ರಾಜ್ಯ

ಒಂದು ಲಕ್ಷ ವಸತಿ ಯೋಜನೆ: ಆರು ವರ್ಷಗಳ ಬಳಿಕ ಕರ್ನಾಟಕದಲ್ಲಿ ಕೊನೆಗೂ 2 ಸಾವಿರ ಮನೆಗಳು ಸಿದ್ಧ

Ramyashree GN

ಬೆಂಗಳೂರು: ನಗರ ಪ್ರದೇಶದ ಬಡವರಿಗೆ ಒಂದು ಲಕ್ಷ ಮನೆಗಳನ್ನು ಒದಗಿಸುವ ಯೋಜನೆಯನ್ನು ಘೋಷಿಸಿ ಆರು ವರ್ಷಗಳೇ ಕಳೆದಿದೆ. ಹೀಗಿರುವಾಗ ಕರ್ನಾಟಕ ಸರ್ಕಾರವು ಈ ವರ್ಷದ ಸೆಪ್ಟೆಂಬರ್ 7 ರಂದು 2 ಸಾವಿರ ಮನೆಗಳನ್ನು ವಿತರಿಸಲು ಸಿದ್ಧವಾಗಿದೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ, 493 ಎಕರೆ ಜಾಗದಲ್ಲಿ 48 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ 2 ಸಾವಿರ ಮನೆಗಳು ಪೂರ್ಣಗೊಂಡಿವೆ. ಉಳಿದ 46 ಸಾವಿರ ಮನೆಗಳು ವಿವಿಧ ನಿರ್ಮಾಣ ಹಂತದಲ್ಲಿವೆ. ಇವುಗಳಲ್ಲಿ 10,000 ಮನೆಗಳು ಛಾವಣಿ ಹಾಕುವ ಹಂತದಲ್ಲಿವೆ ಮತ್ತು 4,700 ಮನೆಗಳಿಗೆ ಅಡಿಪಾಯ ಹಾಕಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ 1500 ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಅದರಲ್ಲಿ 600 ಕೋಟಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಇದರೊಂದಿಗೆ ರಾಜ್ಯ ಸರ್ಕಾರ ಕೂಡ 583 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಉಳಿದ 52,000 ಮನೆಗಳನ್ನು ನಿರ್ಮಿಸಲು ಸಜ್ಜಾಗಿದೆ. ಈ ಯೋಜನೆಯಡಿ, ಈವರೆಗೆ 44,500 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸೋಮಣ್ಣ, ಬಿಜೆಪಿ ಸರ್ಕಾರವು ರದ್ದು ಮಾಡಿರುವ 1 ಲಕ್ಷ ಮನೆಗಳಿಗೆ ಕಾಮಗಾರಿ ಆದೇಶ ನೀಡುವುದಾಗಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. 'ಸಿದ್ದರಾಮಯ್ಯ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಬಹಿರಂಗ ಚರ್ಚೆಗೆ ನಾನು ಸಿದ್ಧ. 2016-17ರಲ್ಲಿ ಕೇಂದ್ರದಿಂದ 600 ಕೋಟಿ ಬಿಡುಗಡೆಯಾಗಿದ್ದು, 2018-19ರಲ್ಲಿ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.

ಈ ಟೆಂಡರ್‌ನಲ್ಲಿ ರಾಜ್ಯ ಸರ್ಕಾರ 22,000 ಮನೆಗಳನ್ನು ನಿರ್ಮಿಸುವುದಾಗಿ ಹೇಳಿದೆ. ಆದರೆ ಸರ್ಕಾರ ಬಿಡ್ ಮಾಡಿದವರಿಗೆ ಭೂಮಿಯನ್ನು ಹಸ್ತಾಂತರಿಸಿಲ್ಲ.

2016ರಲ್ಲಿ ಸಿದ್ದರಾಮಯ್ಯ ಸರ್ಕಾರ ‘ಒಂದು ಲಕ್ಷ ವಸತಿ ಯೋಜನೆ’ ಘೋಷಣೆ ಮಾಡಿತ್ತು.ಅಂದಿನಿಂದ ಇಂದಿನವರೆಗೆ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ನಾಲ್ವರು ಮುಖ್ಯಮಂತ್ರಿಗಳು, ನಾಲ್ವರು ವಸತಿ ಸಚಿವರು ಬಂದಿದ್ದು, ಯಾವುದೇ ಯೋಜನೆಗೆ ಚಾಲನೆ ನೀಡಿಲ್ಲ.

SCROLL FOR NEXT