ರಾಜ್ಯ

ಶೀಘ್ರವೇ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ: ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರಕ್ಕೆ ಸಿಎಂ ಬೊಮ್ಮಾಯಿ ಟಾಂಗ್​

Manjula VN

ಬೆಳಗಾವಿ: ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಶೀಘ್ರದಲ್ಲ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದರು.

ಬೆಳಗಾವಿಯಲ್ಲಿ ಕನ್ನಡ ಭವನ ರಂಗಮದಿರ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕನ್ನಡಕ್ಕೆ ಉಜ್ವಲ ಭವಿಷ್ಯವಿದೆ. ಸಂಸ್ಕೃತಿ, ಭಾಷೆಗೂ ಬಹಳ ನಿಕಟ ಸಂಬಂಧವಿದೆ. ಒಂದು ಭಾಷೆಯು ನಾಡಿಗೂ, ದೇಶಕ್ಕೂ ಮುಖ್ಯ. ಸಂಸ್ಕೃತಿ ಇಲ್ಲದೇ ನಾವು ಮನುಷ್ಯರಾಗಿ ಬಾಳಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸಂಸಾರದಲ್ಲಿ ಮನುಷ್ಯ ಹಾಗೂ ಪ್ರಾಣಿಗೆ ಇರುವ ವ್ಯತ್ಯಾಸ ಇಷ್ಟೇ. ನಮಗೆ ಹೆಚ್ಚಿನ ಬುದ್ಧಿಶಕ್ತಿ ಅಭಿವ್ಯಕ್ತ ಮಾಡುವ ಶಕ್ತಿ ಕೊಟ್ಟಿದ್ದಾನೆ. ಭಗವಂತ ಕೊಟ್ಟ ಶಕ್ತಿ ಹೇಗೆ ಬಳಕೆ ಮಾಡುತ್ತೇವೆಂಬುದು ಮುಖ್ಯ. ಇದರ ಮೇಲೆ ನಮ್ಮ ಕ್ರಿಯೆ, ಪ್ರತಿಕ್ರಿಯೆ ಸಂಸ್ಕೃತಿ ನಿಂತಿದೆ. ಮನುಕುಲದ ಅಭಿವೃದ್ಧಿಯಲ್ಲಿ ಭಾಷೆ ಬಹಳ ಮುಖ್ಯ ಕೆಲಸ. ಮನುಷ್ಯರಲ್ಲಿ ತತ್ವ  ಆದರ್ಶ, ಆಧ್ಯಾತ್ಮಕ ಶಕ್ತಿ ಅಳವಡಿಸಿಕೊಳ್ಳಲು ಭಾಷೆ ಉಪಯುಕ್ತವಾಗಿದೆ.

ಕನ್ನಡ ಶ್ರೀಮಂತ ಭಾಷೆಯಾಗಿದೆ. ಪಂಪ, ರನ್ನ, ರಾಘವಾಂಕರಿಂದ ಈಗಿನ ನೂತನ ಸಾಹಿತಿಗಳವರೆಗೂ ದೊಡ್ಡ ಕೊಡುಗೆ ನೀಡಿದ್ದಾರೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ಬಂದಿವೆ. ಹಳೆ ಕನ್ನಡ, ನುಡಿಗನ್ನಡ, ಜಾನಪದ ಕನ್ನಡವಿರುವಂತೆ ಕನ್ನಡ ಸಾಹಿತ್ಯದಲ್ಲಿಯೂ ಅನೇಕ ವಿಧಗಳಿವೆ. ವಚನ ಸಾಹಿತ್ಯ ತತ್ವ ತಾತ್ವಿಕತೆಯನ್ನು ನೀಡಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ. ಈ ಸಾಹಿತ್ಯಗಳನ್ನು ಇಡೀ ದೇಶದ ಜನರಿಗೆ ತಿಳಿಸಬೇಕಿದೆ. ಸಂಕುಚಿತ ಮನೋಭಾವದಿಂದ ಹೊರ ಬರಬೇಕು. ಸ್ವಾತಂತ್ರ್ಯ ಬಂದಾಗ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿತ್ತು‌‌. ಬೇರೆ ಭಾಷೆ ಕಲಿಯಬೇಕು. ಆದರೆ, ನಮ್ಮತನ ಬಿಟ್ಟು ಕೊಡಬಾರದು. ಕನ್ನಡ ನಮ್ಮ ಅಸ್ಮಿತೆ. ಕನ್ನಡ ಭಾಷೆಯಿಂದ ನಾವು ಗುರುತಿಸಲ್ಪಡುತ್ತೇವೆ ಎಂದು ತಿಳಿಸಿದರು.

