಿ, ಕೋಲಾರ ಮೂಲದ ಮೂವರು ಪತ್ನಿಯರಿದ್ದು, ಏಳು ಮಕ್ಕಳಿದ್ದಾರೆ.

ಆರೋಪಿ ಬೆಂಗಳೂರು, ಕೋಲಾರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಕಲಬುರಗಿ ಸೇರಿದಂತೆ ವಿವಿಧೆಡೆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಈತ ಮಹಾರಾಷ್ಟ್ರ, ಗೋವಾ, ಕೇರಳದಲ್ಲಿಯೂ ಕಳ್ಳತನದಲ್ಲಿ ಭಾಗಿಯಾಗಿದ್ದಾನೆ.

ಪ್ರಕಾಶ್  ಸಹೋದರ ವರದರಾಜ್, ಅವರ ಮಕ್ಕಳಾದ ಬಾಲರಾಜ್ ಮತ್ತು ಮಿಥುನ್ ಮತ್ತು ಅಳಿಯ ಜಾನ್ ಅವರಿಗೆ ಈ ಅಪರಾಧಗಳಲ್ಲಿ ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರಕಾಶ್ ಐಷಾರಾಮಿ ನಿವಾಸಗಳು, ಆಭರಣ ಅಂಗಡಿಗಳು ಮತ್ತು ಹಣಕಾಸು ಕಚೇರಿಗಳನ್ನು ಗುರಿಯಾಗಿಸಿಕೊಂಡಿದ್ದರು.

ಕೇರಳದ ಕೊಟ್ಟಾಯಂನಲ್ಲಿ ಸುಮಾರು 2.5 ಕೆಜಿ ಚಿನ್ನವನ್ನು ಈತ ಕದ್ದಿದ್ದ,  ಶೇಷಾದ್ರಿಪುರಂನ ಆಭರಣ ಮಳಿಗೆಯೊಂದರ ಪಕ್ಕದ ಗೋಡೆ ಕೊರೆದು ಕಳ್ಳತನ ಮಾಡಲಾಗಿದ್ದು, ನಗರದ ಮಾರುಕಟ್ಟೆಯ ಗಿರವಿ ಅಂಗಡಿಯಲ್ಲಿದ್ದ ಸುಮಾರು 4.2 ಕೆಜಿ ಚಿನ್ನಾಭರಣ ಕಳ್ಳತನ ಮಾಡಿದ್ದ. 1989ರಲ್ಲಿ ತನ್ನ ಸಹಚರರ ಸಹಾಯದಿಂದ ಮೈಸೂರಿನಲ್ಲಿ ಕಳ್ಳತನ ಮಾಡಿದ್ದ.

1992ರಲ್ಲಿ ಮತ್ತೊಬ್ಬ ಸಹಚರನ ಜತೆ ಸೇರಿ ಮಹಾರಾಷ್ಟ್ರದ ಕೊಲ್ಹಾಪುರದ ಎರಡು ಆಭರಣ ಮಳಿಗೆಗಳಿಂದ ಸುಮಾರು 17 ಕೆಜಿ ಚಿನ್ನಾಭರಣ ಕಳವು ಮಾಡಿದ್ದ. ಶಿವಮೊಗ್ಗದಲ್ಲಿ ಫೈನಾನ್ಸ್ ಕಚೇರಿಯಲ್ಲಿ ಸುಮಾರು ಏಳು ಕೋಟಿ ನಗದು ದೋಚಿದ್ದ. ಬೆಂಗಳೂರು, ಬಳ್ಳಾರಿ, ಶಿವಮೊಗ್ಗ ಸೇರಿ ಹಲವು ನಗರಗಳಲ್ಲಿ 160 ಕಡೆ ಆರೋಪಿ ಕಳ್ಳತನ ಮಾಡಿದ್ದ. ಈತನ ಕುಟುಂಬದವರೂ ಕಳ್ಳತನಕ್ಕೆ ಸಹಕಾರ ನೀಡುತ್ತಿದ್ದರು’ ಎಂದೂ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT