ರಾಜ್ಯ

ಬೆಂಗಳೂರು: ಅಕ್ರಮ ಎಸಗಿದ 7 ಜೈಲು ಅಧಿಕಾರಿಗಳ ವರ್ಗಾವಣೆ

Manjula VN

ಬೆಂಗಳೂರು: ಅಕ್ರಮ ಎಸಗಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ 7 ಕಾರಾಗೃಹದ ಅಧಿಕಾರಿಗಳನ್ನು ರಾಜ್ಯ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡಲಾಗಿದೆ.

ಎನ್ ಅಶೋಕ್ ಅವರನ್ನು ವಿಜಯಪುರ ಜೈಲಿಗೆ, ಎಸ್ ಎನ್ ರಮೇಶ್ ಬಳ್ಳಾರಿಗೆ, ಶಿವಾನಂದ ಕೆ ಗಾಣಿಗೇರ್ ಬೆಳಗಾವಿ ಕಾರಾಗೃಹಕ್ಕೆ, ಉಮೇಶ್ ಆರ್ ದೊಡ್ಡಮನಿ ಮೈಸೂರು ಕಾರಾಗೃಹಕ್ಕೆ, ಲೋಕೇಶ್ ಧಾರವಾಡಕ್ಕೆ ಪಿ. ಭೀಮಣ್ಣ ದೇವಪ್ಪ ನೇದಲಗಿ ಶಿವಮೊಗ್ಗ ಜೈಲಿಗೆ, ಮಹೇಶ ಸಿದ್ದನಗೌಡ ಪಾಟೀಲ ಕಲಬುರಗಿ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸವಲತ್ತುಗಳಿಗಾಗಿ ಹಿಸ್ಟರಿ ಶೀಟರ್ ವೊಬ್ಬ ಜೈಲು ಸಿಬ್ಬಂದಿಗಳಿಗೆ ಹಣ ಹಂಚುತ್ತಿದ್ದ ವಿಡಿಯೋವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದಷ್ಟೇ ಅಲ್ಲದೆ ಕ್ಯಾಂಟೀನ್ ಸಿಬ್ಬಂದಿಗಳು ಕೈದಿಗಳಿಗೆ ದಿನಸಿ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.

ಈ ಸಂಬಂಧ ಜೈಲಿನಲ್ಲಿದ್ದ ಕೈದಿಯೊಬ್ಬರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಗಮನ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಜನವರಿ 29 ರಂದು ತನಿಖೆಗೆ ಆದೇಶಿಸಿತ್ತು. ತನಿಖೆಗೆ ಹೆಚ್ಚುವರಿ ಪೊಲೀಸ್ ಎಸ್ ಮುರುಗನ್ ಅವರನ್ನು ನೇಮಿಸಿತ್ತು.

ತನಿಖೆಯನ್ನು ಪೂರ್ಣಗೊಳಿಸಿರುವ ಮುರುಗನ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, 18 ಜೈಲು ಅಧಿಕಾರಿಗಳು ಅಕ್ರಮ ಎಸಗಿರುವುದಾಗಿ ತಿಳಿಸಿ, ಇವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಇದೀಗ ಸರ್ಕಾರ 7 ಮಂದಿ ಜೈಲು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

SCROLL FOR NEXT