ನಟಿ ಪವಿತ್ರಾ ಲೋಕೇಶ್(ಸಂಗ್ರಹ ಚಿತ್ರ) 
ರಾಜ್ಯ

'ನನ್ನನ್ನು ಹಿಂಬಾಲಿಸುತ್ತಿರುವ ಸುದ್ದಿವಾಹಿನಿಗಳಿಂದ ಮಾನಸಿಕ ಹಿಂಸೆಯಾಗಿದೆ': ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪವಿತ್ರಾ ಲೋಕೇಶ್

ನರೇಶ್ -ರಮ್ಯಾ ರಘುಪತಿ ನಡುವಣ ಕುಟುಂಬ ಕಲಹ ಬೀದಿಗೆ ಬಂದು ಕನ್ನಡ ಮೂಲದ ಬಹುಭಾಷಾ ನಟಿ ಪವಿತ್ರಾ ಲೋಕೋಶ್ ವಿನಲ್ ನಂತೆ ಸಮಾಜದ ಕಣ್ಣಿಗೆ ಕಾಣುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ಮಧ್ಯೆ ಅನೈತಿಕ ಸಂಬಂಧವಿದ್ದು ಮದುವೆಯಾಗಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಮೈಸೂರು: ನರೇಶ್ -ರಮ್ಯಾ ರಘುಪತಿ ನಡುವಣ ಕುಟುಂಬ ಕಲಹ ಬೀದಿಗೆ ಬಂದು ಕನ್ನಡ ಮೂಲದ ಬಹುಭಾಷಾ ನಟಿ ಪವಿತ್ರಾ ಲೋಕೋಶ್ ವಿಲನ್ ನಂತೆ ಸಮಾಜದ ಕಣ್ಣಿಗೆ ಕಾಣುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ಮಧ್ಯೆ ಅನೈತಿಕ ಸಂಬಂಧವಿದ್ದು ಮದುವೆಯಾಗಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಕೆಲ ದಿನಗಳ ಹಿಂದೆಯಷ್ಟೆ ಪವಿತ್ರಾ ಲೋಕೇಶ್ ಮೈಸೂರಿನ ಸೈಬರ್‌ ಠಾಣೆಯಲ್ಲಿ ತಮ್ಮ ಹೆಸರಲ್ಲಿ ಯಾರೋ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅನುಚಿತವಾಗಿ ವರ್ತಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಕೋರಿ ದೂರು ದಾಖಲಿಸಿದ್ದರು. ಇದೀಗ ಸುದ್ದಿ ವಾಹಿನಿಗಳು ನನ್ನನ್ನು ಹಿಂಬಾಲಿಸುತ್ತಿದ್ದು, ನನ್ನ ನೆಮ್ಮದಿ ಭಂಗಗೊಳಿಸಿ, ಮಾನಸಿಕವಾಗಿ ಘಾಸಿ ಮಾಡಿವೆ. ಈ ಸಂಬಂಧ ಅಂಥ ವಾಹಿನಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಮೊನ್ನೆ ಶನಿವಾರ ಸಂಜೆ ಮೈಸೂರಿನ ವಿವಿ ಪುರಂ ಪೊಲೀಸ್‌ ಠಾಣೆಗೆ ಪವಿತ್ರಾ ಲೋಕೇಶ್‌ ದೂರು ನೀಡಿದ್ದಾರೆ.

ತೆಲಗು ನಟ ನರೇಶ್ ಬಾಬು ಜೊತೆ ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರು ಮದುವೆಯಾಗಿದ್ದಾರೆಂಬ ಸುದ್ದಿ ಇತ್ತೀಚೆಗೆ ಸದ್ದು ಮಾಡುತ್ತಿದೆ. ಅದಕ್ಕೆ ಪುಷ್ಟಿ ಎಂಬಂತೆ ನಿನ್ನೆ ಭಾನುವಾರ ಬೆಳಗ್ಗೆ ಮೈಸೂರಿನ ಖಾಸಗಿ ಹೊಟೇಲ್ ನ ಕೊಠಡಿಯಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ತಂಗಿದ್ದು ರಮ್ಯಾ ರಘುಪತಿ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದು ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಕೊನೆಗೆ ಪೊಲೀಸರ ರಕ್ಷಣೆಯಲ್ಲಿ ಅವರು ಅಲ್ಲಿಂದ ಹೊರಹೋಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT