ರಾಜ್ಯ

ನಾವೀನ್ಯತೆಯು ಭಾರತದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ: ಸುಬ್ರಮಣಿಯನ್ ಸ್ವಾಮಿ

Manjula VN

ಬೆಂಗಳೂರು: ನಾವೀನ್ಯತೆಯು ಭಾರತವು ಮತ್ತಷ್ಟು ಬೆಳೆಯಲು ಅನುವು ಮಾಡಿಕೊಡುತ್ತದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಶುಕ್ರವಾರ ಹೇಳಿದ್ದಾರೆ.
    
REVA ಬಿಸಿನೆಸ್ ಸ್ಕೂಲ್ (RBS) ವಿಶೇಷ ಉಪನ್ಯಾಸ ಸರಣಿಯಲ್ಲಿ 'ಉತ್ತಮ ಭವಿಷ್ಯದ ಅವಕಾಶಗಳಿಗಾಗಿ ನಾಯಕರು ಮತ್ತು ನವೋದ್ಯಮಿಗಳ ಅಗತ್ಯತೆ' ವಿಷಯದ ಕುರಿತು ಸುಬ್ರಮಣಿಯನ್ ಸ್ವಾಮಿಯವರು ಮಾತನಾಡಿದರು.

ನಾವು ಹೆಚ್ಚಿನ ಆವಿಷ್ಕಾರಗಳನ್ನು ಪರಿಚಯಿಸಿದರೆ, ಭಾರತದ ಬೆಳವಣಿಗೆಯು ಹೆಚ್ಚಾಗುತ್ತದೆ. ಇದು ಜನರ ಸಹಕಾರದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.

ದೇಶದ ಬೆಳವಣಿಗೆಯ ಚಕ್ರದಲ್ಲಿನ ಪ್ರತಿಯೊಂದು ರೇಖೆಯು ನಾವೀನ್ಯತೆಯ ಫಲಿತಾಂಶವಾಗಿದೆ ಮತ್ತು ಉತ್ಪಾದಕತೆಯು ನಾವೀನ್ಯತೆಯ ದೀರ್ಘಾವಧಿಯ ಫಲಿತಾಂಶವಾಗಿದೆ ಎಂದು ತಿಳಿಸಿದರು.

ಬಳಿಕ ಆವಿಷ್ಕಾರದ ಅಗತ್ಯದ ಕುರಿತು ಮಾತನಾಡಿದ ಅವರು, ಹೊಸ ಉತ್ಪನ್ನಗಳನ್ನು ಉತ್ಪಾದಿಸುವುದರಿಂದ ಜನರನ್ನು ಆಕರ್ಷಿಸಬಹುದು. ಈ ಅಗತ್ಯತೆಯ ಮೇಲೆ ವ್ಯಾಪಾರ ಕ್ಷೇತ್ರವು ಅಭಿವೃದ್ಧಿ ಹೊಂದುತ್ತದೆ ಎಂದರು.

ಈ ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಒಬ್ಬರು ಆವಿಷ್ಕಾರಕರಾಗಿ ಮತ್ತು ಇನ್ನೊಬ್ಬರು ಸಂಶೋಧಕರಾಗಿ ಇರುತ್ತಾರೆ. ಆವಿಷ್ಕಾರಕ ಸಹಾಯ ಮಾಡುವ ವ್ಯಕ್ತಿಯಾಗಿದ್ದರೆ, ಸಂಶೋಧಕ ನಾಯಕ ಮತ್ತು ಮಹತ್ವದ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಭವಿಷ್ಯದ ನಾಯಕರನ್ನು ಅಭಿವೃದ್ಧಿಪಡಿಸಲು ಇಲ್ಲಿ ನಾವೀನ್ಯತೆ ಮುಖ್ಯವಾಗುತ್ತದೆ ಎಂದು ಹೇಳಿದರು.

SCROLL FOR NEXT