ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಡ್ಯಾಂನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ 32 ವರ್ಷದ ಪರಶುರಾಮ ಹಲಕರ್ಣಿ ಎಂಬಾತನನ್ನು ಗ್ರಾಮದ ಆಂಜನೇಯ ಮಂದಿರದ ಹತ್ತಿರ ಮೂವರು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ.
ಘಟನೆ ನಂತರ ಪೊಲೀಸರು 30 ವರ್ಷದ ಬಸವರಾಜ ಎಂಬಾತನನ್ನು ಬಂಧಿಸಿದ್ದು ಇದಾದ ಕೆಲ ಸಮಯದ ನಂತರ ಆರೋಪಿಗಳಾದ ಮಂಜುನಾಥ ಮತ್ತು ಕೆಂಪಣ್ಣ ನೇಸರಗಿ ತಾವಾಗಿಯೇ ಬಂದು ಪೊಲೀಸರು ಮುಂದೆ ಶರಣಾಗಿದ್ದಾರೆ.
ಪರಶುರಾಮ ಹಲಕರ್ಣಿ ಹಾಗೂ ಆರೋಪಿಗಳು ನೆರೆಮನೆಯವರಾಗಿದ್ದು ಹಳೆಯ ವೈಷಮ್ಯವೇ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ. ಕೊಲೆಗೆ ನಿಖರ ಕಾರಣ ವಿಚಾರಣೆ ಬಳಿಕ ತಿಳಿಯಲಿದೆ ಎಂದು ಎಸ್ ಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.