ರಾಜ್ಯ

ಕಾಫಿನಾಡು ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ, ದಕ್ಷಿಣ ಕನ್ನಡ ಗಡಿಭಾಗದಲ್ಲೂ ಮುಂದುವರಿದ ವರ್ಷಧಾರೆ

Sumana Upadhyaya

ಮಡಿಕೇರಿ: ಕೊಡಗು ಮತ್ತು ದಕ್ಷಿಣ ಕನ್ನಡ ಗಡಿಭಾಗ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ಭಾನುವಾರ ಕೂಡ ಸತತ ಮಳೆಯಾಗುತ್ತಿದೆ. ಆಷಾಢ ಮಳೆ ಕಾಫಿನಾಡು ಕೊಡಗಿನಲ್ಲಿ ಸತತವಾಗಿ ಸುರಿಯುತ್ತಿದ್ದು, ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಪ್ರವಾಹದ ಭೀತಿ ಎದುರಾಗಿದೆ. 

ಹಾರಂಗಿ ಜಲಾಶಯವು ಭರ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಶಾಸಕ ಎಂ. ಪಿ. ಅಪ್ಪಚ್ಚುರಂಜನ್ ಬಾಗಿನ ಅರ್ಪಿಸಿದ್ದಾರೆ. ಕೇವಲ ಮಳೆಯೊಂದೇ ಸುರಿಯುವುದಾಗಿದ್ದರೆ, ಜನರು ಅದಕ್ಕೆ ಹೆದರುತ್ತಿರಲಿಲ್ಲ. ಮಳೆಯ ಜೊತೆಗೆ ಭೂಮಿ ಕಂಪಿಸುತ್ತಿದೆ. 

2018ರ ನಂತರ ಕೊಡಗಿನ ಜನರಿಗೆ ಭಾರೀ ಮಳೆಯಾದರೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಮಡಿಕೇರಿ ತಾಲೂಕಿನಲ್ಲೂ ಭಾರಿ ಮಳೆ ಮಳೆ ಬಿರುಸು ಪಡೆದುಕೊಳ್ಳುತ್ತಿದ್ದು, ಕಳೆದ ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 53.01 ಮಿ. ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ 779.73 ಮಿ. ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 946.74 ಮಿ. ಮೀ ಮಳೆಯಾಗಿದೆ. ಮಡಿಕೇರಿ, ವಿರಾಜಪೇಟೆಯಲ್ಲಿ ಭಾರೀ ಮಳೆಯಾಗಿದೆ. 

SCROLL FOR NEXT