ಮೋಹನ್ ಭಾಗವತ್ 
ರಾಜ್ಯ

ಧಾರ್ಮಿಕ ಮತಾಂತರಗಳಿಂದ ಭಾರತವನ್ನು ಕಾಪಾಡಬೇಕು: ಮೋಹನ್ ಭಾಗವತ್

ಭಾರತವನ್ನು ರಕ್ಷಿಸಲು ಧಾರ್ಮಿಕ ಮತಾಂತರಗಳು ನಿಲ್ಲಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಚಿತ್ರದುರ್ಗ: ಭಾರತವನ್ನು ರಕ್ಷಿಸಲು ಧಾರ್ಮಿಕ ಮತಾಂತರಗಳು ನಿಲ್ಲಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ದಲಿತರು ಮತ್ತು ಹಿಂದುಳಿದ ವರ್ಗಗಳ ವಿವಿಧ ಮಠಗಳ 21 ಮಠಾಧೀಶರೊಂದಿಗೆ ಸರ್ಸಂಘಚಾಲಕ್ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಸಭೆ ನಡೆಸಿದರು. ಮಾದಾರ ಚನ್ನಯ್ಯ ಗುರುಪೀಠದಲ್ಲಿ ಸೋಮವಾರ ಮತ್ತು ಮಂಗಳವಾರ ನಡೆದ “ಆಹ್ವಾನಿತರಿಗೆ ಮಾತ್ರ” ಕಾರ್ಯಕ್ರಮದಲ್ಲಿ ಶ್ರೀಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ರಕ್ಷಣೆಗೆ ದೇಶಾದ್ಯಂತ ನಡೆಯುತ್ತಿರುವ ಧಾರ್ಮಿಕ ಮತಾಂತರಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಭಾರತ ಭಾರತವಾಗಿ ಉಳಿಯಬೇಕಾದರೆ, ಇಂತಹ ಧಾರ್ಮಿಕ ಮತಾಂತರಗಳು ನಿಲ್ಲಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಒಡಕು ಮೂಡುತ್ತದೆ ಎಂದರು.

ಅಂತೆಯೇ ಆಧುನಿಕ ಶಿಕ್ಷಣವು ನಮ್ಮ ಸಂಸ್ಕೃತಿಯನ್ನು ಕಡಿಮೆ ಮಾಡಿದೆ ಮತ್ತು ಯುವಕರು ಮತ್ತು ಮಕ್ಕಳಲ್ಲಿ ಸರಿಯಾದ ಸಂಸ್ಕೃತಿಯನ್ನು ನೀಡಲು ಸ್ವಾಮೀಜಿಗಳ ಮೇಲೆ ದೊಡ್ಡ ಹೊರೆ ಇದೆ. ಭವಿಷ್ಯದಲ್ಲಿ ಸ್ವಾಮೀಜಿಗಳ ಎಲ್ಲಾ ಸಮಾಜ ನಿರ್ಮಾಣ ಕಾರ್ಯಗಳಿಗೆ ಆರ್‌ಎಸ್‌ಎಸ್ ಬೆಂಬಲ ನೀಡುವುದಾಗಿ ಭರವಸೆ ನೀಡಿದ ಅವರು, ದಾರ್ಶನಿಕರು ಸಮಾಜವನ್ನು ತಮ್ಮದೇ ಆದ ರೀತಿಯಲ್ಲಿ ಪರಿವರ್ತಿಸಬೇಕು. ಆರ್‌ಎಸ್‌ಎಸ್ ವ್ಯವಸ್ಥಿತ ಪರಿವರ್ತನೆಯಲ್ಲಿ ನಂಬಿಕೆ ಹೊಂದಿದೆ ಮತ್ತು ಅದು ನಿಧಾನವಾಗಿ ಮತ್ತು ಸ್ಥಿರವಾಗಿ ನಡೆಯಬೇಕು. ಸಮಾಜದ ಎಲ್ಲಾ ವರ್ಗಗಳನ್ನು ಒಗ್ಗೂಡಿಸುವ ಸಮಯ ಬಂದಿದೆ. ಇದು ನಿರಂತರ ಸಂವಹನ ಮತ್ತು ಮನಸ್ಸುಗಳ ಏಕೀಕರಣದ ಮೂಲಕ ನಡೆಯಬಹುದು ಎಂದು ಅವರು ಹೇಳಿದರು.

ಅಸ್ಪೃಶ್ಯತೆ ಮತ್ತು ಅಸಮಾನತೆಯು ಸಮಾಜದ ಪ್ರಮುಖ ಅಡಚಣೆಯಾಗಿದೆ ಎಂದು ಹೇಳಿದ ಅವರು, ಶತಮಾನಗಳಿಂದ ಪ್ರಚಲಿತದಲ್ಲಿರುವ ಈ ಅನಿಷ್ಟಗಳನ್ನು ಹೋಗಲಾಡಿಸಬೇಕು ಎಂದು ಹೇಳಿದರು. “ಆದರೆ ಜನರ ಮನಸ್ಸಿನಿಂದ ಕಳಂಕವನ್ನು ತೆಗೆದುಹಾಕಲು ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೂ ತುಳಿತಕ್ಕೊಳಗಾದವರು ತಾಳ್ಮೆಯಿಂದ ಇರಬೇಕು. ಇಂತಹ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಆರ್‌ಎಸ್‌ಎಸ್ ಶ್ರಮಿಸುತ್ತಿದೆ. ಹಿಂದೂ ಸಮಾಜದ ಅಡಿಯಲ್ಲಿ ಎಲ್ಲರೂ ಒಂದಾಗಿದ್ದಾರೆ ಎಂದು ಅವರು ಹೇಳಿದರು.

ಭಾಗವತ್ ಅವರು ಸೋಮವಾರ ಮತ್ತು ಮಂಗಳವಾರ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಗುರುಪೀಠದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳ ಸ್ವಾಮೀಜಿಗಳೊಂದಿಗೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದರು. ಭಗವತ್ ಅವರಿಗೆ ಪ್ರಸ್ತುತ ಝಡ್ ಪ್ಲಸ್ ಭದ್ರತೆಯೊಂದಿಗೆ ವಿವಿಐಪಿ ಆಗಿರುವುದರಿಂದ ಸ್ಥಳವು ವರ್ಚುವಲ್ ಖಾಕಿ ಕೋಟೆಯಾಗಿ ಮಾರ್ಪಟ್ಟಿತ್ತು.

ಇನ್ನು ಕಾರ್ಯಕ್ರಮದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮಿ, ಕುಂಚಟಿಗ ಗುರುಪೀಠದ ಡಾ.ಶಾಂತವೀರ ಸ್ವಾಮಿ, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮಿ, ಮಡಿವಾಳ ಮಾಚಿದೇವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಆಂತೆಯೇ ಆರ್‌ಎಸ್‌ಎಸ್ ಮುಖಂಡರಾದ ಮುಕುಂದ ಸಿಆರ್, ಸುಧೀರ್ ಮತ್ತು ಎನ್ ತಿಪ್ಪೇಸ್ವಾಮಿ, ಸಮರಸ್ಯ ವೇದಿಕೆಯ ಪಟ್ಟಾಭಿರಾಮ್, ಗುರುಪ್ರಸಾದ್, ನಂದೀಶ್ ಮತ್ತು ವಾದಿರಾಜ್, ವಿಎಚ್‌ಪಿಯ ಬಸವರಾಜ್ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT