ರಾಜ್ಯ

ನಾಗರಿಕ ಸಂಚಾರ ವೇದಿಕೆ ಸಭೆ: ಅಧಿಕಾರಿಗಳ ಎದುರು ಸಮಸ್ಯೆಗಳ ಸುರಿಮಳೆಗೈದ ಜನತೆ!

Manjula VN

ಬೆಂಗಳೂರು: ನೂತನವಾಗಿ ನೇಮಕಗೊಂಡ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರ ಉಪಕ್ರಮದ ನಾಗರಿಕ ಸಂಚಾರ ವೇದಿಕೆ ಸಭೆಗೆ ಶನಿವಾರ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಎಲ್ಲಾ 44 ಸಂಚಾರಿ ಪೊಲೀಸ್ ಠಾಣೆಗಳು ಸಭೆ ನಡೆಸಿದವು. ಜಯನಗರದಲ್ಲಿ ನಡೆದ ಸಭೆಯಲ್ಲಿ ಸ್ವತಃ ಆಯುಕ್ತ ಸಲೀಂ ಅವರು ಪಾಲ್ಗೊಂಡಿದ್ದರು.

ಸಭೆಗೆ ಜನರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಬಹುತೇಕ ದೂರುಗಳು ಪಾರ್ಕಿಂಗ್ ಕುರಿತಾಗಿಯೇ ಆಗಿದೆ. ಶಾಲಾ ಸಮಯದಲ್ಲಿ ಟ್ರಾಫಿಕ್ ದಟ್ಟಣೆ ಸಭೆಯ ಪ್ರಮುಖ ವಿಷಯವಾಗಿತ್ತು. ಮುಂದಿನ ತಿಂಗಳ ಎರಡನೇ ಶನಿವಾರ ನಡೆಯಲಿರುವ ಸಭೆಯಲ್ಲಿ ಜಯನಗರ ಸಂಚಾರ ಪೊಲೀಸರು ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡಲಿದ್ದಾರೆ. ನಗರದ ಎಲ್ಲಾ 44 ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಹೇಳಿದರು.

“ನಿವಾಸಿ ಕಲ್ಯಾಣ ಸಂಘಗಳ ಅನೇಕ ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು. ಬ್ಯಾರಿಕೇಡ್‌ ಹಾಕಿರುವ ಮೆಟ್ರೊ ಕಾಮಗಾರಿ ಸ್ಥಳಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಶಾಲಾ ಬಸ್‌ಗಳಿಂದ ಸಂಚಾರ ಸಮಸ್ಯೆ ಉಂಟಾಗುತ್ತಿದೆ ಎಂದು ಕೆಲವರು ದೂರಿದರು. ಅಂತಹ ಶಾಲೆಗಳ ಸಭೆ ಕರೆದು ಅವರ ಶಾಲಾ ಬಸ್‌ಗಳಿಂದ ಆಗುತ್ತಿರುವ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ತಿಳಿಸುತ್ತೇವೆಂದು ತಿಳಿಸಿದರು.

ಕೆಲವರು ಕೆಲವು ಪ್ರದೇಶಗಳಲ್ಲಿ ಒಂದು ಮಾರ್ಗವನ್ನು ಸೂಚಿಸಿದ್ದಾರೆ ಮತ್ತು ಅದು ಸೂಕ್ತವೇ ಎಂದು ನಾವು ಪರಿಶೀಲಿಸಬೇಕಾಗಿದೆ. ತಪ್ಪಾದ ಪಾರ್ಕಿಂಗ್ ಸಂಬಂಧಿತ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಯಿತು. ಟ್ರಾಫಿಕ್ ಪೊಲೀಸರು ಏನು ಮಾಡಿದ್ದಾರೆ. ಪೊಲೀಸರು ಮಾಡಿದ ಮನವಿಗೆ ಇತರ ನಾಗರಿಕ ಸಂಸ್ಥೆಗಳು ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತಂತೆಯೂ ಜನರಿಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಡಿಸಿಪಿ (ಟ್ರಾಫಿಕ್ ನಾರ್ತ್) ಸಚಿನ್ ಘೋರ್ಪಡೆ ಹೇಳಿದರು.

ಜನರಿಂದ ಸಾಕಷ್ಟು ಸಲಹೆ ಹಾಗೂ ಪ್ರತಿಕ್ರಿಯೆಗಳು ಬಂದಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಉಳಿದೆಲ್ಲ ಟ್ರಾಫಿಕ್ ಪೊಲೀಸ್ ಠಾಣೆಗಳು ಇದೇ ರೀತಿಯ ಸಂವಾದವನ್ನು ನಡೆಸಿವೆ. ಇನ್ನೂ ಕೆಲವ ಸಭೆಗಳಲ್ಲಿ ಬಂದಿರುವ ಸಲಹೆ ಹಾಗೂ ಪ್ರತಿಕ್ರಿಯೆಗಳಿಗಾಗಿ ಎದುರು ನೋಡುತ್ತಿದ್ದೇವೆಂದು ತಿಳಿಸಿದರು.

ಜಯನಗರ ಸಂಚಾರ ವ್ಯಾಪ್ತಿಯಲ್ಲಿ ನಡೆದ ಸಭೆಯಲ್ಲಿ ಡಿಸಿಪಿ (ಟ್ರಾಫಿಕ್ ವೆಸ್ಟ್) ಕುಲದೀಪ್ ಕುಮಾರ್ ಆರ್ ಜೈನ್ ಕೂಡ ಭಾಗವಹಿಸಿದ್ದರು.

ಎಲ್ಲಾ 44 ಸಂಚಾರ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಆಯಾ ಪೊಲೀಸ್ ಠಾಣೆಗಳಲ್ಲಿ ಸಭೆಗೆ ಹಾಜರಾಗಿದ್ದರು. ಕೆಲವು ಸ್ಥಳಗಳಲ್ಲಿ, ಹೆಚ್ಚಿನ ಜನರು ಸೇರಿದ್ದರಿಂದ ಸಭೆಗಳನ್ನು ದೊಡ್ಡ ಸ್ಥಳಗಳಲ್ಲಿ ನಡೆಸಲಾಯಿತು. ಎಲ್ಲಾ ಕುಂದುಕೊರತೆಗಳನ್ನು ಮತ್ತು ಕ್ರಮಗಳನ್ನು ತೆಗೆದುಕೊಂಡ ವರದಿಯನ್ನು ಮುಂದಿನ ಸಭೆಯಲ್ಲಿ ನೀಡಬೇಕು ಎಂದು ಸಂಚಾರಿ ಪೊಲೀಸರಿಗೆ ಸೂಚಿಸಲಾಗಿದೆ.

SCROLL FOR NEXT