ರಾಜ್ಯ

ದ್ವಿತೀಯ ಪಿಯು ಫಲಿತಾಂಶ: ಬೆಂಗಳೂರಿನ ಟಾಪರ್ ವಿದ್ಯಾರ್ಥಿಗಳು

Nagaraja AB

ಬೆಂಗಳೂರು: ವಾಣಿಜ್ಯ, ವಿಜ್ಞಾನ ಮತ್ತು ಕಲಾ ವಿಭಾಗಗಳಲ್ಲಿ ಅಸಾಧಾರಣ ಅಂಕಗಳೊಂದಿಗೆ ಬೆಂಗಳೂರಿನ ವಿದ್ಯಾರ್ಥಿಗಳು ದ್ವಿತೀಯ ಪಿಯು ಟಾಪರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಜೈನ್ ಪಿಯು ಕಾಲೇಜಿನ ಮಾನವ್ ವಿನಯ್ ಕೇಜ್ರಿವಾಲ್, ನೀಲು ಸಿಂಗ್ (ಬಿಜಿಎಸ್ ಪಿಯು ಕಾಲೇಜು), ಆಕಾಶ್ ದಾಸ್ (ಸೇಂಟ್ ಕ್ಲಾರೆಟ್ ಕಾಂಪೋಸಿಟ್ ಪಿಯು ಕಾಲೇಜು) ಮತ್ತು ನೇಹಾ ಬಿಆರ್ (ಚಿಕ್ಕಬಳ್ಳಾಪುರದ ಎಸ್‌ಬಿಜಿಎನ್‌ಎಸ್ ಗ್ರಾಮೀಣ ಸಂಯುಕ್ತ ಪಿಯು ಕಾಲೇಜು) 596 ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ಸಿಮ್ರಾನ್‌ ಶೇಷರಾವ್‌ 598 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದರೆ,  ಬಳ್ಳಾರಿ ಜಿಲ್ಲೆಯ ಇಂಡು ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ಶ್ವೇತಾ ಭೀಮಾಶಂಕರ ಭೈರಗೊಂಡ ಮತ್ತು ಮಡಿವಾಳರ ಸಹನಾ ಕಲಾ ವಿಭಾಗದಲ್ಲಿ 594 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

 ಶಿಕ್ಷಕರು ಒದಗಿಸಿದ ಅಧ್ಯಯನದ ಮೆಟಿರಿಯಲ್ ಜೊತೆಗೆ ಅವರ ಸ್ವಂತ ನೋಟ್ ಸಿದ್ಧಪಡಿಸಿಕೊಂಡು ಅಧ್ಯಯನ ನಡೆಸಿದ್ದರಿಂದ  ಅಸಾಮಾನ್ಯ ಅಂಕಗಳನ್ನು ಪಡೆಯಲು ನೆರವಾಗಿದೆ ಎಂದು ಕೇಜ್ರಿವಾಲ್ ಹೇಳಿದರು. 

ಬೆಂಗಳೂರಿನ ಜೆಪಿ ನಗರ ಎರಡನೇ ಹಂತದ ನಿವಾಸಿಯಾಗಿರುವ ಅವರು ತಮ್ಮ ಪ್ರಾಂಶುಪಾಲರಾದ ಡಾ.ನಳಿನಿ ಸತೀಶ್ ಚಂದ್ರ, ಪೋಷಕರಾದ ಮಾಧುರಿ ಕೇಜ್ರಿವಾಲ್, ಗೃಹಿಣಿ ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ವಿನಯ್ ಕೇಜ್ರಿವಾಲ್  ಅವರಿಗೆ ಕೃತಜ್ಞತೆ ಸಲ್ಲಿಸಿದರು.  

ಕೇಜ್ರಿವಾಲ್  ಬಿಕಾಂ ಅಧ್ಯಯನಕ್ಕೆ ಸೇರಲು ಬಯಸಿದ್ದು,  ಏಕಕಾಲದಲ್ಲಿ CA, CMA  ಮುಂದುವರಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಹಣಕಾಸು ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಗುರಿಯಾಗಿಸಿಕೊಂಡಿದ್ದಾರೆ.
 

SCROLL FOR NEXT