ರಾಜ್ಯ

ಡಿ.31 ವೇಳೆಗೆ ಯಶಸ್ವಿನಿ ಯೋಜನೆಯಡಿ 30 ಲಕ್ಷ ನೋಂದಣಿಗೆ ಸರ್ಕಾರದ ಗುರಿ 

Srinivas Rao BV

ಬೆಳಗಾವಿ: ರಾಜ್ಯ ಸರ್ಕಾರ ಡಿಸೆಂಬರ್ 31ರ ವೇಳೆಗೆ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ 30 ಲಕ್ಷ ಮಂದಿಯ ನೋಂದಣಿಗೆ ಗುರಿ ಹೊಂದಿದೆ.
 
ಡಿ.26 ರ ವರೆಗೆ 19 ಲಕ್ಷ ಫಲಾನುಭವಿಗಳನ್ನು ನೋಂದಣಿ ಮಾಡಿದ್ದೇವೆ, ಗುರಿ ತಲುಪಲು ಹಾಕಿಕೊಳ್ಳಲಾಗಿರುವ ಗಡುವಿನ ವಿಸ್ತರಣೇ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಪರಿಷತ್ ಗೆ ತಿಳಿಸಿದರು.

2003 ರಲ್ಲಿ ಯೋಜನೆಯನ್ನು ಪ್ರಾರಂಭಿಸಲಾಯಿತು 2017-18 ವರೆಗೂ ಯೋಜನೆ ಕಾರ್ಯನಿರ್ವಹಣೆಯಲ್ಲಿತ್ತು, ಅದಾದ ಬಳಿಕ 2018 ರಲ್ಲಿ ಯೋಜನೆಯನ್ನು ಆರೋಗ್ಯ ಇಲಾಖೆಯೊಂದಿಗೆ ವಿಲೀನಗೊಳಿಸಲಾಯಿತು. ಆದರೆ ಯಶಸ್ವಿನಿ ಯೋಜನೆಗೆ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮತ್ತೆ ಜಾರಿಗೆ ತರಲು ನಿರ್ಧರಿಸಿದ ಸಿಎಂ ಬಸವರಾಜ 300 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಘೋಷಿಸಿದ್ದರು ಎಂದು ಸಹಕಾರ ಸಚಿವ ಸೋಮಶೇಖರ್ ಮಾಹಿತಿ ನೀಡಿದ್ದಾರೆ.

SCROLL FOR NEXT