ರಾಜ್ಯ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ವಿರುದ್ಧ ಹಲವು ಎಫ್‌ಐಆರ್‌ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Lingaraj Badiger

ಬೆಂಗಳೂರು: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಚಿಕ್ಕಮಗಳೂರು ಜಿಲ್ಲೆಯ ಶಾಲೆಯೊಂದರ ದೈಹಿಕ ಶಿಕ್ಷಕರೊಬ್ಬರ ವಿರುದ್ಧ ಹಲವು ಎಫ್‌ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದನ್ನು ಹಲವು ಎಫ್‌ಐಆರ್‌ಗಳು ಎಂದು ಹೇಳಲು ಸಾಧ್ಯವಿಲ್ಲ. ಆರೋಪಗಳು ಸಾಮಾನ್ಯವಾಗಿದ್ದರೂ ಸಂತ್ರಸ್ತರು ಮತ್ತು ಘಟನೆಗಳ ದಿನಾಂಕ ವಿಭಿನ್ನವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ ಮತ್ತು ಪೋಕ್ಸೊ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿರುವ 13 ಎಫ್‌ಐಆರ್‌ಗಳನ್ನು ಶಿಕ್ಷಕ ಪ್ರಶ್ನಿಸಿ ಕೆ.ಟಿ.ಪ್ರಭುನಾಯ್ಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಜಾಗೊಳಿಸಿದ್ದಾರೆ.

ಆರೋಪಿ ಶಿಕ್ಷಕ ಮಾಡಿದ ಅಪರಾಧದ ಬಗ್ಗೆ ವಿದ್ಯಾರ್ಥಿನಿಯರ ಪೋಷಕರು ದೂರು ನೀಡುತ್ತಾರೆ ಮತ್ತು ಘಟನೆಗಳು ಸೆಪ್ಟೆಂಬರ್ 2021 ರಿಂದ ಜನವರಿ 2022 ರವರೆಗೆ ಒಂದರಿಂದ ಮೂರು ತಿಂಗಳವರೆಗೆ ನಡೆದಿವೆ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ತನಿಖೆಗೆ ಪ್ರತಿಯೊಂದು ಸತ್ಯವೂ ಅಗತ್ಯವಾಗಿದೆ  ಎಂದು ನ್ಯಾಯಾಲಯ ಹೇಳಿದೆ.

ಶಿಕ್ಷಕನ ವಿರುದ್ಧ ಆರೋಪ ಕೇಳಿಬಂದ ನಂತರ ಬಿಇಒ ಅವರು ದೂರು ದಾಖಲಿಸಿದ್ದರು. ನಂತರ ತಮ್ಮ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿದ ಪೋಷಕರು ಅದೇ ಅಪರಾಧಕ್ಕಾಗಿ ಶಿಕ್ಷಕನ ವಿರುದ್ಧ ವಿವಿಧ ದಿನಾಂಕಗಳಲ್ಲಿ ಹಲವು ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ.

SCROLL FOR NEXT