ಚಿಕ್ಕಮಗಳೂರು ಜಿಲ್ಲಾ ಅಹಿಂದ ಒಕ್ಕೂಟದ ಅಧ್ಯಕ್ಷ ಶಾಂತೇಗೌಡ ಸಭೆಯಲ್ಲಿ ಮಾತನಾಡುತ್ತಿರುವ ಚಿತ್ರ 
ರಾಜ್ಯ

ರಾಜಕೀಯ ಬದಿಗೊತ್ತಿ ಸಿದ್ದರಾಮಯ್ಯ ಜನ್ಮ ದಿನೋತ್ಸವ ಯಶಸ್ವಿಗೊಳಿಸಲು ಪ್ರತಿಜ್ಞೆ

ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನೋತ್ಸವಕ್ಕೆ ವಿವಿಧ ಸಂಘಟನೆ ಮತ್ತು ಒಕ್ಕೂಟಗಳ ಮುಖಂಡರು ಬೆಂಬಲ ಘೋಷಿಸಿದ್ದಾರೆ.

ಚಿಕ್ಕಮಗಳೂರು: ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನೋತ್ಸವಕ್ಕೆ ವಿವಿಧ ಸಂಘಟನೆ ಮತ್ತು ಒಕ್ಕೂಟಗಳ ಮುಖಂಡರು ಬೆಂಬಲ ಘೋಷಿಸಿದ್ದಾರೆ. ಇಲ್ಲಿನ ಕನಕ ಭವನದಲ್ಲಿ ನಡೆದ ಜಿಲ್ಲಾ ಅಹಿಂದ ಫೆಡರೇಷನ್ ಜಿಲ್ಲಾ ಸಭೆಯಲ್ಲಿ ಜನ್ಮ ದಿನೋತ್ಸವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡುವುದಾಗಿ ವಿವಿಧ ಮುಖಂಡರು ಹೇಳಿದರು.

ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ಪರಮೇಶ್ ಮಾತನಾಡಿ, ಸಿದ್ದರಾಮಯ್ಯ ಅವರು ಜಾತ್ಯತೀತ ಗುಣ ಹಾಗೂ ಜನಪರ ಕಾಳಜಿ ಹೊಂದಿದ್ದು,  ಸಮಾಜದ ಎಲ್ಲ ವರ್ಗದವರ ಆಸ್ತಿಯಾಗಿದ್ದಾರೆ.  ಬಿಎಸ್ಪಿ ಕಾರ್ಯಕರ್ತರು ಕೂಡಾ ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ ಎಂದರು. 

ಅರಸು ಸಮುದಾಯದ ಮುಖಂಡ ತೇಗೂರು ಜಗದೀಶ್,  ಮಾಜಿ ಸಿಎಂ ಹಿಂದುಳಿದ ವರ್ಗಗಳ ಹರಿಹಾರ ಎಂದು ಬಣ್ಣಿಸಿದರು.  ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ ಎಂದರು.

ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸಿದ ಸೈಯದ್ ಹನೀಫ್, ಕೆ.ಮಹಮ್ಮದ್ ಮತ್ತು ಸಿ.ಎನ್.ಅಕ್ಮಲ್ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಯಾರೂ ಮರೆಯುವಂತಿಲ್ಲ.

ವೀರಶೈವ ಸಮಾಜದ ಪ್ರತಿನಿಧಿಗಳಾದ ವಿಜಯಕುಮಾರ್, ಉಮೇಶ್, ಪಿಗ್ಮಿ ರಾಜಣ್ಣ ಮಾತನಾಡಿ, ರೈತರ ಹಿತಾಸಕ್ತಿ ಹಾಗೂ ಸಮಾಜ ಸುಧಾರಕ ಬಸವಣ್ಣನವರ ಜಾತ್ಯತೀತ ತತ್ವಗಳನ್ನು ಕಾಪಾಡಲು ಸಿದ್ದರಾಮಯ್ಯ ಶ್ರಮಿಸಿದ್ದಾರೆ ಎಂದರು. 

ಮಾಜಿ ಎಂಎಲ್ಸಿ ಎ.ವಿ.ಗಾಯತ್ರಿ ಶಾಂತೇಗೌಡ, ಜಿಲ್ಲಾ ಅಹಿಂದ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಶಾಂತೇಗೌಡ, ಜಿಲ್ಲಾ ಕುರುಬರ ಸಂಘದ ಮುಖಂಡ ಕೆ.ಎಂ.ಮಂಜುನಾಥ್, ಮಾಜಿ ಜಿಪಂ ಅಧ್ಯಕ್ಷರಾದ ಎ.ಎನ್.ಮಹೇಶ್, ರೇಖಾ ಹುಲಿಯಪ್ಪಗೌಡ, ಸಿಎಂಸಿ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ, ಮಾಜಿ ಜಿಪಂ ಸದಸ್ಯರಾದ ಕೆ.ವಿ.ಮಂಜುನಾಥ್, ಹೇಮಾವತಿ, ಇತರರು ಎಲ್ಲರ ಸಹಕಾರ ಕೋರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT