ರಾಜ್ಯ

ಕೊಡಗು: ಜ್ಞಾನ ಕಾವೇರಿ ವಿಶ್ವ ವಿವಿ ಸ್ಥಾಪನೆಗೆ ಕ್ಯಾಬಿನೆಟ್ ಅನುಮೋದನೆ

Srinivas Rao BV

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಅಂತಿಮ ಅನುಮೋದನೆ ದೊರೆತಿದೆ. ಕೊಡಗು ಜ್ಞಾನ ಕಾವೇರಿ ವಿಶ್ವ ವಿವಿ (ಕೆಜೆಕೆಯು) ಕುಶಾಲನಗರದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. 

ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಈ ಪ್ರದೇಶದ ನಿವಾಸಿಗಳ ದೀರ್ಘಾವಧಿಯ ಬೇಡಿಕೆಯಾಗಿತ್ತು. ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿದ್ದು, 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
 
ಚಿಕ್ಕ ಅಲುವಾರದಲ್ಲಿನ ಜ್ಞಾನ ಕಾವೇರಿ ಪಿಜಿ ಕೇಂದ್ರವನ್ನು ವಿಶ್ವವಿದ್ಯಾನಿಲಯವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಹೇಳಿದ್ದಾರೆ. 

ರಾಜ್ಯ ಸರ್ಕಾರದಿಂದ ಶೀಘ್ರವೇ ವಿಶೇಷ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಹಾಗೂ ವಿವಿ 2 ವರ್ಷಗಳ ಕಾಲ ಟ್ರಯಲ್ ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ. ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕವಾಗಿ ಉಪಕುಲಪತಿ ಹಾಗೂ ಇತರೆ ಹುದ್ದೆಗಳನ್ನು ನೇಮಕ ಮಾಡಲಾಗುವುದು,'' ಎಂದು ಅಪ್ಪಚ್ಚುರಂಜನ್ ಖಚಿತಪಡಿಸಿದರು.

ರಾಜ್ಯದಲ್ಲಿ 8 ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದ್ದು, ಕೊಡಗಿನ ಜ್ಞಾನ ಕಾವೇರಿ ವಿಶ್ವ ವಿಶ್ವವಿದ್ಯಾಲಯವು 22 ಕಾಲೇಜುಗಳನ್ನು ಒಳಗೊಳ್ಳಲಿದೆ. 22 ಕಾಲೇಜುಗಳ ಪೈಕಿ 5 ಸರ್ಕಾರಿ ಕಾಲೇಜುಗಳಾಗಿದ್ದರೆ, 17 ಖಾಸಗಿ ಕಾಲೇಜುಗಳಿರಲಿವೆ. 

ಜ್ಞಾನ ಕಾವೇರಿ ಪಿಜಿ ಸೆಂಟರ್ ನಲ್ಲಿ ಎಂಎಸ್ ಸಿ, ಎಂಕಾಂ, ಮೈಕ್ರೋ ಬಯಾಲಜಿ, ಇಂಗ್ಲೀಷ್ ವಿಭಾಗದಲ್ಲಿ ಎಂಎ, ಕನ್ನಡ ಹಾಗೂ ಇತರ ವಿಷಯಗಳಲ್ಲಿ ಕೋರ್ಸ್ ಗಳನ್ನು ಹೊಂದಿರಲಿದೆ. ಕಾಲೇಜು ಯೋಗ ವಿಷಯದಲ್ಲಿ ಪರಿಸರ ವಿಷಯದಲ್ಲಿ ಎಂಎಸ್ ಸಿ, ಪಿ ಹೆಚ್ ಡಿ ಕೋರ್ಸ್ ಗಳನ್ನೂ ನೀಡಲಾಗುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಚಂದ್ರಶೇಖರಯ್ಯ ಹೇಳಿದ್ದಾರೆ. 

SCROLL FOR NEXT