ರಾಜ್ಯ

ಜನವರಿ ಮಧ್ಯಂತರದಲ್ಲಿ ವಿಶ್ವ ಪ್ರಸಿದ್ಧ ಹಂಪಿ ಉತ್ಸವ

Manjula VN

ಹೊಸಪೇಟೆ: ಜನವರಿ ಮಧ್ಯಂತರದಲ್ಲಿ ವಿಶ್ವ ಪ್ರಸಿದ್ಧ ಹಂಪಿ ಉತ್ಸವನ್ನು ನಡೆಸಲು ವಿಜಯನಗರ ಜಿಲ್ಲಾಡಳಿತ ಮಂಡಳಿ ನಿರ್ಧರಿಸಿದೆ.

ಆರಂಭದಲ್ಲಿ ಜನವರಿ 6, 2023 ರಂದು ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ದಿನದಂದೇ ಉದ್ಘಾಟನೆ ಮಾಡಲು ನಿರ್ಧರಿಸಲಾಗಿತ್ತು, ಇದೀಗ ಜನವರಿ ಮಧ್ಯಂತರದಲ್ಲಿ ನಡೆಸಲು ಅಧಿಕಾರಿಗಳು ನಿರ್ಧರಿಸಲಾಗಿದ್ದು, ಇನ್ನೊಂದು ಅಥವಾ ಎರಡು ದಿನಗಳಲ್ಲಿ ದಿನಾಂಕಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಮಂಗಳವಾರ ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್ ಅವರು ಪ್ರತಿ ವರ್ಷ ಹಂಪಿ ಉತ್ಸವ ಆಯೋಜಿಸುವ ಪ್ರದೇಶಗಳನ್ನು ಪರಿಶೀಲಿಸಿದರು. ಜಲಕ್ರೀಡಾ ಪ್ರದೇಶ, ಮುಖ್ಯ ವೇದಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಇತರ ಸ್ಥಳಗಳನ್ನು ಅವರು ಪರಿಶೀಲಿಸಿದರು.

ಹಂಪಿ ಉತ್ಸವವು ರಾಜ್ಯ ಸರ್ಕಾರ ನಡೆಸುವ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮವನ್ನು 1980 ರ ದಶಕದಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು ಮೊದಲು ಪ್ರಾರಂಭಿಸಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಹಂಪಿಯ ತುಂಗಭದ್ರಾ ನದಿಯ ದಡದಲ್ಲಿ ಸಾಂಕೇತಿಕವಾಗಿ ಉತ್ಸವವನ್ನು ಆಯೋಜಿಸಲಾಗಿದೆ. ಆದರೆ, ಈ ಬಾರಿ ಎರಡು ದಿನಗಳ ಉತ್ಸವವನ್ನು ಅದ್ಧೂರಿಯಾಗಿ ಮಾಡಲು ಆಡಳಿತ ಮತ್ತು ಸಚಿವರು ಮತ್ತು ಸ್ಥಳೀಯ ಶಾಸಕ ಆನಂದ್ ಸಿಂಗ್ ಉತ್ಸುಕರಾಗಿದ್ದಾರೆ.

ಜಿಲ್ಲಾ ಸಚಿವೆ ಶಶಿಕಲಾ ಜೊಲ್ಲೆ ಅವರೊಂದಿಗೆ ಚರ್ಚಿಸಿದ್ದೇವೆ. ಡಿಸೆಂಬರ್ 5 ರಂದು ಈ ಬಗ್ಗೆ ಸಭೆ ನಡೆಸಿ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದು ಡಿಸಿ ವೆಂಕಟೇಶ್ ಹೇಳಿದ್ದಾರೆ.

“ಉತ್ಸವವನ್ನು ಮೂರು ದಿನಗಳಿಗೆ ಹೆಚ್ಚಿಸಬೇಕೆಂಬ ಬೇಡಿಕೆಯಿದೆ. ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಉತ್ಸವವನ್ನು ಅದ್ಧೂರಿಯಾಗಿ ನಡೆಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಡಿಸೆಂಬರ್ ಮೂರನೇ ವಾರದಿಂದ ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಸಾಮಾನ್ಯ ಕಾರ್ಯಕ್ರಮಗಳಾದ ತುಂಗಾ ಆರತಿ, ಸಾಂಸ್ಕೃತಿಕ ಸಂಜೆ, ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್ ರೈಡ್, ಲೈಟ್ ಆ್ಯಂಡ್ ಸೌಂಡ್ ಶೋ, ಗ್ರಾಮೀಣ ಕ್ರೀಡೆಗಳ ಜತೆಗೆ ತುಂಗಭದ್ರಾ ನದಿಯಲ್ಲಿ ಜಲಕ್ರೀಡೆ ನಡೆಸಲು ಆಡಳಿತ ಮಂಡಳಿ ಮುಂದಾಗಿದೆ. ಹಿಂದಿನ ಉತ್ಸವಗಳಲ್ಲಿ ಕಮಲಾಪುರ ಕೆರೆಯಲ್ಲಿ ಜಲಕ್ರೀಡೆ ನಡೆಯುತ್ತಿತ್ತು.

SCROLL FOR NEXT