ರಾಜ್ಯ

ಬೆಂಗಳೂರು ನಾಗರಿಕರಿಗೆ ಅಂಚೆ ಇಲಾಖೆಯ ಸೇವೆ: ಮನೆಯಿಂದಲೇ ಸ್ಪೀಡ್ ಪೋಸ್ಟ್ ಪಾರ್ಸೆಲ್ ಸಂಗ್ರಹ ಸೌಲಭ್ಯ ಶೀಘ್ರದಲ್ಲೆ

Sumana Upadhyaya

ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿ ನೀವು ಪಾರ್ಸೆಲ್ ಅಥವಾ ಪತ್ರಗಳನ್ನು ಸ್ಪೀಡ್ ಪೋಸ್ಟ್(speed post) ಮೂಲಕ ಕಳುಹಿಸಲು ಅಂಚೆ ಕಚೇರಿಗೆ ಹೋಗಬೇಕೆಂದಿಲ್ಲ. ನಿಮ್ಮ ಮನೆ ಬಾಗಿಲಿಗೆ ಬಂದು ಸಂಗ್ರಹಿಸುತ್ತಾರೆ.

ಖಾಸಗಿ ಕೊರಿಯರ್ ಕಂಪನಿಯೊಂದಿಗಿನ ಒಪ್ಪಂದದಿಂದಾಗಿ ಬೆಂಗಳೂರು ನಗರದ ಯಾವ ಭಾಗದಿಂದಲಾದರೂ ದೇಶದ ಯಾವುದೇ ಭಾಗಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕಾದ ಪತ್ರಗಳು ಅಥವಾ ಪಾರ್ಸೆಲ್‌ಗಳನ್ನು ಶೀಘ್ರದಲ್ಲೇ ನಿಮ್ಮ ಮನೆಯಿಂದ ಪಡೆದುಕೊಳ್ಳಬಹುದು. ಇಂದಿರಾ ನಗರದಲ್ಲಿ ಪ್ರಾಯೋಗಿಕ ಮಾದರಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಭಾರತೀಯ ಅಂಚೆ ಕಚೇರಿ ಶೀಘ್ರದಲ್ಲೇ ನಗರದ ಇತರ ಭಾಗಗಳಿಗೆ ಸೇವೆಯನ್ನು ವಿಸ್ತರಿಸಲಿದೆ.

ಕರ್ನಾಟಕ ಅಂಚೆ ಇಲಾಖೆಯು ಕೊರಿಯರ್ ಸೇವೆ ಸಂಪರ್ಕ ಕಂಪೆನಿಯಾದ ಕೊರೆಯೊ ಜೊತೆಗೆ ಕೈಜೋಡಿಸಿದೆ. ಒಬ್ಬರು ಅದರ ವೆಬ್‌ಸೈಟ್ ಮೂಲಕ ಪಿಕಪ್ ನ್ನು ಬುಕ್ ಮಾಡಬಹುದು. ಭವಿಷ್ಯದಲ್ಲಿ ಆ್ಯಪ್ ಕೂಡ ರಚಿಸಲಾಗುವುದು. ಅಂಚೆ ನಿರ್ದೇಶನಾಲಯದ ನಿರ್ದೇಶನಗಳನ್ನು ಅನುಸರಿಸಿ ಎರಡು ತಿಂಗಳ ಹಿಂದೆ ಇಂದಿರಾ ನಗರದಲ್ಲಿ ಪ್ರಾಯೋಗಿಕವಾಗಿ ನಡೆಸಲಾಗಿದೆ ಎಂದು ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್, ಬಿಸಿನೆಸ್ ಡೆವಲಪ್‌ಮೆಂಟ್, ವಿ ತಾರಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. 

ಇದು ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈಗ ಅದನ್ನು ನಗರದ ಎಲ್ಲಾ ಇತರ ಅಂಚೆ ಕಚೇರಿಗಳಿಗೆ ಶೀಘ್ರದಲ್ಲೇ ವಿಸ್ತರಿಸುತ್ತೇವೆ ಎಂದು ಹೇಳಿದರು.

ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ವೃತ್ತದ ರಾಜೇಂದ್ರ ಎಸ್ ಕುಮಾರ್ ಈ ಸೇವೆ ನೀಡುವುದನ್ನು ಖಚಿತಪಡಿಸಿದ್ದಾರೆ. ಕೋರೆಯೊದ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ವಿನ್ಸ್ ಎನ್ ಜೋಸ್, ನಾವು ಪಿಕಪ್‌ಗಾಗಿ ಡಂಜೊ ಸೇವೆಗಳನ್ನು ಬಳಸಿಕೊಳ್ಳುತ್ತೇವೆ. ನಗರದ ಪ್ರತಿ ಮನೆಯ 2-3 ಕಿ.ಮೀ ಅಂತರದಲ್ಲಿ ಅಂಚೆ ಕಚೇರಿ ಇದೆ. ಮನೆ ಬಾಗಿಲಿನಿಂದ ಪಾರ್ಸೆಲ್ ಅಥವಾ ದಾಖಲೆಗಳನ್ನು ತೆಗೆದುಕೊಂಡು ಸ್ಕ್ಯಾನ್ ಮಾಡಲಾಗುತ್ತದೆ. ತ್ವರಿತ ಸ್ವೀಕೃತಿಯನ್ನು ನೀಡಲಾಗುತ್ತದೆ. ಅದನ್ನು ತೆಗೆದುಕೊಳ್ಳುವ ವ್ಯಕ್ತಿಯು ಅದನ್ನು ಸ್ಥಳೀಯ ಅಂಚೆ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುತ್ತಾರೆ. 2 ಕಿ.ಮೀ.ಗೆ 25 ರೂ, 3 ಕಿ.ಮೀ.ಗೆ 30 ರೂಪಾಯಿಗಳನ್ನು ಸೇವಾಶುಲ್ಕವಾಗಿ ತೆಗೆದುಕೊಳ್ಳುತ್ತೇವೆ. ಇಂದಿರಾನಗರದಲ್ಲಿ, 27 ಬುಕಿಂಗ್‌ಗಳನ್ನು ಮಾಡಲಾಗಿದೆ. ಭಾರತದಾದ್ಯಂತ ಪಾರ್ಸೆಲ್‌ಗಳನ್ನು ರವಾನಿಸಲಾಗಿದೆ ಒಂದು ಅಥವಾ ಎರಡು ವಾರಗಳಲ್ಲಿ ನಾವು ಬೆಂಗಳೂರಿನಾದ್ಯಂತ ಇದನ್ನು ವಿಸ್ತರಿಸುತ್ತೇವೆ ಎಂದರು.

ಕೊರೆಯೊ ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಏಕಕಾಲದಲ್ಲಿ ಸೇವೆಯನ್ನು ಪ್ರಾರಂಭಿಸುತ್ತಿದೆ ಎಂದು ಅವರು ಹೇಳಿದರು. ಈಗಿನಂತೆ, ದೇಶೀಯ ರವಾನೆಗಳನ್ನು ಮಾತ್ರ ಸಂಗ್ರಹಿಸಲಾಗುತ್ತದೆ ಮತ್ತು ಭವಿಷ್ಯದ ಯೋಜನೆಗಳು ಅಂತರಾಷ್ಟ್ರೀಯ ಸ್ಪೀಡ್ ಪೋಸ್ಟ್ ಆರ್ಡರ್‌ಗಳನ್ನು ಬುಕ್ ಮಾಡುವುದನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

ಅಕ್ರಮ ವಸ್ತುಗಳನ್ನು ಬುಕ್ ಮಾಡುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಅಂಚೆ ಇಲಾಖೆಯು ತಪಾಸಣೆ ನಡೆಸುತ್ತದೆ ಎಂದರು. ಬಳಕೆದಾರರು ಸೇವೆಯನ್ನು ಪಡೆಯಲು www.coreyo.com ಗೆ ಲಾಗ್ ಇನ್ ಆಗಬಹುದು.

SCROLL FOR NEXT