ರಾಜ್ಯ

ಕ್ರಿಸ್‌ಮಸ್, ಹೊಸ ವರ್ಷ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ, ಮಾರ್ಗಸೂಚಿ ಕಡ್ಡಾಯ: ಬಿಬಿಎಂಪಿ ವಿಶೇಷ ಆಯುಕ್ತ ಡಾ.ಕೆ.ವಿ ತ್ರಿಲೋಕ್ ಚಂದ್ರ

Nagaraja AB

ಬೆಂಗಳೂರು: ದೇಶದಲ್ಲಿ ಓಮಿಕ್ರಾನ್ ನ ಹೊಸ ರೂಪಾಂತರಿ ಪತ್ತೆಯಾಗುವುದರೊಂದಿಗೆ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ ಆದರೆ, ಆಯೋಜಕರು ಕಡ್ಡಾಯವಾಗಿ  ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಬಿಬಿಎಂಪಿ  ಅಧಿಕಾರಿಗಳು ಖಚಿತಪಡಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಆರೋಗ್ಯ ಇಲಾಖೆ ಜೊತೆಗಿನ ಸಭೆ ನಂತರ ಬಿಬಿಎಂಪಿ ಶನಿವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ನಡುವೆ  ಮಾರ್ಗಸೂಚಿ ಪಾಲನೆ ಖಚಿತಪಡಿಸಿಕೊಳ್ಳಲು ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶನಿವಾರ ಆದೇಶಿಸಿದ್ದಾರೆ. ಕಾರ್ಯನಿರತ ಮಾರ್ಷಲ್‌ಗಳು ಮಾರುಕಟ್ಟೆ ಸ್ಥಳಗಳಲ್ಲಿ ಮೈಕ್‌ಗಳು ಮತ್ತು ಧ್ವನಿವರ್ಧಕಗಳೊಂದಿಗೆ ಕಾಣಿಸಿಕೊಂಡು ಜನರು ಮುಖವಾಡಗಳನ್ನು ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಒತ್ತಾಯಿಸುತ್ತಾರೆ. 

ಕೋವಿಡ್ ನಿಯಮ ಪಾಲನೆಯೊಂದಿಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕ್ರಿಸ್ ಮಸ್, ಹೊಸ ವರ್ಷಾಚರಣೆ ಮಾಡಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ಕೆ.ವಿ ತ್ರಿಲೋಕ್ ಚಂದ್ರ ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಬಿಬಿಎಂಪಿ ತನ್ನ ಸಂಚಾರಿ ಪರೀಕ್ಷಾ ಕೇಂದ್ರಗಳು ಮತ್ತು ಮೊಬೈಲ್ ಲಸಿಕೆ ಘಟಕಗಳನ್ನು ಹೆಚ್ಚಿಸಲಿದ್ದು,  ಹಾಸ್ಟೆಲ್‌ಗಳು, ಪೇಯಿಂಗ್ ಗೆಸ್ಟ್ ವಸತಿಗಳು ಮತ್ತು ಹೆಚ್ಚಿನ ಸಂಖ್ಯೆಯ ಜನರು ವಾಸಿಸುವ ಇತರ ಸ್ಥಳಗಳನ್ನು ಸಹ ಮೇಲ್ವಿಚಾರಣೆ ಮಾಡಲಾಗುತ್ತದೆ. ಪಾಸಿಟಿವ್ ಪ್ರಕರಣಗಳು ವರದಿಯಾದ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಮಾರ್ಷಲ್‌ಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಘಗಳು ತಮ್ಮ ಸಿಬ್ಬಂದಿಗೆ ಲಸಿಕೆ ಹಾಕಿರುವುದನ್ನು ಮತ್ತು ಗ್ರಾಹಕರು ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು  ತ್ರಿಲೋಕ್ ಚಂದ್ರ ತಿಳಿಸಿದರು. 
 

SCROLL FOR NEXT