ರಾಜ್ಯ

ಆ್ಯಸಿಡ್ ದಾಳಿ ಸಂತ್ರಸ್ತೆಯ ಹುರಿದುಂಬಿಸಿದ ನಟ ಕಿಚ್ಚಾ ಸುದೀಪ್

Srinivasamurthy VN

ಬೆಂಗಳೂರು: ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ತೆಯನ್ನು ನಟ ಕಿಚ್ಚಾ ಸುದೀಪ್ ಹುರಿದುಂಬಿಸುವ ಮೂಲಕ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.

24 ವರ್ಷದ ಆಶಾ (ಹೆಸರು ಬದಲಾಯಿಸಲಾಗಿದೆ) ಮೇಲೆ ಆಸಿಡ್ ದಾಳಿಯಾಗಿತ್ತು. ಬಳಿಕ ನಿರಂತರ ಚಿಕಿತ್ಸೆಯ ಬಳಿಕ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದರು. ಗ್ರಾಫ್ಟಿಂಗ್, ನ್ಯೂಟ್ರಿಷನ್ ಥೆರಪಿ, ಡ್ರೆಸ್ಸಿಂಗ್, ಫಿಸಿಯೋಥೆರಪಿಯ ಹಲವಾರು ಚಿಕಿತ್ಸೆಗಳ ನಡುವೆ ಸಂತ್ರಸ್ಥೆ ತಮ್ಮ ನೆಚ್ಚಿನ ನಟ ಕಿಚ್ಚಾ ಸುದೀಪ್ ರನ್ನು ನೋಡಬೇಕು ಎಂದು ಮಹದಾಸೆ ವ್ಯಕ್ತಪಡಿಸಿದ್ದರು. ಇದೀಗ ಅವರ ಆಸೆಯನ್ನು ನಟ ಸುದೀಪ್ ಈಡೇರಿಸಿದ್ದಾರೆ.

ಸಂತ್ರಸ್ಥೆ ಆಶಾ ಎರಡು ತಿಂಗಳ ನಿರಂತಕ ಚಿಕಿತ್ಸೆ ಬಳಿಕ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಗುಣಮುಖರಾದ ಬಳಿಕ ಸಂತ್ರಸ್ಥೆ ಆಶಾ ಸುದೀಪ್ ರೊಂದಿಗೆ ಮಾತನಾಡಿದ್ದು, ಅವರ ಮಹದಾಸೆ ಈಡೇರಿದ ಬಳಿಕ ಸಂತ್ರಸ್ಥೆಯ ಮುಖದಲ್ಲಿ ನಗು ಮರಳಿದೆ.

ನಟ ಸುದೀಪ್ ಅವರು ಸಂತ್ರಸ್ಥೆ ಆಶಾರೊಂದಿಗೆ ಮಾತನಾಡಿದರು. ಸುದೀಪ್ ಜೊತೆ ಮಾತನಾಡಿದ ಬಳಿಕ ಆಶಾ ಸಂತಸದಿಂದ್ದಾಳೆ ಎಂದು ಆಶಾ ಅವರ ಚಿಕ್ಕಪ್ಪ ಸುಂದರೇಶ್ ಹೇಳಿದರು. 

ಇನ್ನು ಪ್ರಕರಣದ ಕುರಿತು ಮಾತನಾಡಿದ ಅವರು, ಆ್ಯಸಿಡ್ ದಾಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ನಾವು ಅವಳಿಗೆ ಸುಳ್ಳು ಹೇಳಿದ್ದರೂ, ಆಕೆಗೆ ಈಗ ಸತ್ಯ ತಿಳಿದಿದೆ. ಆಘಾತದಿಂದ ಚೇತರಿಸಿಕೊಂಡಿದ್ದಾಳೆ. ಆರಂಭಿಕ ಹಂತಕ್ಕಿಂತ ಭಿನ್ನವಾಗಿ, ಅವಳು ತುಲನಾತ್ಮಕವಾಗಿ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿದ್ದಾಳೆ ಮತ್ತು ಘನ ಆಹಾರ ಸೇವಿಸಲು ಪ್ರಾರಂಭಿಸಿದ್ದಾಳೆ. ಆದರೆ ಆಕೆಗೆ ಸ್ವಂತವಾಗಿ ನಡೆಯಲು ಮತ್ತು ವಾಶ್ ರೂಂ ಬಳಸಲು ಸಾಧ್ಯವಾಗುತ್ತಿಲ್ಲ. ಅವಳ ಎಡಗಣ್ಣಿನ ಮೇಲಿನ ಗಾಯವು ಅವಳನ್ನು ಇನ್ನೂ ಕಾಡುತ್ತಿದೆ. ಅವಳು ತನ್ನನ್ನು ತೊಡಗಿಸಿಕೊಳ್ಳಲು ಪುಸ್ತಕಗಳನ್ನು ಓದುತ್ತಿದ್ದಾಳೆ, ಸಂಗೀತವನ್ನು ಕೇಳುತ್ತಿದ್ದಾಳೆ” ಎಂದು ಸುಂದರೇಶ್ ಹೇಳಿದರು. 

ಅಂತೆಯೇ "ವೈದ್ಯರು ಡಿಸ್ಚಾರ್ಜ್ ಬಗ್ಗೆ ಏನನ್ನೂ ಹೇಳಿಲ್ಲ, ಶೀಘ್ರದಲ್ಲೇ ಅವಳನ್ನು ಐಸಿಯುನಿಂದ ಸ್ಥಳಾಂತರಿಸಲಾಗುವುದು" ಎಂದು ಅವರು ಹೇಳಿದರು.
 

SCROLL FOR NEXT