ರಾಜ್ಯ

ಗೌರಿ ಗಣೇಶ ಹಬ್ಬ: ಮಾರುಕಟ್ಟೆಯಲ್ಲಿ ವ್ಯಾಪಾರ ಭರಾಟೆ, ತರಹೇವಾರಿ ಮೂರ್ತಿಗಳು, ಪುನೀತ್ ಚತುರ್ಥಿ ಆಚರಣೆ

Sumana Upadhyaya

ಬೆಂಗಳೂರು: ಎಡೆಬಿಡದ ಮಳೆಯ ನಡುವೆಯೂ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಜನರು ಮನೆಗಳಲ್ಲಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲು ಹೂವು-ಹಣ್ಣು-ತರಕಾರಿ ಕೊಳ್ಳುವುದರಲ್ಲಿ ನಿರತರಾಗಿರುವುದು ಕಂಡುಬಂತು.

ನಗರದ ಕೆ ಆರ್ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು, ಜನಜಂಗುಳಿಯಿಂದ ತುಂಬಿಹೋಗಿತ್ತು. ಮಾರುಕಟ್ಟೆಯಲ್ಲಿ ಪೂಜೆ ಸಾಮಗ್ರಿಗಳು, ಗೌರಿ , ಗಣೇಶ ಮೂರ್ತಿಗಳನ್ನು ಖರೀದಿಸಲು ಜನ ಆಗಮಿಸಿದ್ದರು. ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರ, ಹೋಬಳಿಗಳಲ್ಲಿ ವಿಗ್ರಹಗಳನ್ನು ಮಾರಾಟ ಮಾಡಲು ಸಾಕಷ್ಟು ಮಳಿಗೆಗಳನ್ನು ನಿರ್ಮಿಸಲಾಗಿದೆ. ಬಗೆ ಬಗೆಯ ಮೂರ್ತಿಗಳು ಈ ಬಾರಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. 50 ರೂಪಾಯಿಯಿಂದ ಹಿಡಿದು 10 ಸಾವಿರ ರೂ.ವರೆಗಿನ ವಿಗ್ರಹಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಗೌರಿ ಗಣೇಶ ಹಬ್ಬದ ಪ್ರಯುಕ್ತ ವ್ಯಾಪಾರ ಭರಾಟೆಯಲ್ಲಿ ತೊಡಗಿರುವ ಜನತೆ

ಇನ್ನು ಹಣ್ಣು, ಹೂವು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯು ಹೆಚ್ಚಾಗಿದೆ. ಆದರೂ ಅದನ್ನು ಲೆಕ್ಕಿಸದೇ ಹಬ್ಬದ ಗುಂಗಿನಲ್ಲಿ ಜನತೆ ಖರೀದಿಯಲ್ಲಿ ತೊಡಗಿದ್ದಾರೆ. 

ಮಾರುಕಟ್ಟೆಯಲ್ಲಿ ತರಹೇವಾರಿ ಗಣೇಶ ಮೂರ್ತಿ ರಾರಾಜಿಸುತ್ತಿದ್ದು, ಗೌರಿ, ಗಣೇಶನನ್ನು ಖರೀದಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನತೆ ಆಗಮಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಪುನೀತ್ ರಾಜ್‌ಕುಮಾರ್ ಮೂರ್ತಿಗೆ ಭಾರಿ ಬೇಡಿಕೆ

ಮಳೆಯನ್ನೂ ಲೆಕ್ಕಿಸದೆ ಬಡಾವಣೆಗಳಲ್ಲಿ, ಗಣಪತಿ ಮಂಡಳಿಗಳು ಗಣೇಶನನ್ನು ಪ್ರತಿಷ್ಠಾಪಿಸಲು ಉತ್ಸುಕತೆ ತೋರಿವೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದ ಗೌರಿ, ಗಣೇಶ ಹಬ್ಬ ಕಳೆಗಟ್ಟಿರಲಿಲ್ಲ. ಆದರೆ, ಈ ಬಾರಿ ಕೋವಿಡ್‌ ಪರಿಣಾಮಕಾರಿಯಾಗಿಲ್ಲದ ಕಾರಣ ಜನತೆ ಅಮ್ಮ, ಮಗನ ಹಬ್ಬವನ್ನು ಅದ್ದೂರಿ ರೀತಿಯಲ್ಲಿ ಆಚರಿಸುತ್ತಿದ್ದಾರೆ.

ಮೈಸೂರು ಅರಮನೆ ಮುಂದೆ ಯೋಗನಿರತ ಪ್ರಧಾನಿ ನರೇಂದ್ರ ಮೋದಿಯವರ ಮೂರ್ತಿ

ಅಪ್ಪು ಚತುರ್ಥಿ: ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹಠಾತ್ ಗತಿಸಿ ಹೋಗಿ 10 ತಿಂಗಳಾಗುತ್ತಿದೆ. ಮಾರುಕಟ್ಟೆಯಲ್ಲಿ ಗಣೇಶನ ಮೂರ್ತಿ ಜೊತೆಗೆ ಅಪ್ಪು ಮೂರ್ತಿಗಳನ್ನು ಕಲಾವಿದರು ನಿರ್ಮಿಸಿ ಇಟ್ಟಿದ್ದು ಜನರು ಅಪ್ಪು ಮೂರ್ತಿಗಳನ್ನು ಖರೀದಿಸಿ ಮನೆಗಳಲ್ಲಿ, ಬಡಾವಣೆಗಳಲ್ಲಿ ಅಪ್ಪು ಚತುರ್ಥಿ ಎಂದು ಆಚರಿಸುತ್ತಿರುವುದು ವಿಶೇಷವಾಗಿದೆ.

ಗಣೇಶನೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿಯವರ ಮೂರ್ತಿ
SCROLL FOR NEXT