ಎಂಪಿ ಕುಮಾರಸ್ವಾಮಿ 
ರಾಜ್ಯ

ಯಡಿಯೂರಪ್ಪಗಾಗಿ ಮಾಡಿದ್ದ ಹರಕೆ ವಾಪಸ್: ದೇವಸ್ಥಾನಕ್ಕೆ ರಥ ನೀಡುವ ಯೋಜನೆ ಕೈಬಿಟ್ಟ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಪಲ್ಗುಣಿ ಗ್ರಾಮದ ಕಲಾನಾಥೇಶ್ವರ ದೇವಸ್ಥಾನಕ್ಕೆ ಮರದ ರಥವನ್ನು ಕೊಡುಗೆಯಾಗಿ ನೀಡುವ ಹರಕೆ ಹಿಂಪಡೆದಿದ್ದಾರೆ.

ಬೆಂಗಳೂರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಪಲ್ಗುಣಿ ಗ್ರಾಮದ ಕಲಾನಾಥೇಶ್ವರ ದೇವಸ್ಥಾನಕ್ಕೆ ಮರದ ರಥವನ್ನು ಕೊಡುಗೆಯಾಗಿ ನೀಡುವ ಹರಕೆ ಹಿಂಪಡೆದಿದ್ದಾರೆ.

2019ರಲ್ಲಿ ಬಿಜೆಪಿಯ ನಾಯಕ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ದೇವಸ್ಥಾನಕ್ಕೆ ರಥವನ್ನು ನೀಡುವುದಾಗಿ ಕುಮಾರಸ್ವಾಮಿ ಹರಕೆ ಹೊತ್ತುಕೊಂಡಿದ್ದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಶಾಸಕ ಎಂ ಪಿ ಕುಮಾರಸ್ವಾಮಿ, ರಥ ನಿರ್ಮಾಣಕೆಕ 40 ಲಕ್ಷ ರು ಅಗತ್ಯವಿದೆ, ಸರ್ಕಾರದಿಂದ 25 ಲಕ್ಷ ಸಹಾಯ ಧನ ಕೋರಿದ್ದೇನೆ, ಸರ್ಕಾರ ನೀಡಿರುವ 25 ಲಕ್ಷ ಹಣದ ಜೊತೆಗೆ ಉಳಿದ ಹಣವನ್ನು ಹೊಂದಿಸಲು ಸಾಧ್ಯವಾಗಲಿಲ್ಲ, ಹೀಗಾಗಿ ರಥ ನೀಡುವ ಯೋಜನೆಯನ್ನು ಕೈ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ಯಡಿಯೂರಪ್ಪ ದೀರ್ಘಾವದಿಯಲ್ಲಿ ಮುಖ್ಯಮಂತ್ರಿಯಾಗಿರಲಿಲ್ಲ ಎಂದು ಹೇಳಿದ್ದಾರೆ. ರಥ ನಿರ್ಮಾಣಕ್ಕಾಗಿ ಲೋನ್ ಪಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ರಥ ನಿರ್ಮಾಣಕ್ಕೆ ಆರ್ಡರ್ ಮಾಡಲು ಹಣದ ವ್ಯವಸ್ಥೆ ಮಾಡುವಂತೆ ಗ್ರಾಮದ ನಿವಾಸಿಗಳಿಗೆ ಹೇಳಿದ್ದೆ. ಆದರೆ, ಇದುವರೆಗೆ ಭಕ್ತರಿಂದ ಕೇವಲ 50 ಸಾವಿರ ರೂ ಹಣ ಸಂಗ್ರಹವಾಗಿದೆ. 2021ರ ಜನವರಿಯಲ್ಲಿ ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಕುಮಾರಸ್ವಾಮಿ 25 ಲಕ್ಷ ರೂ. ಹಣ ನೀಡುವಂತೆ ಕೋರಿದ್ದರು.

ಎಂಪಿ ಕುಮಾರಸ್ವಾಮಿ ಅವರ ಮನವಿಯನ್ನು ಪರಿಗಣಿಸಿದ್ದ ಯಡಿಯೂರಪ್ಪ ಅಂದಿನ ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿ ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಕಲಾನಾಥೇಶ್ವರ ದೇವಸ್ಥಾನಕ್ಕೆ 25 ಲಕ್ಷ ರೂ. ಹಣ ನೀಡುವಂತೆ ಹೇಳಿದ್ದರು, ಆದರೆ, ಹಣ ಇನ್ನೂ ಬಿಡುಗಡೆಯಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!