ರಾಷ್ಟ್ರಪತಿ ಪದಕ ವಿಜೇತರೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ , ಸಿಎಂ ಬೊಮ್ಮಾಯಿ, ಸಚಿವ ಆರಗ ಜ್ಞಾನೇಂದ್ರ ಮತ್ತಿತರ ಅಧಿಕಾರಿಗಳು 
ರಾಜ್ಯ

ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಪ್ರದಾನ;  ಸೈಬರ್ ಕ್ರೈಂ ಎದುರಿಸಲು ಹೆಚ್ಚಿನ ತಂತ್ರಜ್ಞಾನದ ಅಗತ್ಯವಿದೆ- ಸಿಎಂ ಬೊಮ್ಮಾಯಿ

ರಾಜಭವನದಲ್ಲಿಂದು ಒಟ್ಟು 90 ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಷ್ಟ್ರಪತಿ ಪದಕ ಪ್ರದಾನ ಮಾಡಿದರು. 

ಬೆಂಗಳೂರು: ರಾಜಭವನದಲ್ಲಿಂದು ಒಟ್ಟು 90 ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಷ್ಟ್ರಪತಿ ಪದಕ ಪ್ರದಾನ ಮಾಡಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ನಂತರ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಸೈಬರ್ ಕ್ರೈಂ ಎದುರಿಸಲು ಇನ್ನೂ ಹೆಚ್ಚಿನ ತಂತ್ರಜ್ಞಾನದ ಅಗತ್ಯವಿದೆ. ಪೊಲೀಸ್ ಇಲಾಖೆಯಲ್ಲಿ  ಈಗಿರುವ ತಂತ್ರಜ್ಞಾನದ ಜೊತೆಗೆ ಇನ್ನೂ ಹೆಚ್ಚಿನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು, ಅದಕ್ಕೆ ಬೇಕಿರುವ ಎಲ್ಲಾ ನೆರವು ರಾಜ್ಯ ಸರ್ಕಾರ ನೀಡಲಿದೆ ಎಂದು ಹೇಳಿದರು. 

ತಂತ್ರಜ್ಞಾನದಿಂದ ಕ್ರೈಂಗಳು ನಡೆಯುತ್ತಿದೆ,  ಎಲ್ಲ ಪೊಲೀಸರಿಗೂ ತಂತ್ರಜ್ಞಾನದ ತರಬೇತಿ ನೀಡಬೇಕು, ರಾಜ್ಯದಲ್ಲಿ ಫೋರೆನ್ಸಿಕ್ ಲ್ಯಾಬ್ ಗಳನ್ನು ಹೆಚ್ಚಿಸಬೇಕು, ಕನಿಷ್ಠ ಒಂದು ವಲಯಕ್ಕೆ ಎರಡು ಫ್ಲೋರೆನ್ಸಿಕ್ ಲ್ಯಾಬ್ ಗಳನ್ನು ತೆರಯಬೇಕು
ಆಗ ಮಾತ್ರ ಅಪರಾಧಗಳನ್ನು ತಡೆಯಲು ಸಾಧ್ಯ ಎಂದರು. 

ಪೊಲೀಸ್ ನೇಮಕಾತಿ  ಅಪರಾಧ  ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಕ್ರಮವಾಗಬೇಕು, ಇದು ಆಗದಂತೆ ನೋಡಿಕೊಳ್ಳುವುದು ಹಿರಿಯ ಪೊಲೀಸ್ ಅಧಿಕಾರಿಗಳ ಜವಾಬ್ದಾರಿಯಾಗಿದೆ.  ಕೆಳಹಂತದಲ್ಲಿ  ತರಬೇತಿ ಚೆನ್ನಾಗಿ  ನಡೆಯುತ್ತಿದೆ, ಐಪಿಎಸ್ ಹಂತದಲ್ಲೂ ಉತ್ತಮವಾಗಿದೆ. ಆದ್ರೆ,   ಮಧ್ಯ ಹಂತದಲ್ಲಿ ತರಬೇತಿ ಇನ್ನಷ್ಟು ಶಿಸ್ತಿನಿಂದ ಗಟ್ಟಿಯಾಗಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು. 

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ,  ಕೇಂದ್ರ ಗೃಹ ಸಚಿವರು ಕರ್ನಾಟಕ ಪೊಲೀಸ್ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಸಿಬ್ಬಂದಿ ನೆಮ್ಮದಿಯಿಂದ ಇರಬೇಕು, ಅದಕ್ಕಾಗಿ ನಿವಾಸಗಳನ್ನು ಕಟ್ಟಿಸಿ ಕೊಡಲಾಗುತ್ತಿದೆ.  ಡಬಲ್ ಬೆಡ್ ರೂಂ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ.  ಶಿಥಿಲಾವಸ್ಥೆಯಲ್ಲಿದ್ದ ಠಾಣೆಗಳನ್ನು ಕೆಡವಿ ಸಾಕಷ್ಟು ನೂತನ ಠಾಣೆಗಳನ್ನು ಕಟ್ಟಿ ಕೊಟ್ಟಿದ್ದೇವೆ, ಯಡಿಯೂರಪ್ಪ ಮತ್ತು ಬೊಮ್ಮಾಯಿ‌ಯವರ ನೇತೃತ್ವದಲ್ಲಿ ಇಲಾಖೆಗೆ ಸಾಕಷ್ಟು ನೆರವು ಸಿಕ್ಕಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Trump ಭಾಗಿಯಾಗಲಿರುವ ಗಾಜಾ ಶಾಂತಿ ಶೃಂಗಸಭೆಗೆ ಪ್ರಧಾನಿಗೆ ಈಜಿಪ್ಟ್‌ನ ಸಿಸಿ ಆಹ್ವಾನ: US ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ತಾರಾ ಮೋದಿ?

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ಗುಜರಾತ್‌ನಲ್ಲಿ ಎಎಪಿ ರೈತರ ರ್ಯಾಲಿಯಲ್ಲಿ ಹಿಂಸಾಚಾರ; ಕಲ್ಲು ತೂರಿದ ರೈತರು, 3 ಪೊಲೀಸರಿಗೆ ಗಾಯ

Tomahawk Missiles: ಅಮೆರಿಕ ಉಕ್ರೇನ್ ಗೆ 'ಟೊಮಾಹಾಕ್ ಕ್ಷಿಪಣಿ' ನೀಡುವ ಸಾಧ್ಯತೆ, ರಷ್ಯಾದ ಬಿಗ್ ವಾರ್ನಿಂಗ್ ಏನು?

SCROLL FOR NEXT