ಪ್ರಜ್ಞಾ ಸಿಂಗ್‌ ಠಾಕೂರ್‌ 
ರಾಜ್ಯ

ನಮಗೆ ಜೀವ ನೀಡುವುದೂ ಗೊತ್ತು- ಜೀವ ತೆಗೆಯುವುದೂ ಗೊತ್ತು: ಪ್ರಜ್ಞಾ ಸಿಂಗ್‌

ನಮಗೆ ಜೀವ ನೀಡುವುದೂ ಗೊತ್ತು, ಜೀವ ತೆಗೆಯುವುದೂ ಗೊತ್ತು ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ಶಿವಮೊಗ್ಗ: ನಮಗೆ ಜೀವ ನೀಡುವುದೂ ಗೊತ್ತು, ಜೀವ ತೆಗೆಯುವುದೂ ಗೊತ್ತು ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ತ್ರೈವಾರ್ಷಿಕ ಸಮ್ಮೇಳನ ಆಯೋಜಿಸಿದ್ದು, ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ದಿಕ್ಸೂಚಿ ಭಾಷಣದಲ್ಲಿ, ಹಿಂದೂಗಳು ಎಲ್ಲೇ ಇದ್ದರೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು. ಇದಕ್ಕೂ ಮೊದಲು ಉಡುಪಿಗೆ ದುರ್ಗಾ ಪೂಜೆಗೆ ಬರಬೇಕಿತ್ತು.

ಆದರೆ ಕಾಂಗ್ರೆಸ್‌ ಅವಧಿಯಲ್ಲಿ ನನ್ನ ಮೇಲೆ ಆದ ಹಲ್ಲೆಯಿಂದಾಗಿ ನೋವು ಹೆಚ್ಚಾಗಿ ಬರಲಾಗಲಿಲ್ಲ. ಆದರೆ ಶಿವಮೊಗ್ಗದ ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಬಂದಿದ್ದೇನೆ. ಜನನಿ ಜನ್ಮಭೂಮಿ ಎಂದು ನಾವು ನಂಬಿದ್ದೇನೆ. ಸ್ವರ್ಗಕ್ಕಿಂತ ಹೆಚ್ಚು ಎಂದು ಭಾವಿಸಿದ್ದೇವೆ. ಹಾಗಾಗಿ ಈ ಭೂಮಿಯ ಋಣ ತೀರಿಸಬೇಕು ಎಂದು ಕರೆ ನೀಡಿದ್ದಾರೆ.

ನಾನು ಬಿಜೆಪಿಯ ಸಂಸದೆ. ನಾನು ಜನರಿಗಾಗಿ ಸಂಸತ್ತಿನ ಒಳಗೆ, ಹೊರಗೆ ಹೋರಾಡುತ್ತಿದ್ದೇನೆ. ದೇಶದಲ್ಲಿ ಸಾಧು-ಸಂತರ ಮೇಲೆ ಹಲ್ಲೆ, ಹತ್ಯೆ ಆದಾಗ ಯಾರೂ ಮಾತನಾಡುವುದಿಲ್ಲ. ಆದರೆ ನಾವು ಸುಮ್ಮನೆ ಕೂರುವವರಲ್ಲ. ನನಗೂ ಸಾಕಷ್ಟು ಜೀವ ಬೆದರಿಕೆ ಬರುತ್ತದೆ. ಆದರೆ ನಾನು ಅಂತಹವರಿಗೆ ಎದುರು ಬಂದು ಮಾತನಾಡುವಂತೆ ಹೇಳುತ್ತೇನೆ.

ನಾನು ಇಂದು ನಾರಿಶಕ್ತಿಯಾಗಿ ಮಾತನಾಡುತ್ತಿದ್ದೇನೆ. ಸರ್ಕಾರಗಳ ಮೇಲೆ ನಂಬಿಕೆ ಇಡಬೇಡಿ. ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬರುತ್ತದೆ ಹೋಗುತ್ತದೆ. ಆದರೆ ಸಾಧು-ಸಂತರು ಬದಲಾಗುವುದಿಲ್ಲ. ಅವರನ್ನು ಕೊಲೆ ಮಾಡಲಾಗುವುದಿಲ್ಲ. ಏಕೆಂದರೆ ಅವರು ಸತ್ತ ಮೇಲೆ ಸಾಧುಗಳಾಗುತ್ತಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ನಾಳೆ ವಿಜಯ್ ಪ್ರಮಾಣವಚನ ಡೌಟ್; ಮತ್ತೆ ಸಂಖ್ಯಾಬಲ ಇಲ್ಲ ಎಂದ ಗವರ್ನರ್!

Google Trends ನಲ್ಲಿಯೂ ವಿಜಯ್- TVK ಅರ್ಭಟ! ಮತಗಳು, ಗೆಲುವಿನ ಬಗ್ಗೆ ಹೆಚ್ಚಿನ ಹುಡುಕಾಟ

IPL 2026: ಫಿನ್ ಅಲೆನ್ ಶತಕದ ಅಬ್ಬರ, ಡೆಲ್ಲಿ ವಿರುದ್ಧ KKR ಗೆ 8 ವಿಕೆಟ್ ಗಳ ಭರ್ಜರಿ ಜಯ!

ಹೌದು 2025 ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿದ್ವಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ 1 ವರ್ಷದ ಬಳಿಕ ಚೀನಾ ಒಪ್ಪಿಗೆ!

ಕಾಂಗ್ರೆಸ್‌ನ್ನು ಕಿತ್ತು ಹಾಕದೇ ಯುವಕರಿಗೆ ಉದ್ಯೋಗವಿಲ್ಲ! ನಿಖಿಲ್ ಕುಮಾರಸ್ವಾಮಿ ಕಿಡಿ

SCROLL FOR NEXT