ಕನ್ನಡ ದಿನನಿತ್ಯ ಬಳಕೆ ಮಾಡಿದರೆ ಉಳಿಯುತ್ತದೆ. ಕನ್ನಡಕ್ಕೆ ಅಂತರ್ಗತ ಶಕ್ತಿ ಇದೆ. ಕನ್ನಡವನ್ನು ಅಳಿಸಲು ಈ ಭೂಮಿಯ ಮೇಲಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ನಮ್ಮದು ಶಕ್ತಿ ಶಾಲಿ ಭಾಷೆ. ಹಿನ್ನಡೆಯಾದ್ರೆ ಅದು ನಮ್ಮಿಂದಾಗಬೇಕು, ಕನ್ನಡ ಭಾಷೆಯ ಶಕ್ತಿ ಬಳಕೆ ಮಾಡಿದರೆ ಕನ್ನಡವೂ ಬೆಳೆದು ನಾವೂ ಬೆಳೆಯುತ್ತೇವೆ. ಕನ್ನಡ ಭಾಷೆಗೆ ಆತಂಕವಿಲ್ಲ. ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಬಳಸಿದಷ್ಟೂ ನಮ್ಮನ್ನು ಶಕ್ತಿ ಶಾಲಿಯಾಗಿಸುತ್ತದೆ. ಸಕಾರಾತ್ಮಕವಾಗಿ ಮುಂದುವರೆದಾಗ ನಮಗೆ ಹಾಗೂ ಕನ್ನಡಕ್ಕೆ ಉತ್ತಮ ಭವಿಷ್ಯವಿದೆ. ಸಾಧನೆ ಕನ್ನಡದಿಂದ ಇದೆ ಎಂದು ಮರೆಯಬೇಡಿ ಎಂದರು.

ಡಿ ಭಾಗದ ಶಾಲೆಗಳ ಅಭಿವೃದ್ಧಿ ಬಗ್ಗೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುವುದು. ಗಡಿಯಾಚೆಗಿನ ಕನ್ನಡ ಶಾಲೆಗಳ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಲಾಗುವುದು. ಈಗಾಗಲೇ 100 ಕೋಟಿ ರೂ.ಗಳನ್ನು ಗಡಿ ಭಾಗದ ಅಭಿವೃದ್ಧಿಗೆ ನೀಡಲಾಗಿದೆ. ಕೆಲವೇ ದಿನಗಲ್ಲಿ ಗಡಿ ಭಾಗದಲ್ಲಿ ಏನಾಗಬೇಕೆಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸೂಚಿಸಿದರೆ ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.

ಗಡಿಯಲ್ಲಿ ಸಮಸ್ಯೆ ಹುಟ್ಟುಹಾಕುವ ಯತ್ನ
ಗಡಿ ಭಾಗದಲ್ಲಿ ಹತ್ತು ಹಲವು ಸಮಸ್ಯೆ ಹುಟ್ಟುಹಾಕುವ ಕೆಲಸ ನಡೆಯುತ್ತಿದೆ. ಆ ಕಡೆಯವರು ರಾಜಕೀಯಕ್ಕೋಸ್ಕರ ಮಾತನಾಡುತ್ತಾರೆ. ಕನ್ನಡ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮೀಸಲಿಡಲಾಗಿದೆ. ಬೆಳಗಾವಿ ಗಡಿ ವಿಚಾರ ಕೇಳಿದರೆ ಇಡೀ ಜಗತ್ತು ಮಾತನಾಡುತ್ತದೆ. ಇದು ನಮ್ಮ ನಿಮ್ಮ ಪ್ರಶ್ನೆ ಅಲ್ಲ. ಕೆಲವರು ಅಲ್ಲಿಯವರು ಮಾತನಾಡುತ್ತಾರೆ. ಕನ್ನಡ ಗಟ್ಟಿ ಮಾಡಲು ನಾವು ಸದಾ ಸಿದ್ಧರಿದ್ದೇವೆ. ಅರ್ಜಿಕೊಟ್ಟು ಹುಟ್ಟಲು ಸಾಧ್ಯವಿಲ್ಲ. ನಾವು ಕನ್ನಡ ನಾಡಲ್ಲಿ ಹುಟ್ಟಿದ್ದೇವೆ ಅಂದರೆ ನಾವು ಕನ್ನಡಿಗರು. ಅರ್ಜಿ ಕೊಟ್ಟು ಹುಟ್ಟಿದರೆ ಬೇರೆ. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಮೃತ್ಯುಂಜಯ ಎಂದು ಹೆಸರಿಟ್ಟುಕೊಳ್ಳಬಹುದು. ಆದರೆ, ಮೃತ್ಯುವನ್ನು ಜಯಿಸಲು ಸಾಧ್ಯವಿಲ್ಲ ಎಂದರು.

ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಬಗ್ಗೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುವುದು. ಗಡಿಯಾಚೆಗಿನ ಕನ್ನಡ ಶಾಲೆಗಳ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಲಾಗುವುದು. ಈಗಾಗಲೇ 100 ಕೋಟಿ ರೂ.ಗಳನ್ನು ಗಡಿ ಭಾಗದ ಅಭಿವೃದ್ಧಿಗೆ ನೀಡಲಾಗಿದೆ. ಕೆಲವೇ ದಿನಗಲ್ಲಿ ಗಡಿ ಭಾಗದಲ್ಲಿ ಏನಾಗಬೇಕೆಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸೂಚಿಸಿದರೆ ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.

SCROLL FOR NEXT