ರಾಜ್ಯ

ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು: 60 ಎಕರೆ ಅರಣ್ಯ ಬೆಂಕಿಗಾಹುತಿ

Manjula VN

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್‌ ಸಮೀಪದ ಸೋಮನಕಾಡು ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 60 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.

ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಳೆಗಾಲದ ನಂತರ ಜಿಲ್ಲೆಯು ಕಾಡ್ಗಿಚ್ಚಿನ ಭೀತಿ ಎದುರಿಸುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 60 ಎಕರೆ ಅರಣ್ಯ ನಾಶವಾಗಿದ್ದು, ಬೆಂಕಿಯಿಂದ ಸರೀಸೃಪಗಳು, ಕೀಟಗಳು ಮತ್ತು ಪಕ್ಷಿಗಳು ಸಾವನ್ನಪ್ಪಿರುವ ಸಾಧ್ಯತೆಗಳಿವೆ.

ಚಿಕ್ಕಮಗಳೂರು ವಿಭಾಗದ ಡಿಸಿಎಫ್‌ಒ ಎನ್‌ಇ ಕ್ರಾಂತಿ ಅವರು ಪ್ರತಿಕ್ರಿಯೆ ನೀಡಿ, ಬೆಂಕಿ ಅವಘಡದಲ್ಲಿ ಕಿಡಿಗೇಡಿಗಳ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

SCROLL FOR NEXT