ರಾಜ್ಯ

ಕಾಯ್ದಿರಿಸದ ಟಿಕೆಟ್ ಖರೀದಿಗೆ UTS ಆಪ್ ಬಳಕೆ ಮಾಡಲು ಬೆಂಗಳೂರು ರೈಲ್ವೆ ವಿಭಾಗದಿಂದ ಅಭಿಯಾನ

Srinivas Rao BV

ಬೆಂಗಳೂರು: ಸಾಲು ಸಾಲು ರಜೆ ದಿನಗಳು ಹಾಗೂ ಹಬ್ಬದ ದಿನಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಕಾಯ್ದಿರಿಸದ ಟಿಕೆಟ್ ಖರೀದಿಗೆ UTS ಆಪ್ ಬಳಕೆ ಮಾಡುವ ಅವಕಾಶವನ್ನು ರೈಲ್ವೆ ಇಲಾಖೆ ಕಲ್ಪಿಸಿದೆ.
 
ಪ್ರಯಾಣಿಕರಿಗೆ ಈ ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಕುರಿತ ಬಗ್ಗೆ ಜಾಗೃತಿ, ಅರಿವು ಮೂಡಿಸಲು ನೈಋತ್ಯ ರೈಲ್ವೆ ವಿಭಾಗದ ಬೆಂಗಳೂರು ವಿಭಾಗ ಒಂದು ತಿಂಗಳ ಕಾಲ ಅಭಿಯಾನ ಹಮ್ಮಿ ಕೊಂಡಿದೆ.
 
Unreserved Ticketing System (UTS) ಎಂಬುದು ಈ ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಇದರ ಮೂಲಕ ಕಾಯ್ದಿರಿಸದ, ಸೀಸನ್ ಅಥವಾ ಪ್ಲಾಟ್ ಫಾರ್ಮ್ ಟಿಕೆಟ್ ಗಳನ್ನು ಖರೀದಿಸಬಹುದಾಗಿದ್ದು, ಆಪ್ ನ್ನು ಗೂಗಲ್ ಪ್ಲೇ ಮೂಲಕ ಡೌನ್ ಲೋಡ್ ಮಾಡಬಹುದಾಗಿದೆ.

ಇದನ್ನೂ ಓದಿ: ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 4.8 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನವನ್ನು ಹಿಂದಿರುಗಿಸಿದ ಪ್ರಾಮಾಣಿಕ ಹಮಾಲಿ
 
ಈ ಆಪ್ ಬಳಕೆಯಿಂದ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ. ಡಿಜಿಟಲ್ ಮೂಲಕ ಪ್ರಯಾಣಿಸಬಹುದಾಗಿದೆ. ಇದರಿಂದ ಕ್ಯಾಶ್ ಲೆಸ್ ವಹಿವಾಟಿಗೂ ಅನುಕೂಲವಾಗಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಸಾರ್ವಜನಿಕರ ಸಲಹೆಗೆ ಆಹ್ವಾನ:
UTS ಅಪ್ಲಿಕೇಶನ್‌ ಬಳಕೆಯ ಕುರಿತು ಯಾವುದೇ ಸಲಹೆಗಳನ್ನು twitter ನಲ್ಲಿ  @SrDCM_BENGALURU ಗೆ / Whatsapp ನಲ್ಲಿ 8861309572 ಗೆ / dcmbengaluru@gmail.com ಮೇಲ್ ಗೆ ಕಳುಹಿಸಬಹುದು. ಮೌಲ್ಯಯುತವಾದ ಸಲಹೆ ನೀಡುವವರಿಗೆ ರೈಲ್ವೆ ವಿಭಾಗದಿಂದ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಈ ಅಭಿಯಾನ ಜನವರಿ 11, 2023 ರವರೆಗೆ ಇರುತ್ತದೆ.

SCROLL FOR NEXT