ರಾಜ್ಯ

ಮೆಟ್ರೋ ನಿಲ್ದಾಣದ ಗ್ರಾನೈಟ್ ನೆಲದ ಮೇಲೆ ಜಾರಿಬಿದ್ದ ಮಹಿಳೆ, ಪಾದದ ಮೂಳೆ ಮುರಿತ

Nagaraja AB

ಬೆಂಗಳೂರು: ರಾಜರಾಜೇಶ್ವರಿನಗರ ಮೆಟ್ರೋ ನಿಲ್ದಾಣದಲ್ಲಿ ಇತ್ತೀಚೆಗೆ 50 ವರ್ಷದ ಗೃಹಿಣಿಯೊಬ್ಬರು ಗ್ರಾನೈಟ್ ನೆಲದ ಮೇಲೆ ಜಾರಿ ಬಿದ್ದು ಎಡ ಪಾದದ ಮೂಳೆ ಮುರಿತಕ್ಕೊಳಗಾದ ಘಟನೆ ನಡೆದಿದೆ. ಆ ಮಹಿಳೆ ಈಗ ಸಂಪೂರ್ಣವಾಗಿ ಬ್ಯಾಂಡೇಜ್ ಮಾಡಿದ ಪಾದದೊಂದಿಗೆ ಮತ್ತು ಐದು ವಾರಗಳ ಬೆಡ್‌ರೆಸ್ಟ್‌ನಲ್ಲಿದ್ದಾಳೆ. ಮೆಟ್ರೋ ನಿಲ್ದಾಣಗಳ ಒಳಗೆ ಹೊಳೆಯುವ ಗ್ರಾನೈಟ್ ನೆಲದ ಮೇಲೆ ಬೀಳುವುದು ನಿತ್ಯದ ಘಟನೆಯಾಗಿದೆ ಎಂದು ಕೆಲವು ಪ್ರಯಾಣಿಕರು ಹೇಳುತ್ತಾರೆ.

ಕಳೆದ ಸೋಮವಾರ, ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣದಿಂದ ತನ್ನ ಪೋಷಕರು ಕರೆದುಕೊಂಡು ಬರಲು ಹೋಗಿದ್ದಾಗ, ನನ್ನ ತಾಯಿ ಕಪ್ಪು ಗ್ರಾನೈಟ್ ನೆಲದ ಮೇಲೆ ನಡೆದಾಗ, ಜಾರಿಬಿದ್ದು ಪಾದದ ಮೂಳೆ ಮುರಿದಿತ್ತು. ಮರುದಿನ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ 2 ಇಂಚು ಆಳದ ಮೂಳೆ ಮುರಿತವಾಗಿರುವುದು ಪತ್ತೆಯಾಯಿತು. ಇದೇ ರೀತಿ ಹಲವು ಪ್ರಯಾಣಿಕರು ಬೀಳುತ್ತಿರುವುದನ್ನು ಆಗಾಗ್ಗೆ ನೋಡುತ್ತಿರುವುದಾಗಿ ಓರ್ವ ಮೆಟ್ರೋ ಸಿಬ್ಬಂದಿ ಹೇಳಿರುವುದಾಗಿ ಕೌಶಿಕ್ ತಿಳಿಸಿದರು.

ಮಂಗಳವಾರ ಆರ್ ಆರ್ ನಗರ ನಿಲ್ದಾಣವನ್ನು ಪರಿಶೀಲಿಸಲಾಗುವುದು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ. 

ಮೈಸೂರು ಮೆಟ್ರೋ ನಿಲ್ದಾಣದಲ್ಲಿ ನಾನು ಕೂಡಾ ಕೆಟ್ಟದಾಗಿ ಬಿದಿದ್ದೆ. ನೇರಳೆ ಮಾರ್ಗದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಲೇ ಇವೆ ಎಂದು ಪ್ರಯಾಣಿಕರಾದ ರಾಣಿ ಕಾರ್ತಿಕ್ ಹೇಳಿದರು. ಆದರೆ, ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ತಿಳಿಸಿದ್ದಾರೆ.

SCROLL FOR NEXT