ರಾಜ್ಯ

ವಿವಾದದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ: ಪ್ರಧಾನಿ ಮೋದಿ ವೇದಿಕೆಯಲ್ಲಿ ಯೋಗ ಮಾಡಲು ಯದುವೀರ್‌ಗೆ ಆಹ್ವಾನ

Shilpa D

ಮೈಸೂರು: ಜೂನ್ 21 ರಂದು 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಮಧ್ಯೆ ಯೋಗ ವೇದಿಕೆ ಹಂಚಿಕೊಳ್ಳುವ ವಿಚಾರ ಕುರಿತು ಸಾಕಷ್ಟು  ಚರ್ಚೆಯಾಗಿತ್ತು.
 
8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಅರಮನೆ ಆವರಣದಲ್ಲಿ ನಡೆಯಲಿರುವ ಬೃಹತ್ ಯೋಗ ಪ್ರದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪಾಲ್ಗೊಳ್ಳಲು ಮೈಸೂರು ರಾಜವಂಶಸ್ಥರಿಗೆ ಆಹ್ವಾನ ನೀಡಲಾಗಿದೆ.

ಈ ಹಿಂದೆ ಯೋಗ ವೇದಿಕೆಗೆ ಐವರಿಗೆ ಮಾತ್ರ ಅವಕಾಶ ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿತ್ತು.  ಪ್ರಧಾನಮಂತ್ರಿ,‌ ಸಿಎಂ, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ‌ ಹಾಗೂ ಕೇಂದ್ರ ಆಯುಷ್ ಮಂತ್ರಿಗಳು‌ ಯೋಗಾಭ್ಯಾಸದಲ್ಲಿ‌ ಪಾಲ್ಗೊಳ್ಳಲಿದ್ದು, ಇದೀಗ ರಾಜ್ಯ ಸರ್ಕಾರ ಗಣ್ಯರ ಪಟ್ಟಿಯಲ್ಲಿ ಯದುವೀರ್ ಹಾಗೂ ಪ್ರಮೋದಾದೇವಿ ಅವರ ಹೆಸರು ಸೇರಿಸಿದೆ.

ಯೋಗಾಭ್ಯಾಸದ ನಂತರ ಮೈಸೂರು ಅರಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯಲಿದ್ದು, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆಹ್ವಾನ‌ದ ಮೇರೆಗೆ ಪ್ರಧಾನಿ ಮೋದಿ ಅರಮನೆಗೆ ಭೇಟಿ ನೀಡಲಿದ್ದಾರೆ. ಸುಮಾರು ಒಂದು ಗಂಟೆಗಳ‌ ಕಾಲ ಅರಮನೆಯಲ್ಲಿ ರಾಜ ವಂಶಸ್ಥರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ.

SCROLL FOR NEXT