ರಾಜ್ಯ

ಕೊಡಗು: ಕಾಡಾನೆ ದಾಳಿಯಿಂದ ಕಾರ್ಮಿಕ ಸಾವು

Sumana Upadhyaya

ಮಡಿಕೇರಿ: ಕಾಫಿನಾಡು ಕೊಡಗಿನಲ್ಲಿ ಕಾಡಾನೆ ದಾಳಿಗೆ ಎಸ್ಟೇಟ್ ಕಾರ್ಮಿಕ ಮೃತಪಟ್ಟಿದ್ದಾರೆ. ತಿತಿಮತಿ ಸಮೀಪದ ಕೋಣನಕಟ್ಟೆ ಎಂಬಲ್ಲಿ ಇಂದು ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. 

ಧನುಗಾಲ ಗ್ರಾಮದ ನಿವಾಸಿ ಯರವರ ಚಾಮ (48) ಮೃತಪಟ್ಟ ವ್ಯಕ್ತಿ. ಗ್ರಾಮಸ್ಥರು ಹಾಗೂ ರೈತ ಸಂಘದ ಸದಸ್ಯರು ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಆನೆಯನ್ನು ಕೂಡಲೇ ಹಿಡಿಯುವಂತೆ ಒತ್ತಾಯಿಸಿದರು.

ಚಾಮ ದಕ್ಷಿಣ ಕೊಡಗಿನ ಕಾಫಿ ಎಸ್ಟೇಟ್‌ಗಳಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಶುಕ್ರವಾರ ಸಂಜೆ ಮತ್ತೊಬ್ಬ ಗ್ರಾಮದ ಸಿದ್ದಪ್ಪ ಅವರೊಂದಿಗೆ ಪಿರಿಯಾಪಟ್ಟಣಕ್ಕೆ ಭೇಟಿ ನೀಡಿ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಶನಿವಾರ ಬೆಳಗ್ಗೆ ಇಬ್ಬರೂ ಸ್ಕೂಟರ್‌ನಲ್ಲಿ ಧನುಗಾಲ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. 

ಮಾರ್ಗಮಧ್ಯೆ ಕೋಣನಕುಂಟೆ ಬಳಿ ಕಾಡಾನೆಯೊಂದು ರಸ್ತೆ ದಾಟುತ್ತಿರುವುದು ಕಂಡು ಬಂತು. ಸಿದ್ದಪ್ಪ ಸ್ಕೂಟರ್‌ನಲ್ಲಿ ಹೋಗುತ್ತಿದ್ದು, ವಾಹನವನ್ನು ರಸ್ತೆ ಬದಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಚಾಮ ಓಡಿ ಹೋಗುತ್ತಿದ್ದಾಗ ಒಂಟಿ ಆನೆ ದಾಳಿ ಮಾಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ವೇಳೆ ಗ್ರಾಮಸ್ಥರು ಹಾಗೂ ಜಿಲ್ಲಾ ರಾಜ್ಯ ರೈತ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಹೆಚ್ಚುತ್ತಿರುವ ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

SCROLL FOR NEXT