ರಾಜ್ಯ

ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಡಿಕ್ಕಿಯಾಗಿ ಚಿರತೆ ಸಾವು

Manjula VN

ಮಹೆಬೂಬನಗರ: ಐದು ವರ್ಷದ ಗಂಡು ಚಿರತೆಯೊಂದು ಗುರುವಾರ ಭೂತಪುರ ಮಂಡಲದ ತಾಟಿಕೊಂಡ ಗ್ರಾಮದ ಬಳಿ ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ44ರ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದೆ.
    
ಚಿರತೆ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ವರದಿಯಾಗುತ್ತಿರುವ ಮೂರನೇ ಘಟನೆ ಇದಾಗಿದೆ.

ಕಳೆದೆರಡು ವರ್ಷಗಳ ಹಿಂದೆ ದೇವರಕದ್ರ ಮಂಡಲದ ರೈಲ್ವೆ ಹಳಿ ಮೇಲೆ ಚಿರತೆಯೊಂದು ಶವವಾಗಿ ಪತ್ತೆಯಾಗಿತ್ತು. ಕಳೆದ ವರ್ಷ, ಎಮ್ಮೆಗಳ ಹಿಂಡಿನ ಮೇಲೆ ದಾಳಿ ಮಾಡಿ ನಂತರ ಪ್ರತಿದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಚಿರತೆ ಸಾವನ್ನಪ್ಪಿತ್ತು.

ಜಿಲ್ಲಾ ಅರಣ್ಯಾಧಿಕಾರಿ ಎಸ್.ಸತ್ಯನಾರಾಯಣ ಮಾತನಾಡಿ, ಜಿಂಕೆಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಚಿರತೆಗಳು ಬೇಟೆ ಸಿಗದೆ ಕಾಡಿನಿಂದ ಹೊರಬರುತ್ತಿರಬಹುದು. ಇತ್ತೀಚಿನ ದಿನಗಳಲ್ಲಿ, ಬೇಟೆ ಹಾಗೂ ಹೆಣ್ಣು ಪ್ರಾಣಿಗಳ ಹುಡುಕಾಟಕ್ಕಾಗಿ ಕಾಡು ಪ್ರಾಣಿಗಳು ವಿಕಾರಾಬಾದ್ ಮತ್ತು ಇತರ ಪ್ರದೇಶಗಳ ಕಾಡುಗಳಿಂದ ಮಹೆಬೂಬ್‌ನಗರ ಕಾಡುಗಳಿಗೆ ವಲಸೆ ಹೋಗುತ್ತಿವೆ ಎಂದು ಹೇಳಿದ್ದಾರೆ.

ಮೆಹಬೂಬ್‌ನಗರ ಪಟ್ಟಣಕ್ಕೆ ಸಮೀಪವಿರುವ ಅಪ್ಪನಪಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಕಾಡೆಮ್ಮೆಯೊಂದು ಕಾಣಿಸಿಕೊಂಡಿದ್ದು. ಆದರೆ, ಮತ್ತೆ ಅದು ಪತ್ತೆಯಾಗಲಿಲ್ಲ. ಅಲ್ಲಿಂದ ಅದು ತಾನಿದ್ದ ಪ್ರದೇಶಕ್ಕೆ ಹೋಗಿರಬಹುದು. ಗ್ರಾಮಗಳು ಹಾಗೂ ಅರಣ್ಯ ಪ್ರದೇಶಗಲ್ಲಿ ರಸ್ತೆಗಳ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದು ತಿಳಿಸಿದ್ದಾರೆ.

SCROLL FOR NEXT