ಸಂಗ್ರಹ ಚಿತ್ರ 
ರಾಜ್ಯ

ದಂಡ ಮನ್ನಾ ಮಾಡಿ, ಬಾಡಿಗೆ ಪಡೆಯಿರಿ: ಬಿಬಿಎಂಪಿಗೆ ಶಿವಾಜಿನಗರದ ವ್ಯಾಪಾರಿಗಳ ಮನವಿ

ಶಿವಾಜಿನಗರ ಮಾರುಕಟ್ಟೆಗಳಲ್ಲಿ ಬಾಡಿಗೆ ಹಾಗೂ ದಂಡ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ನೋಟಿಸ್‌ ಪಡೆದಿರುವ ವ್ಯಾಪಾರಿಗಳು ಇದೀಗ ದಂಡವನ್ನು ಮನ್ನಾ ಮಾಡಿ ಬಾಡಿಗೆ ಮಾತ್ರ ವಸೂಲಿ ಮಾಡುವಂತೆ ಬಿಬಿಎಂಪಿ ವಲಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು: ಶಿವಾಜಿನಗರ ಮಾರುಕಟ್ಟೆಗಳಲ್ಲಿ ಬಾಡಿಗೆ ಹಾಗೂ ದಂಡ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ನೋಟಿಸ್‌ ಪಡೆದಿರುವ ವ್ಯಾಪಾರಿಗಳು ಇದೀಗ ದಂಡವನ್ನು ಮನ್ನಾ ಮಾಡಿ ಬಾಡಿಗೆ ಮಾತ್ರ ವಸೂಲಿ ಮಾಡುವಂತೆ ಬಿಬಿಎಂಪಿ ವಲಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಕೋವಿಡ್ -19-ಪ್ರೇರಿತ ಲಾಕ್‌ಡೌನ್‌ನಿಂದಾಗಿ ಭಾರಿ ನಷ್ಟಗಳು ಎದುರಾಗಿತ್ತು. ಹೀಗಾಗಿ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಅನೇಕ ವ್ಯಾಪಾರಿಗಳು ಹೇಳಿದ್ದಾರೆ.

ಪೂರ್ವ ವಲಯದ ವಿಶೇಷ ಆಯುಕ್ತ ಪಿಎನ್ ರವೀಂದ್ರ ಅವರು ಮಾತನಾಡಿ, ಸುಮಾರು 3 ಕೋಟಿ ರೂಪಾಯಿ ಬಾಕಿ ಇದೆ ಎಂದು ಹೇಳಿದ್ದಾರೆ.

ದಂಡವನ್ನು ಮನ್ನಾ ಮಾಡುವಂತೆ ಪಾಲಿಕೆಯ ಮುಂದೆ ವ್ಯಾಪಾರಸ್ಥರು ಮನವಿ ಇರಿಸಿದ್ದಾರೆ. ಇದನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಒಪ್ಪಿಗೆಗಾಗಿ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.

ರಸೆಲ್‌ ಮಾರುಕಟ್ಟೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಇದ್ರೀಸ್‌ ಚೌದ್ರಿ ಮಾತನಾಡಿ, 470 ಅಂಗಡಿಗಳಿರುವ ರಸೆಲ್‌ ಮಾರುಕಟ್ಟೆ ಸಂಕೀರ್ಣದಿಂದ ಸಂಜೆ ಬಜಾರ್‌, ನಾಲಾ ಮಾರುಕಟ್ಟೆ, ದನದ ಮಾರುಕಟ್ಟೆ, ಬೋಟಿ ಮಾರುಕಟ್ಟೆಯ ಜತೆಗೆ ಮಟನ್‌ ಮಾರುಕಟ್ಟೆ ವ್ಯಾಪಾರಿಗಳ ಬಾಡಿಗೆ ಮಾತ್ರ ಬಾಕಿ ಇದೆ. ರಿಚರ್ಡ್ ಸ್ಕ್ವೇರ್ ಮಾರುಕಟ್ಟೆ ಮತ್ತು ಮೀನು ಮಾರುಕಟ್ಟೆಯ ವ್ಯಾಪಾರಸ್ಥರು ತಮ್ಮ ದಂಡವನ್ನು ಮನ್ನಾ ಮಾಡುವಂತೆ ವಿಶೇಷ ಆಯುಕ್ತರು ಮತ್ತು ಶಾಸಕ ರಿಜ್ವಾನ್ ಅರ್ಷದ್ ಇಬ್ಬರಿಗೂ ಮನವಿ ಮಾಡಿದ್ದಾರೆಂದು ಹೇಳಿದ್ದಾರೆ.

ರಿಜ್ವಾನ್ ಅರ್ಷದ್ ಅವರು ಪ್ರತಿಕ್ರಿಯೆ ನೀಡಿ, ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

“ಸಾಂಕ್ರಾಮಿಕ ರೋಗ ಮತ್ತು ಲಾಕ್‌ಡೌನ್ ವ್ಯಾಪಾರಿಗಳಿಗೆ ಭಾರಿ ಹೊಡೆತವನ್ನು ನೀಡಿದೆ, ಇದರಿಂದಾಗಿ ಹಲವರು ಬಾಡಿಗೆ ಕಟ್ಟಲು ಸಾಧ್ಯವಾಗಿಲ್ಲ. ಇದೀಗ ವ್ಯಾಪಾರಗಳು ಮತ್ತೆ ಚುರುಕುಗೊಂಡಿದ್ದು, ಬಾಡಿಗೆ ಕಟ್ಟಲು ಮುಂದೆ ಬಂದಿದ್ದಾರೆ. ಅವರಿಗೆ ಬಿಬಿಎಂಪಿ ಸಹಾಯ ಮಾಡಬೇಕೆಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ಯಾರು ಹೇಳಿದ್ದು?': ಅಮೆರಿಕ ವ್ಯಾಪಾರ ಒಪ್ಪಂದದ ಅನಿಶ್ಚಿತತೆ ನಡುವೆಯೇ ಹೊಸ ಮಾರುಕಟ್ಟೆಗಳತ್ತ ಭಾರತ ಕಣ್ಣು!

Pak ಸಚಿವನಿಗೆ ಮುಖಭಂಗ: ನೆತನ್ಯಾಹು ವಿರುದ್ಧ ಮಾತಾಡ್ತಿದ್ದಂತೆ ಶೋ ನಿಲ್ಲಿಸಿ ಆಸಿಫ್‌ನನ್ನು ಹೊರಕಹಿಸಿದ ಆ್ಯಂಕರ್, Video!

1st ODI: ಮಿಚೆಲ್ ಸ್ಫೋಟಕ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದ ಕಿವೀಸ್

ಯುವನಿಧಿಗೆ ನಿರುದ್ಯೋಗಿ ವಿದ್ಯಾರ್ಥಿಗಳ ನೋಂದಣಿ ನೋಡ್ತಿದ್ದರೆ ಆತಂಕಕಾರಿ, ಶಿಕ್ಷಣದಲ್ಲಿ ಬದಲಾವಣೆ ಅಗತ್ಯ: ವಿಟಿಯು ಉಪಕುಲಪತಿ

2010ರಲ್ಲಿ ಆರ್ಡರ್ ಮಾಡಿದ್ದ ನೋಕಿಯಾ ಫೋನ್ ಗಳು 16 ವರ್ಷ ಬಳಿಕ ಡೆಲಿವರಿ, ಬೇಸ್ತು ಬಿದ್ದ ಅಂಗಡಿ ಮಾಲೀಕ.. ಕಾರಣ ಯುದ್ಧ!

SCROLL FOR NEXT