ರಾಜ್ಯ

ಕೊಪ್ಪಳ: ವಿಷಪೂರಿತ ಆಹಾರ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Sumana Upadhyaya

ಕೊಪ್ಪಳ: ಜಿಲ್ಲೆಯ ಅಳವಂಡಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ (RMSA school )ವಿಷಪೂರಿತ ಆಹಾರ ಸೇವಿಸಿ 20ಕ್ಕೂ ಹೆಚ್ಚು ಬಾಲಕಿಯರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. 

ತೀವ್ರ ಅಸ್ವಸ್ಥಕ್ಕೀಡಾಗಿರುವ ವಿದ್ಯಾರ್ಥಿನಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಶಾಲೆಯ ಹಾಸ್ಟೆಲ್ ನಲ್ಲಿ ಆಹಾರ ಸೇವಿಸಿದ ವಿದ್ಯಾರ್ಥಿನಿಯರು ರಾತ್ರಿ ನಿತ್ರಾಣಗೊಂಡಿದ್ದರು. ಇಂದು ಅವರಲ್ಲಿ ಆರೋಗ್ಯ ಸಮಸ್ಯೆ ಉಲ್ಬಣಗೊಂಡು ವಾಂತಿ ಮಾಡಲು ಆರಂಭಿಸಿದರು. 

ಇಂದು ಬೆಳಗ್ಗೆ ಹಾಸ್ಟೆಲ್ ನಲ್ಲಿ ತಿಂಡಿ ಸೇವಿಸಿದ ನಂತರವೂ ತೀವ್ರ ಅಸ್ವಸ್ಥಗೊಂಡು ವಾಂತಿ ಮಾಡಲು ಆರಂಭಿಸಿದರು. ಅಳವಂಡಿ ಪೊಲೀಸರು, ಗ್ರಾಮದ ಪ್ರಮುಖರು, ಶಿಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಸತಿಗೃಹದಲ್ಲಿ ಸರಿಯಾಗಿ ಆಹಾರ ಸಿದ್ಧಪಡಿಸುತ್ತಿಲ್ಲ, ಕಳಪೆ ಆಹಾರ, ಸ್ವಚ್ಛತೆ ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ವಿಷಪೂರಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾಗುತ್ತಿರುವುದು ಇದು ಮೂರನೇ ಸಲ ಈ ಹಿಂದೆ ಕೊಪ್ಪಳ ನಗರ ಮತ್ತು ಕನಕಗಿರಿಯಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಈ ರೀತಿ ಆಗಿತ್ತು. 

SCROLL FOR NEXT