ರಾಜ್ಯ

ಗೌರಿಬಿದನೂರು: ಅಧಿಕೃತ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಪೊಲೀಸ್ ಠಾಣೆಯ ಅಧಿಕಾರಿಗಳಿಗೆ 'ಬೀರಾ' ನೆರವು!

Srinivas Rao BV

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಇಲಿಗಳ ಹಾವಳಿಯಿಂದಾಗಿ ಅನೇಕ ದಾಖಲೆಗಳು ಅಸುರಕ್ಷಿತವಾಗಿರುವ ಅನೇಕ ಉದಾಹರಣೆಗಳಿವೆ. ಆದರೆ ಬೆಂಗಳೂರಿನಿಂದ 74 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಚಿಂತೆ ಇಲ್ಲ. ಕಾರಣ ಬೀರಾ.

ಸರ್ಕಾರಿ ದಾಖಲೆಗಳನ್ನೊಳಗೊಂಡ ಕಾಗದ ಪತ್ರಗಳನ್ನು ಕಚ್ಚಿ ತುಂಡರಿಸುವುದಕ್ಕೆ ಇಲಿಗಳಿಗೆ  ಬೀರಾ ಎಂಬ ಬೆಕ್ಕು ಅಡ್ಡಿಯಾಗಿದೆ. ಕಳೆದ ಒಂದು ವಾರದಲ್ಲಿ ಈ ಬೆಕ್ಕಿಗೆ ಮತ್ತೊಂದು ಬೆಕ್ಕು ಜೊತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಎಲ್ಲರ ಗಮನದ ಕೇಂದ್ರಬಿಂದುವಾಗಿದೆ.

ಸರ್ಕಲ್ ಇನ್ಸ್ ಪೆಕ್ಟರ್ ಎಸ್ ಡಿ ಶಶಿಧರ ಅವರು ರೆಕಾರ್ಡ್ ರೂಮ್ ನಲ್ಲಿ ಇಲಿಗಳ ಹಾವಳಿಯ ಬಗ್ಗೆ ಆತಂಕಗೊಂಡಿದ್ದರು. ಆಗ ರೈಟರ್ ಗುರುರಾಜು ಅವರು ತಮ್ಮ ನೆರೆಮನೆಯಿಂದ 6 ತಿಂಗಳ ಹಿಂದೆ ಬೆಕ್ಕು ಒಂದನ್ನು ತಂದಿದ್ದರು. ಅದಕ್ಕೆ ಬೀರಾ ಎಂದು ನಾಮಕರಣ ಮಾಡಲಾಗಿತ್ತು. ಅದಕ್ಕೆ ಹಾಲು, ಅನ್ನ, ಹಾಗೂ ಆಗಾಗ ಚಿಕನ್ ತುಂಡುಗಳನ್ನು ನೀಡಲಾಗುತ್ತಿತ್ತು. ಇದರ ಜೊತೆಗೆ ಬೀರಾ ಇಲಿಗಳನ್ನು ಹಿಡಿಯುತ್ತದೆ. ಗ್ರಾಮೀಣ ಭಾಗದ ಪೊಲೀಸ್ ಠಾಣೆಯಲ್ಲಿ ಇಲಿಗಳ ಹಾವಳಿ ಸಾಮಾನ್ಯವಾದುದ್ದಾಗಿದ್ದು ಇಲ್ಲಿಯೂ ದಾಖಲೆಗಳನ್ನು ಹಾನಿಗೊಳಿಸಿತ್ತಾ? ಎಂಬ ಪ್ರಶ್ನೆಗೆ ಇನ್ಸ್ ಪೆಕ್ಟರ್ ಅವರ ಉತ್ತರ ಇಲ್ಲ ಎಂಬುದಾಗಿದೆ.

ನಾವು ತುಂಬಾ ಹಳೆಯ ಪ್ರಕರಣಗಳ ಕಡತಗಳನ್ನು ರೆಕಾರ್ಡ್ ರೂಮ್ ಗೆ ಹಾಕುತ್ತೇವೆ. ತುಂಬಾ ಮಹತ್ವದ ಕಡತಗಳನ್ನು ಜೋಪಾನವಾಗಿಡುತ್ತೇವೆ. ಹಾಗಾಗಿ ಇಲಿಗಳ ಕೈಗೆ ಸಿಗುವುದಿಲ್ಲ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಇಲ್ಲಿನ ಪೊಲೀಸ್ ಠಾಣೆಯ ಬೆಕ್ಕು ಬೀರಾ, ಅತ್ಯಂತ ಸ್ನೇಹಯುತವಾಗಿದ್ದು, ಒತ್ತಡ ನಿವಾರಣೆಗೂ ಸಹಕಾರಿಯಾಗಿದೆ. ಇಲ್ಲಿನ ಮಹಿಳಾ ಸಿಬ್ಬಂದಿಗಳಿಗೆ ಈ ಬೆಕ್ಕು ಮೆಚ್ಚಿನದ್ದಾಗಿದೆ.

SCROLL FOR NEXT