ರಾಜ್ಯ

ದತ್ತಪೀಠದಿಂದ ಹಿಂದೂ ಅರ್ಚಕರನ್ನು ವಾಪಸ್ ಕಳುಹಿಸಿ: ಗೌಸ್ ಮೊಹಿಯುದ್ದೀನ್ ಆಗ್ರಹ

Manjula VN

ಚಿಕ್ಕಮಗಳೂರು: ಮೂರು ದಿನಗಳ ದತ್ತ ಜಯಂತಿ ಆಚರಣೆಯಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡಿರುವ ಇಬ್ಬರು ಹಿಂದೂ ಅರ್ಚಕರನ್ನು ವಾಪಸ್ ಕಳುಹಿಸಬೇಕು ಎಂದು ರಾಜ್ಯ ಕೋಮು ಸೌಹಾರ್ದ ವೇದಿಕೆ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್ ಅವರು ಭಾನುವಾರ ಒತ್ತಾಯಿಸಿದ್ದಾರೆ.

ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಲಿಖಿತವಾಗಿ ಮನವಿ ಮಾಡಿದ ನಂತರವೇ ಅವರ ನಿಯೋಜನೆಯನ್ನು ಸ್ವೀಕರಿಸಲಾಗಿತ್ತು. ಆದರೆ, ದತ್ತ ಜಯಂತಿ ಬಳಿಕವೂ ಹಿಂದು ಅರ್ಚಕರು ಪೂಜೆಗಳನ್ನು ಮುಂದುವರೆಸುತ್ತಿದ್ದಾರೆ. ಅವರನ್ನು ಚಿಕ್ಕಮಗಳೂರು ಜಿಲ್ಲಾಡಳಿತ ವಾಪಸ್ ಕಳುಹಿಸಬೇಕೆಂದು ಆಗ್ರಹಿಸಿದ್ದಾರೆ.

ಮುಸ್ಲಿಂ ಮೌಲ್ವಿಗಳನ್ನು ಪಕ್ಕಕ್ಕೆ ಸರಿಸಲಾಗಿತ್ತು, ಇದು ಮುಜಾವವರಿಗೆ ಮಾಡಿದ ಅವಮಾನವಾಗಿದೆ. ಇಂತಹ ಬೆಳವಣಿಗೆಗಳು ದರ್ಗಾ ಆಸ್ತಿಯನ್ನು ಕಬಳಿಸುವ ಯತ್ನವಾಗಲಿದೆ ಎಂದು ಹೇಳಿದ್ದಾರೆ.

ದತ್ತಪೀಠದಲ್ಲ ಪೂಜೆಗಳು ನಡೆಯುತ್ತಿದ್ದ ವೇಳೆ ಜಿಲ್ಲೆಯಿಂದ ಗಡಿಪಾರು ಮಾಡಿದ ಕುಖ್ಯಾತ ರೌಡಿಗಳೂ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಆದರೆ, ಇದನ್ನು ಪ್ರಶ್ನಿಸಿದರೂ ಜಿಲ್ಲಾಡಳಿತದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ತಿಳಿಸಿದರು.

ದತ್ತ ಪೀಠದ ವ್ಯವಸ್ಥಾಪನಾ ಸಮಿತಿಯಲ್ಲಿ 'ಎಂಟು ಸದಸ್ಯರ ಪೈಕಿ ಏಳು ಮಂದಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರೆ, ಒಬ್ಬ ಮುಸ್ಲಿಂ ವ್ಯಕ್ತಿಯಿದ್ದಾರೆ, ಆತನೂ ಬಿಜೆಪಿಯ ಖ್ಯಾತ ಕಾರ್ಯಕರ್ತ ಎಂದಿದ್ದಾರೆ. ಆದರೆ ಸಮಿತಿ ಪಾರದರ್ಶಕವಾಗಿದೆ ಎಂದು ಜಿಲ್ಲಾಡಳಿತ ಸಮರ್ಥನೆ ನೀಡಿದೆ.

SCROLL FOR NEXT